Advertisement

ಚಿಕ್ಕಬಳ್ಳಾಪುರಕ್ಕೆ ಕೃಷ್ಣಾ, ಕಾವೇರಿ ನದಿ ನೀರು

10:00 PM Nov 04, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಕ್ಷೇತ್ರದ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಿಸಿದರೆ ಕಾವೇರಿ ಮತ್ತು ಕೃಷ್ಣ ನದಿಗಳ ನೀರನ್ನು ಚಿಕ್ಕಬಳ್ಳಾಪುರಕ್ಕೆ ತರುವ ನಿಟ್ಟಿನಲ್ಲಿ ಶ್ರಮ ವಹಿಸುವುದಾಗಿ ಉಪ ಚುನಾವಣೆ ಕಾಂಗ್ರೆಸ್‌ ಅಭ್ಯರ್ಥಿ ನಂದಿ ಅಂಜನಪ್ಪ ಹೇಳಿದರು. ನಗರದ ಬಸಪ್ಪ ಛತ್ರದ ನಿರಾಶ್ರಿತರ ಕಾಲೋನಿಗೆ ಸೋಮವಾರ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಪರಿಶೀಲಿಸಿ ಮಾತನಾಡಿದರು.

Advertisement

ಕಾಂಗ್ರೆಸ್‌ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರು ಇರುವವರೆಗೂ ದೇಶದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾರ್ಯಕರ್ತರೇ ಪಕ್ಷದ ಆಸ್ತಿ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷ ತಳಮಟ್ಟದಲ್ಲಿ ಬೇರೂರಿದೆ ಎಂದರು. ಬಸಪ್ಪ ಛತ್ರದ ನಿರಾಶ್ರಿತರ ಎಲ್ಲಾ ಬಗೆಯ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದ ಅವರು, ನಗರದ ಅನೇಕ ಮುಖಂಡರು ಪಕ್ಷಭೇದ ಮರೆತು ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಕೊಡುಗೆ ಅಪಾರ: ಚಿಕ್ಕಬಳ್ಳಾಪುರ ನಗರ ಅಭಿವೃದ್ಧಿಗೆ ಸಿದ್ದರಾಮಯ್ಯನವರು ಸಿಎಂ ಆಗಿದ್ದ ವೇಳೆ ಸಿಎಂ ನಿಧಿಯಿಂದ 50 ಕೋಟಿ ಅನುದಾನ ಮತ್ತು ನಗರೋತ್ಥಾನ ಯೋಜನೆಯಡಿಯಲ್ಲಿ 35 ಕೋಟಿ ಅನುದಾನ ನೀಡಿದ್ದು, ಇದು ನಗರದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.

ಹಿಂದೆ ಯಡಿಯೂರಪ್ಪನವರ ಸರ್ಕಾರದ ಅವಧಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆಯನ್ನಾಗಿ ಘೋಷಣೆ ಮಾಡಿದ್ದರೂ ಸಹ ಯಾವುದೇ ಅನುದಾನ ಬಿಡುಗಡೆ ಮಾಡಲಿಲ್ಲ. ಅಂತಹ ಸಂದರ್ಭದಲ್ಲಿ ನಾನು ವೈಯಕ್ತಿಕವಾಗಿ ವಿಧಾನಸಭಾ ಕ್ಷೇತ್ರದ ಎಲ್ಲಾ ಎಪಿಎಲ್ ಹಾಗೂ ಬಿಪಿಎಲ್‌ ಮತ್ತು ಅಂತ್ಯೋದಯ ರೇಷನ್‌ ಕಾರ್ಡ್‌ ಹೊಂದಿರುವವರೆಲ್ಲರಿಗೂ ಉಚಿತವಾಗಿ ಅಕ್ಕಿ, ಗೋಧಿ, ಸಕ್ಕರೆ ಎಲ್ಲಾ ಪಡಿತರ ಪದಾರ್ಥಗಳನ್ನು ವಿತರಣೆ ಮಾಡಲಾಗಿತ್ತು ಎಂದರು.

ನಗರದಲ್ಲಿ ಕಾಂಗ್ರೆಸ್‌ಗೆ ಬಹುಮತ: ಕಾಂಗ್ರೆಸ್‌ ಮುಖಂಡ ಕೆ.ವಿ.ನವೀನ್‌ ಕಿರಣ್‌ ಮಾತನಾಡಿ, 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹದಿನಾಲ್ಕು ಸಾವಿರಕ್ಕೂ ಹೆಚ್ಚು ಮತಗಳನ್ನು ನೀಡಿರುವ ನಗರದ ಜನತೆ ಈಗ ಕಾಂಗ್ರೆಸ್‌ ಅಭ್ಯರ್ಥಿ ಅಂಜನಪ್ಪ ಅವರನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು. ಕಾಂಗ್ರೆಸ್‌ ಪಕ್ಷದಿಂದ ಎಲ್ಲವನ್ನೂ ಪಡೆದು ಪಕ್ಷಕ್ಕೆ ದೊ›àಹ ಬಗೆದ ವ್ಯಕ್ತಿಗೆ ಯಾವುದೇ ಕಾರಣಕ್ಕೂ ಈ ಚುನಾವಣೆಯಲ್ಲಿ ಮತ ನೀಡಬಾರದು.

Advertisement

ನಗರದ ನಿವೇಶನ ರಹಿತ ಎಲ್ಲಾ ಜನಾಂಗಗಳ ಜನರಿಗೂ ಸರ್ಕಾರದಿಂದ ಉಚಿತ ನಿವೇಶನ ನೀಡಿ, ಮನೆಗಳನ್ನು ಕಟ್ಟಿಸಿ ಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ನಗರದ ಜನತೆಗೆ ಭರವಸೆ ನೀಡಿದರು. ಬಸಪ್ಪ ಛತ್ರದ ಈಗಿನ ಜಾಗ ಸಿ.ವಿ.ವೆಂಕಟರಾಯಪ್ಪನವರು ನಗರಸಭೆಗೆ ಸೇರಿಸಿದ್ದ ಫ‌ಲವಾಗಿ ಇಂದು ಈ ಜಾಗ ನಿಮ್ಮದಾಗಲು ಕಾರಣವಾಯಿತು ಎಂದರು.

ಕೆಎಂಎಫ್ ನಿರ್ದೇಶಕ ವೆಂಕಟೇಶ್‌, ನಗರಸಭೆ ಮಾಜಿ ಅಧ್ಯಕ್ಷ ಪ್ರಕಾಶ್‌, ಕೆಪಿಸಿಸಿ ಸದಸ್ಯ ಎಸ್‌.ಪಿ.ಶ್ರೀನಿವಾಸ್‌, ಹಾರೋಬಂಡೆ ಗ್ರಾಪಂ ಅಧ್ಯಕ್ಷ ಗುಂತಪ್ಪನಹಳ್ಳಿ ವೆಂಕಟೇಶ್‌, ಗ್ರಾಪಂ ಸದಸ್ಯ ಸದಸ್ಯ ಶೆಟ್ಟಿಗೆರೆ ಮುರಳಿ, ಮುಖಂಡರಾದ ಕೆಳಗಿನ ತೋಟ ಶ್ರೀನಿವಾಸ್‌,ಬಾಬಾಜಾನ್‌, ರಾಮಮೂರ್ತಿ, ವಿನಯ್‌ ಕುಮಾರ್‌, ಶಂಕರ್‌, ವೆಂಕಟ್‌, ನರೇಶ್‌, ರಾಮಮೂರ್ತಿ, ವೆಂಕಟೇಶ್‌, ಅರುಣ, ಮಹೇಶ್‌ ಮತ್ತಿತರರು ಉಪಸ್ಥಿತರಿದ್ದರು.

ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಮತ್ತು ರಾಜೀವ್‌ ಗಾಂಧಿ ರವರ ಭಾವಚಿತ್ರಗಳನ್ನು ಇಂದಿಗೂ ಗ್ರಾಮೀಣ ಪ್ರದೇಶ ಜನ ತಮ್ಮ ಮನೆಗಳಲ್ಲಿ ಇಟ್ಟು ಮಾಡುತ್ತಿದ್ದಾರೆಂದರೆ ಕಾಂಗ್ರೆಸ್‌ ಯಾವ ರೀತಿ ಪರಿಣಾಮಕಾರಿಯಾಗಿ ಆಡಳಿತ ನೀಡಿ ಜನರ ಮನಸ್ಸಿನಲ್ಲಿ ಬೇರೂರಿದೆ ಎಂಬುದನ್ನು ತೋರಿಸುತ್ತದೆ. ಕಾಂಗ್ರೆಸ್‌ನ್ನು ಟೀಕಿಸುವ ವಿರೋಧಿಗಳು ಅರ್ಥೈಸಿಕೊಂಡರೆ ಒಳ್ಳೆಯದು.
-ನಂದಿ ಅಂಜನಪ್ಪ, ಕಾಂಗ್ರೆಸ್‌ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next