Advertisement

ಕೃಷ್ಣ ಜನ್ಮಾಷ್ಟಮಿ ಸಂಭ್ರಮ

07:10 AM Aug 15, 2017 | Harsha Rao |

ಮಂಗಳೂರು/ಉಡುಪಿ: ಕರಾವಳಿಯ ವಿವಿಧ ಭಾಗಗಳಲ್ಲಿ ಚಾಂದ್ರಮಾನ ಮಾಸ ಕ್ರಮದಂತೆ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಭಕ್ತಿ ಸಡಗರದಿಂದ ಆಚರಿಸಲಾಯಿತು. ವಿವಿಧ ದೇವಸ್ಥಾನಗಳಲ್ಲಿ ಸೋಮವಾರ ಬೆಳಗ್ಗಿನಿಂದಲೇ ಶ್ರೀ ಕೃಷ್ಣನಿಗೆ ಪೂಜೆ ಪುನಸ್ಕಾರಗಳು ನಡೆದವು. ಜಿಲ್ಲಾಡಳಿತದ ವತಿಯಿಂದ ಮಂಗಳೂರಿನ ಮಿನಿ ಪುರಭವನ, ಉಡುಪಿ ಸ.ಬಾ.ಪ.ಪೂ.ಕಾಲೇಜಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಮ್ಮಿಕೊಳ್ಳಲಾಯಿತು.

Advertisement

ಮಂಗಳೂರಿನ ಸಂಘನಿಕೇತನ, ಕೊಟ್ಟಾರ ದ್ವಾರಕನಗರದ ಶ್ರೀ ಕೃಷ್ಣ ಜ್ಞಾನೋದಯ ಭಜನ ಮಂದಿರ, ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ಸಹಿತ ವಿವಿಧೆಡೆ ಜನ್ಮಾಷ್ಟಮಿ ಆಚರಿಸಲಾಯಿತು. ಉಜಿರೆ, ಲಾೖಲ, ಸುಳ್ಯ ಚೆನ್ನಕೇಶವ ದೇವಸ್ಥಾನ, ಸುಬ್ರಹ್ಮಣ್ಯ ದೇಗುಲ ಸಹಿತ ವಿವಿಧೆಡೆ ಅಷ್ಟಮಿ ಆಚರಣೆ ಜರಗಿತು. ಜಿಲ್ಲೆಯ ಬಹುತೇಕ ಕಡೆ ಮೊಸರು ಕುಡಿಕೆ ಉತ್ಸವ, ಶ್ರೀ ಕೃಷ್ಣ ವೇಷ ಸ್ಪರ್ಧೆ ಹಾಗೂ ಇಸ್ಕಾನ್‌ ವತಿಯಿಂದ ಶ್ರೀ ಕೃಷ್ಣಾಷ್ಟಮಿ ಆ. 15ರಂದು ನಡೆಯಲಿದೆ. 

ಉಡುಪಿ ಶ್ರೀಕೃಷ್ಣ ಮಠದಲ್ಲಿ  ಬೆಳಗ್ಗೆ ಲಕ್ಷತುಳಸೀ ಅರ್ಚನೆಯನ್ನು ಪರ್ಯಾಯ ಶ್ರೀಪಾದರು ನೆರವೇರಿಸಿದರು. ಮಧ್ಯರಾತ್ರಿ ಪೂಜೆ ನಡೆಸಿದ ಬಳಿಕ ಭಕ್ತರು ಅಘÂì ಪ್ರದಾನ ನಡೆಸಿದರು. ಗೌಡ ಸಾರಸ್ವತ ಸಮಾಜದ ಎಲ್ಲ ದೇವಸ್ಥಾನಗಳು, ಭಜನ ಮಂದಿರಗಳಲ್ಲಿ ವಿಶೇಷ ಪೂಜೆ, ಭಜನೆ, ಅಘÂìಪ್ರದಾನಗಳು ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next