Advertisement

ಕೃಷ್ಣೆ ಸಂಪೂರ್ಣ ಖಾಲಿ: ರಬಕವಿ-ಬನಹಟ್ಟಿ ನೀರಿನ ಬರ

07:27 PM Jun 25, 2023 | Team Udayavani |

ರಬಕವಿ-ಬನಹಟ್ಟಿ : ಕೃಷ್ಣೆಯ ಒಡಲು ಬರಿದಾಗಿದ್ದರಿಂದ ಹಿಪ್ಪರಗಿ ಜಲಾಶಯ ಹಿನ್ನೀರು ನಂಬಿರುವ ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳ ಹಲವಾರು ನಗರ ಗ್ರಾಮಗಳಿಗೆ ಕುಡಿಯುವ ನೀರಿಗೆ ಭರ.

Advertisement

ರಬಕವಿ-ಬನಹಟ್ಟಿ ಅವಳಿ ನಗರಕ್ಕೆ ಈಗಾಗಲೇ ನೀರು ಪೂರೈಕೆಯಾಗದ ಕಾರಣ ನೀರಿನ ಕೊರತೆ ಎದುರಾಗಿದ್ದು, ಜನರು ಖಾಸಗಿ ಕೊಳವೆ ಬಾವಿ ಹಾಗೂ ನಗರಸಭೆಯ ಕೊಳವೆ ಬಾವಿಗಳನ್ನೇ ಅವಲಂಬಿಸಿದ್ದಾರೆ.

ಇದೀಗ ನೀರಿನ ಭವಣೆ ಅಷ್ಟೊಂದು ಪ್ರಮಾಣದಲ್ಲಿಲ್ಲದಿದ್ದರೂ ಕೊಡಗಳನ್ನು ಹೊತ್ತು ನೀರಿಗಾಗಿ ದೂರ ಕ್ರಮಿಸಬೇಕಾದ ಅನಿವಾರ್ಯತೆ ಕೆಲವೆಡೆಯಿದೆ. ಇದೇ ಸಮಸ್ಯೆ ಮುಂದುವರೆದರೆ ಕೊಳವೆ ಬಾವಿಗಳೂ ಸಹಿತ ಬತ್ತಿ ಹೋಗುವ ಸಾಧ್ಯತೆ ಹೆಚ್ಚಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.

ಪೌರಾಯುಕ್ತ ಮನವಿ: ಅವಳಿ ನಗರಾದ್ಯಂತ ನೀರು ಸರಬರಾಜು ಕಾರ್ಯ ಸ್ಥಗಿತಗೊಂಡಿದೆ. ನೀರಿನ ಸಮಸ್ಯೆ ಎದುರಾಗದಂತೆ ಈಗಾಗಲೇ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಪೌರಾಯುಕ್ತ ಅಶೋಕ ಗುಡಿಮನಿ ತಿಳಿಸಿದರು.

ಅಲ್ಲಲ್ಲಿ ಸರ್ಕಾರಿ ಹಾಗೂ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜಾಗುತ್ತಿದೆ. ಕೆಲ ಕಡೆ ಖಾಸಗಿ ವ್ಯಕ್ತಿಗಳು ಕೊಳವೆ ಬಾವಿಯಿಂದ ನೀರು ಪೂರೈಕೆದಾರರ ವಿದ್ಯುತ್ ಬಿಲ್ ನಗರಸಭೆಯೇ ಕಟ್ಟಲಿದ್ದು, ಆತಂಕಪಡುವ ಅಗತ್ಯವಿಲ್ಲವೆಂದರು.

Advertisement

`ಮಹಾ’ ಇಳಿಕೆ: ಮಹಾರಾಷ್ಟ್ರದ ಜಲಾಶಯದಲ್ಲಿ ಸದ್ಯ 11 ಟಿಎಂಸಿಯಷ್ಟು ನೀರು ಮಾತ್ರವಿದೆಯೆಂಬ ಮಾಹಿತಿಯಿದೆ. 103 ಟಿಎಂಸಿಯಷ್ಟು ಸಾಮರ್ಥ್ಯ ಹೊಂದಿರುವ ಕೋಯ್ನಾ ಜಲಾಶಯದಲ್ಲಿ ನೀರಿನ ಮಟ್ಟ ಇಳಿಕೆಯಾಗಿರುವದು ಮಹಾರಾಷ್ಟ್ರ ಹಾಗೂ ಕರ್ನಾಟಕ ರೈತರಲ್ಲಿ ಆತಂಕ ಹೆಚ್ಚಿಸಿದೆ.

ಜೂನ್ ತಿಂಗಳ ಮೊದಲ ವಾರದಲ್ಲಿ ಕೊಂಕಣ ಭಾಗದಲ್ಲಿ ಮಳೆಯಾಗುತ್ತಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮಳೆಯಿಲ್ಲದೆ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.

ನೀರಿಲ್ಲದ ಒಣಗಿದ ಬೆಳೆಗಳು: ಸಾಲ ಮಾಡಿಕೊಂಡು ಬೆಳೆಸಿದ ಕಬ್ಬು ರೈತನ ಹೊಟ್ಟೆಯ ಮೇಲೆ ಬರೆ ಎಳೆದಂತಾಗಿದೆ. ಕಳೆದೆರಡು ಮೂರು ವರ್ಷಗಳಲ್ಲಿ ಕೊರೊನಾ, ಅತಿವೃಷ್ಟಿಯಿಂದ ಕೆಂಗೆಟ್ಟಿರುವ ರೈತನಿಗೆ ಈಗ ಮಳೆಯಾಗದೇ ದೊಡ್ಡ ಸಮಸ್ಯೆಯ ಸುಳಿಗೆ ಸಿಲುಕಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next