Advertisement

ಕೃಷ್ಣಾ ನೀರನ್ನು ವ್ಯರ್ಥ ಮಾಡಲು ತಯಾರಿಲ್ಲ

06:05 AM Jun 25, 2018 | Team Udayavani |

ಮುದ್ದೇಬಿಹಾಳ: ಆಲಮಟ್ಟಿ ಜಲಾಶಯವನ್ನು 524 ಮೀ.ಗೆ ಏರಿಸುವ ವಿಚಾರ ಗಹನವಾದದ್ದು. ಕೃಷ್ಣೆಯಲ್ಲಿ
ಕರ್ನಾಟಕಕ್ಕೆ ಬಳಕೆಗೆ ಸಿಕ್ಕ ನೀರನ್ನು ವ್ಯರ್ಥ ಮಾಡಿಕೊಳ್ಳಲು ನಾವು ತಯಾರಿಲ್ಲ. ಇದಕ್ಕೋಸ್ಕರವೇ ಪುನರ್ವಸತಿ
ಕಾರ್ಯವನ್ನು ಚಾಲೆಂಜ್‌ ಆಗಿ ತೆಗೆದುಕೊಂಡಿದ್ದೇವೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಹೇಳಿದ್ದಾರೆ.

Advertisement

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪುನರ್ವಸತಿ, ಭೂಸ್ವಾಧೀನಕ್ಕೆ ಹಣ ಕೊಡುವುದೇ ದೊಡ್ಡ
ಚಾಲೆಂಜ್‌. ಜಮೀನಿಗೆ ಏಕರೂಪ ದರ ನಿಗದಿಗೆ ಅನೇಕರ ಒತ್ತಡವಿದೆ. ಈ ಬಗ್ಗೆ ಈಗಾಗಲೇ ಕ್ಯಾಬಿನೆಟ್‌ ಸಬ್‌ ಕಮಿಟಿ
ಮಾಡಿದ್ದು, ವರದಿ ತಯಾರಾಗ್ತಿದೆ. ಜಮೀನು ಕಳೆದುಕೊಂಡವರ ಪರಿಹಾರಕ್ಕಾಗಿಯೇ ದೊಡ್ಡ ಮೊತ್ತ ಹೋಗುತ್ತ
ದೆ. ಅಭಿವೃದಿಟಛಿ ಖರ್ಚು ಇದರ ಎರಡರಷ್ಟಾಗಬಹುದು. 1 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣ ಬೇಕು. ಎಲ್ಲವನ್ನೂ
ಗಮನದಲ್ಲಿಟ್ಟುಕೊಂಡು ಕೆಲಸ ಮಾಡಲು ಸಿದ್ಧತೆ ನಡೆದಿದೆ.

ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಹೊಸದಾಗಿ ಮುಳುಗಡೆಯಾಗುವ 188 ಹಳ್ಳಿಗಳ ಮರು ಸಮೀಕ್ಷೆ ಮಾಡಲು
ತಂಡ ಕಳಿಸುವಂತೆ ಇಲಾಖೆ ಕಾರ್ಯದರ್ಶಿಗೆ ಸೂಚಿಸಲಾಗಿದೆ ಎಂದರು. ಉತ್ತರ ಕರ್ನಾಟಕಕ್ಕೆ ಮಲತಾಯಿ
ಧೋರಣೆ ತೋರಿಲ್ಲ. ಕಾವೇರಿಗೆ 2000 ಕೋಟಿ ರೂ.,ಕೃಷ್ಣೆಗೆ 9000 ಕೋಟಿ ರೂ.ಖರ್ಚು ಮಾಡಲಾಗಿದೆ. ಆ
ಭಾಗದ (ದಕ್ಷಿಣ ಕರ್ನಾಟಕ) ಜನ ನಮ್ಮನ್ನು ಉಗೀತಾ ಇದ್ದಾರೆ. ಆದರೂ, ಅವರೆಲ್ಲರಿಂದ ತಪ್ಪಿಸಿಕೊಂಡು ಉತ್ತರ
ಕರ್ನಾಟಕದ ಹಿತ ಕಾಯಲು ಇಲ್ಲಿಗೆ ಬಂದಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next