Advertisement

Udupi ರಥಬೀದಿಯಲ್ಲಿ ಮುಗಿಲು ಮುಟ್ಟಿದ ಕೃಷ್ಣ ಭಕ್ತರ ಸಡಗರ: ವಿಟ್ಠಲನ ಲೀಲೋತ್ಸವ ಸಂಭ್ರಮ

11:03 AM Aug 28, 2024 | Team Udayavani |

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಮಂಗಳವಾರ ನಗರದಲ್ಲಿ ಅದ್ದೂರಿಯಾಗಿ ನಡೆಯಿತು. ಮಧ್ಯಾಹ್ನದ ಬಳಿಕ ನಡೆದ ವಿಟ್ಲಪಿಂಡಿಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ರಥಬೀದಿಯಲ್ಲಿ ಕಂಡುಬಂದರು.

Advertisement

ವಿವಿಧ ವೇಷಧಾರಿಗಳು, ಕೊಂಬು ಕಹಳೆ, ಚೆಂಡೆ, ತಾಸೆಯ ತಾಳಕ್ಕೆ ಹುಲಿವೇಷಧಾರಿಗಳ ನರ್ತನದ ನಡುವೆ ಶ್ರೀಕೃಷ್ಣನ ಮೃಣ್ಮಯ ಮೂರ್ತಿಯ ಲೀಲೋತ್ಸವ ವಿಜೃಂಭಣೆಯಿಂದ ನೆರವೇರಿತು.ಜಿಲ್ಲೆ, ಹೊರಜಿಲ್ಲೆ, ಹೊರರಾಜ್ಯವಷ್ಟೇ ಅಲ್ಲದೆ ವಿದೇಶಿಗರೂ ಈ ಮೆರವಣಿಗೆಯನ್ನು ಕಣ್ತುಂಬಿಕೊಂಡರು. ರಥಬೀದಿ ತುಂಬಾ ಭಕ್ತರಿಂದ ತುಂಬಿ ಹೋಗಿತ್ತು. ಅಷ್ಟಮಠದ ಎಲ್ಲ ಭಾಗಗಳಲ್ಲಿಯೂ ಜನರು ನೆರೆದಿದ್ದರು.

ಕೆಮರಾಗಳಷ್ಟೇ ಅಲ್ಲದೆ ಮೊಬೈಲ್‌ಗ‌ಳ ಮೂಲಕವೂ ರಥಬೀದಿಯ ವಿವಿಧ ದೃಶ್ಯಾವಳಿಗಳನ್ನು ಭಕ್ತರು ಸೆರೆಹಿಡಿದರು.

ಬೆಳಗ್ಗಿನಿಂದಲೇ ಅನ್ನಪ್ರಸಾದ
ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಪಲ್ಲಪೂಜೆ ನೆರವೇರಿಸಿದ ಬಳಿಕ ಅನ್ನಸಂತರ್ಪಣೆಗೆ ಚಾಲನೆ ನೀಡಲಾಯಿತು. ಚಕ್ಕುಲಿ, ಉಂಡೆಗಳು, ಸಾರು, ಸಾಂಬಾರು, ಪಲ್ಯ, ಉಪ್ಪಿನಕಾಯಿ, ಹಾಲುಪಾಯಸ ವಿಶೇಷ ವಾಗಿತ್ತು. ಶ್ರೀಪಾದರು ಭಕ್ತರಿಗೆ ಅನ್ನ ಪ್ರಸಾದ ಬಡಿಸಿದರು. ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿ ಸಿದರು.

ಹುಲಿ ಕುಣಿತ ವೀಕ್ಷಣೆ
ಉಡುಪಿ: ಶ್ರೀ ಶೀರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಮಹೋತ್ಸವವನ್ನು ಹುಲಿ ವೇಷ, ಜಾನಪದ ನೃತ್ಯ ಕಲಾವಿದರನ್ನು ವಿಶೇಷವಾಗಿ ಪ್ರೋತ್ಸಾಹಿಸುವ ಮೂಲಕ ಆಚರಿಸುತ್ತಾ ಬಂದಿದ್ದರು. ಆ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಆಶಯದಂತೆ ಈ ಬಾರಿ ಶ್ರೀ ರಾಘವೇಂದ್ರ ಮಠದ ಮುಂಭಾಗದಲ್ಲಿ ಅನ್ನವಿಟuಲ ವೇದಿಕೆಯಲ್ಲಿ ಅಬ್ಬರದ ಹುಲಿ ಕುಣಿತ ನಡೆಯಿತು.


ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೆàಶತೀರ್ಥ ಶ್ರೀಪಾದರು, ಪರ್ಯಾಯ ಶ್ರೀ ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಒಟ್ಟಿಗೆ ಕೂತು ಹುಲಿಕುಣಿತ ವೀಕ್ಷಿಸಿದರು. ಶ್ರೀಮಠದ ದಿವಾನರಾದ ಉದಯಕುಮಾರ್‌ ಸರಳತ್ತಾಯ, ಶಾಸಕ ಯಶ್‌ಪಾಲ್‌ ಸುವರ್ಣ, ಶ್ರೀಮಠದ ಪಿಆರ್‌ಒ ಶ್ರೀಶಭಟ್‌, ಪ್ರಮುಖರಾದ ಮೋಹನ್‌ ಭಟ್‌ ಮೊದಲಾದವರು ಇದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next