ಲಕ್ನೋ: ಉತ್ತರಪ್ರದೇಶದ ಮಥುರಾದ ಕೃಷ್ಣ ಜನ್ಮಭೂಮಿ ಸಮೀಪದ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ರೈಲ್ವೆ ಅಧಿಕಾರಿಗಳು ಕೈಗೊಂಡಿರುವ ಧ್ವಂಸ ಕಾರ್ಯಾಚರಣೆಗೆ ಸಂಬಂಧಿಸಿದಂತೆ 10 ದಿನಗಳವರೆಗೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸುಪ್ರೀಂಕೋರ್ಟ್ ಬುಧವಾರ (ಆಗಸ್ಟ್ 16) ಆದೇಶ ನೀಡಿದೆ.
ಇದನ್ನೂ ಓದಿ:Snake: ಹೂಕೋಸಿನ ಒಳಗೆ ಅವಿತ್ತಿದ್ದ ಹಾವು! ಸೊಪ್ಪು ತರಕಾರಿ ಖರೀದಿಸುವಾಗ ಇರಲಿ ಎಚ್ಚರ!
ಸುಪ್ರೀಂಕೋರ್ಟ್ ನ ಜಸ್ಟೀಸ್ ಅನಿರುದ್ಧ ಬೋಸ್, ಜಸ್ಟೀಸ್ ಸಂಜಯ್ ಕುಮಾರ್ ಮತ್ತು ಎಸ್ ವಿಎನ್ ಭಟ್ಟಿ ಅವರನ್ನೊಳಗೊಂಡ ಪೀಠ, ಕೇಂದ್ರ ಸರ್ಕಾರ ಮತ್ತು ಇಲಾಖೆಗೆ ನೋಟಿಸ್ ಜಾರಿಗೊಳಿಸಿದೆ.
ಕಾರ್ಯಾಚರಣೆ ನಡೆಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹತ್ತು ದಿನಗಳವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸುಪ್ರೀಂ ಪೀಠ ಸೂಚನೆ ನೀಡಿರುವುದಾಗಿ ವರದಿಯಾಗಿದೆ.
ಈಗಾಗಲೇ ಕಾರ್ಯಾಚರಣೆ ಭಾಗವಾಗಿ ಸುಮಾರು ನೂರು ಮನೆಗಳು ಧ್ವಂಸಗೊಂಡಿದ್ದು, ಇನ್ನೂ 80 ಮನೆಗಳು ಆ ಪ್ರದೇಶದಲ್ಲಿ ಇರುವುದಾಗಿ ಅರ್ಜಿದಾರರ ಪರ ವಕೀಲರಾದ ಯಾಕೂಬ್ ಶಾ ಸುಪ್ರೀಂಕೋರ್ಟ್ ಪೀಠದ ಗಮನಕ್ಕೆ ತಂದಿರುವುದಾಗಿ ವರದಿ ತಿಳಿಸಿದೆ.