Advertisement
ನಗರದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಬರ ನಿರ್ವಹಣೆಗೆ ಹೆಚ್ಚುವರಿ ಹಣ ಬಿಡುಗಡೆ ಮಾಡಿಸಲಿ ಅದು ಬಿಟ್ಟು, ಸತ್ಯಕ್ಕೆ ದೂರವಾದ ಮಾತುಗಳನ್ನಾಡಿದರೆ ಹಿರಿಯರಾದ ಅವರಿಗೆ ಶೋಭೆ ತರೋದಿಲ್ಲ ಎಂದು ತಿರುಗೇಟು ನೀಡಿದರು.
Related Articles
Advertisement
ಹಾಲಿಗೆ ಪ್ರೋತ್ಸಾಹಧನವನ್ನು ಬಿಜೆಪಿ ಇದ್ದಾಗಲೂ 3 ತಿಂಗಳಿಗೆ ಒಮ್ಮೆಯೇ ಪಾವತಿಸಲಾಗುತ್ತಿತ್ತು. ಅಂತೆಯೇ ಈಗಲೂ ಮಾಡಲಾಗುತ್ತಿದೆ. ಆದರೆ, ಅದರ ಬಗ್ಗೆಯೂ ಮಾತನಾಡಿರುವುದು ಸರಿಯಲ್ಲ. ಎಲ್ಲವನ್ನು ಅರ್ಥ ಮಾಡಿಕೊಂಡ ಬಳಿಕ ಮಾತನಾಡುವುದು ಸೂಕ್ತ ಎಂದು ಸಚಿವರು ಹೇಳಿದರು.
ಬರಗಾಲ ಆವರಿಸಿರುವ ಸಮಯದಲ್ಲಿ ಕೆ.ಸಿ. ವ್ಯಾಲಿಯಿಂದ ನೀರು ಬರುತ್ತಿತ್ತು. ಅದಕ್ಕೆ ತಡೆಯಾಜ್ಞೆ ತಂದಿರುವುದು ದುರಾದೃಷ್ಟ. ಇಂತಹ ಒಳ್ಳೆಯ ಕೆಲಸಗಳಿಗೆ ಕಲ್ಲು ಹಾಕುವವರಿಗೆ ಅವಿಭಜಿತ ಜಿಲ್ಲೆಯಲ್ಲಿ ಕೊರತೆಯಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ನೀರಿನಿಂದ ತೊಂದರೆಯಾಗುತ್ತಿದೆ ಎಂದು ಜನರು ಹೇಳುತ್ತಿಲ್ಲ, ವರದಿಗಳು ಹೇಳಿಲ್ಲ. ಆದರೂ ವಿನಾಕಾರಣ ಹೈಕೋರ್ಟ್ ಅಲ್ಲದೆ ಸುಪ್ರಿಂಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತಂದಿರುವುದು ರೈತ ವಿರೋಧಿ ಕ್ರಮ ಎಂದರೆ ತಪ್ಪಾಗಲಾರದು. ಹೀಗಾಗಿ ಒಳ್ಳೆಯ ಕೆಲಸಗಳಿಗೆ ಕಲ್ಲು ಹಾಕುವವರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗಿಯೇ ಇರುವುದಾಗಿ ಹೇಳಿದರು.
ಹೈಕೋರ್ಟ್‌ನಂತೆಯೇ ಸುಪ್ರಿಂಕೋರ್ಟ್ ಗೂ ಮನವರಿಕೆ ಮಾಡಿಕೊಟ್ಟು ನೀರು ಹರಿಸಲಾಗುವುದು. ಎತ್ತಿನಹೊಳೆಯೂ ಈ ಭಾಗಕ್ಕಿಂತ ಆ ಭಾಗದಲ್ಲಿ ವೇಗವಾಗಿ ಕೆಲಸವಾಗುತ್ತಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಸಂಸದ ಕೆ.ಎಚ್.ಮುನಿಯಪ್ಪ, ಶಾಸಕ ಕೆ.ಶ್ರೀನಿವಾಸಗೌಡ, ಜಿಪಂ ಅಧ್ಯಕ್ಷೆ ಗೀತಮ್ಮ ಆನಂದರೆಡ್ಡಿ, ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮೀ, ತಾಪಂ ಅಧ್ಯಕ್ಷ ಸೂಲೂರು ಎಂ.ಆಂಜಿನಪ್ಪ, ಜಿಲ್ಲಾಧಿ ಕಾರಿ ಜೆ.ಮಂಜುನಾಥ್, ಎಸ್ಪಿ ರೋಹಿಣಿ ಕಟೋಚ್ ಸಫೆಟ್ ಉಪಸ್ಥಿತರಿದ್ದರು.
ಸಾಲ ಮನ್ನಾ ಯೋಜನೆ ಮುಂದೂಡಿಲ್ಲಒಂದೇ ರೈತ ಕುಟುಂಬವು ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕ್‌ನಲ್ಲಿಯೂ ಸಾಲ ಪಡೆದಿದೆ. ತೆರಿಗೆಯನ್ನು ಪಾವತಿಸುವವರನ್ನು ನೋಡಿಕೊಂಡು ಸಾಲಮನ್ನಾದಲ್ಲಿ ಸೌಲಭ್ಯ ಕಲ್ಪಿಸಲು ಮತ್ತು ಒಂದೇ ಕುಟುಂಬಕ್ಕೆ ಎರಡು ಕಡೆ ಸೌಲಭ್ಯ ನೀಡುವುದು ಸೂಕ್ತವಲ್ಲ ಎನ್ನುವ ಉದ್ದೇಶಕ್ಕಾಗಿ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಅದಕ್ಕಾಗಿಯೇ ಯೋಜನೆಯು ಸ್ವಲ್ಪ ವಿಳಂಬವಾಗಿದೆ. ಆದರೂ ರಾಜ್ಯದಲ್ಲಿ 8000 ಕೋಟಿ ರೂ. ರೈತರ ಸಾಲಮನ್ನಾವಾಗಿದೆ, ಹಂತಹಂತವಾಗಿ ನಡೆಯುತ್ತದೆಯೇ ಹೊರತು ಮುಂದೂಡಿಕೆಯ ಮಾತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಸ್ಪಷ್ಟಪಡಿಸಿದರು.