Advertisement
ಅವರು ರವಿವಾರ ಮೂಲ್ಕಿ ಕೊಲಾ°ಡಿನಲ್ಲಿ ನಡೆದ ರಾಜ್ಯ ಮಟ್ಟದ ಕೃಷಿ ಮೇಳ “ಕೃಷಿ ಸಿರಿ-2022’ರ ಸಮಾರೋಪದಲ್ಲಿ ಮಾತನಾಡಿ, ಮಕ್ಕಳಿಗೆ ಕೃಷಿಯ ಬಗ್ಗೆ ಪ್ರೇರಣೆ ನೀಡಬೇಕು ಮತ್ತು ಕೃಷಿಬದುಕನ್ನು ಪರಿಚಯಿಸಬೇಕು. ಕೃಷಿಯಲ್ಲಿ ಲಾಭ ಕಡಿಮೆ. ಆದರೆ ಅರೋಗ್ಯ ಖಂಡಿತ ಇದೆ ಎಂದರು.
Related Articles
Advertisement
ಕೃಷಿ ಮೇಳದ ಉಸ್ತುವಾರಿ ಸಮಿತಿ ಸದಸ್ಯ ಮಹಿಮ್ ಹೆಗ್ಡೆ ಸ್ವಾಗತಿಸಿದರು. ಕೋಶಾಧಿಕಾರಿ ಜಗದೀಶ್ ಪೈ ಪ್ರಸ್ತಾವನೆಗೈದರು. ರಾಮಚಂದ್ರ ನಾಯಕ್ ವಂದಿಸಿದರು. ಆರ್.ಜೆ. ಅಭಿಷೇಕ್ ಕಾರ್ಯಕ್ರಮ ನಿರೂಪಿಸಿದರು.
ಠರಾವು ಮುಖ್ಯಾಂಶಗಳು1. ಅವಸಾನದಂಚಿಗೆ ಸಾಗುತ್ತಿರುವ ಕೃಷಿ ಪುನಶ್ಚೇತನಕ್ಕೆ ಸರಕಾರ ಇನ್ನಷ್ಟು ಕ್ರಾಂತಿಕಾರಿ ಹೆಜ್ಜೆಗಳನ್ನು ಇಡಬೇಕು, ಅವಿಭಜಿತ ದ.ಕ. ಜಿಲ್ಲೆಯ ರೈತರ ಭತ್ತದ ಬೆಳೆಗೆ ಬೆಂಬಲ ಬೆಲೆ ನೀಡಬೇಕು.
2. ಸರಕಾರವು ರೈತರು ಮತ್ತು ಗ್ರಾಹಕರ ನಡುವಿನ ಮಧ್ಯವರ್ತಿಗಳ ಕಾಟವನ್ನು ತಪ್ಪಿಸಿ ಬೆಳೆಗೆ ಸೂಕ್ತ ಮೌಲ್ಯವನ್ನು ನೇರವಾಗಿ ರೈತರಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು.
3. ರೈತರು ಸೌಲಭ್ಯಗಳನ್ನು ಸುಲಭದಲ್ಲಿ ಪಡೆಯಲು ಈಗಿರುವ ನಿಯಮಾವಳಿಗಳಲ್ಲಿ ಸಡಿಲಿಕೆ ಮಾಡಬೇಕು, ವಿಶೇಷವಾಗಿ ಅವಿಭಜಿತ ದ.ಕ. ಜಿಲ್ಲೆಯ ರೈತರ ಪಹಣಿ ಪತ್ರವನ್ನು ಸರಳಗೊಳಿಸಿ ಸೂಕ್ತ ಪರಿಹಾರ ಒದಗಿಸಿಕೊಡಬೇಕು.
4. ರೈತರ ಜಮೀನಿಗೆ ಭೇಟಿ ನೀಡಿ ಬೆಳೆಯ ಸಮೀಕ್ಷೆ ಮಾಡಬೇಕು ಮತ್ತು ಸರಕಾರದ ಸವಲತ್ತು ನೀಡಲು ವ್ಯವಸ್ಥೆ ಮಾಡಬೇಕು.
5. ಹೈನುಗಾರಿಕೆಗೆ ಉತ್ತೇಜನ ನಿಟ್ಟಿನಲ್ಲಿ ಹಾಲಿಗೆ ಬೆಂಬಲ ಬೆಲೆಯನ್ನು ಕನಿಷ್ಠ 3 ರೂಪಾಯಿಗಳಿಗೆ ಹೆಚ್ಚಿಸಬೇಕು.
6. ಅವಿಭಜಿತ ದ.ಕ. ಜಿಲ್ಲೆಗೆ ಅನುಕೂಲ ಆಗುವ ನಿಟ್ಟಿನಲ್ಲಿ ಮೂಲ್ಕಿ ಕೊಲಾ°ಡಿನಲ್ಲಿ ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ ಆವಿಷ್ಕಾರ ಅಧ್ಯಯನವನ್ನು ನಡೆಸಲು ಅನುಕೂಲವಾಗುವಂತೆ ಕೃಷಿ ವಿಶ್ವದ್ಯಾನಿಲಯವನ್ನು ಸ್ಥಾಪಿಸಬೇಕು.
7. ಕೃಷಿ ಮತ್ತು ಮತೊÕ$Âàದ್ಯಮಕ್ಕೆ ಅನುಕೂಲ ಆಗುವಂತೆ ಮೌಲ್ಯವರ್ಧಿತ ಉತ್ಪಾದಕ ಘಟಕಗಳನ್ನು ಅವಿಭಜಿತ ದ.ಕ. ಜಿಲ್ಲೆಯಲ್ಲಿ ಹೆಚ್ಚು ಸ್ಥಾಪಿಸಬೇಕು.
8. ಸಾವಯವ ಕೃಷಿಗೆ ಇನ್ನಷ್ಟು ಪ್ರಯೋಜನ ನೀಡುವುದು ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯುವಂತೆ ಪ್ರೇರೇಪಿಸಬೇಕು. ಸಾಧಕರಿಗೆ ಸಮ್ಮಾನ
ಕೃಷಿಯಲ್ಲಿ ಆವಿಷ್ಕಾರ ಮಾಡಿರುವ ಜನಾರ್ದನ ಗೌಡ ಮೂಡುಬಿದಿರೆ, ಬಿ.ಕೆ. ದೇವರಾಯ ರಾವ್ ಬೆಳ್ತಂಗಡಿ, ಜೇನು ಕೃಷಿಯಲ್ಲಿ ಸಾಧನೆ ಮಾಡಿರುವ ಬಸವನ ಬಾಗೇವಾಡಿಯ ಮಹಾಂತೇಶ್ ಎನ್. ಚೌಧರಿ, ಕೃಷಿ ಕ್ಷೇತ್ರದ ಸಾಧನೆಗಾಗಿ ಚಿಕ್ಕಬಳ್ಳಾಪುರದ ಎಸ್.ಆರ್.ಎಸ್. ದೇವರಾಜ್, ಬೆಳ್ತಂಗಡಿಯ ವಿಠಲ ಶೆಟ್ಟಿ ತಾರೆಮಾರು ಅವರನ್ನು ಗೌರವಿಸಲಾಯಿತು.