Advertisement

ಕೆ.ಆರ್‌.ಪೇಟೆ: ವಾರಕ್ಕೊಮ್ಮೆ ಮಾತ್ರ ನೀರು

07:59 AM Jun 07, 2019 | Team Udayavani |

ಕೆ.ಆರ್‌.ಪೇಟೆ: ದೀಪದ ಕೆಳಗೆ ಕತ್ತಲು ಎಂಬ ಮಾತಿನಂತೆ ಹೇಮಾವತಿ, ಕಾವೇರಿ, ಲಕ್ಷ್ಮಣ ತೀರ್ಥ ನದಿಗಳು ತಾಲೂಕಿನಲ್ಲಿ ಹರಿಯುತ್ತಿದ್ದರೂ ಪಟ್ಟಣ ನಾಗರೀಕರಿಗೆ ಕುಡಿಯುವ ನೀರಿನ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ.

Advertisement

ಸುಮಾರು 40 ಸಾವಿರ ಜನಸಂಖ್ಯೆ ಇರುವ ಪಟ್ಟಣಕ್ಕೆ ಸಮರ್ಪಕ ಕುಡಿಯುವ ನೀರು ಒದಗಿಸಲು ಸ್ಥಳೀಯ ಪುರಸಭೆ ಮತ್ತು ಜಿಲ್ಲಾಡಳಿತ ವಿಫ‌ಲವಾಗಿರುವುದು ವಿಪರ್ಯಾಸವೇ ಸರಿ. ಏಕೆಂದರೆ ತಾಲೂಕಿನಲ್ಲಿ ಪ್ರಮುಖ ಮೂರು ನದಿಗಳು ಹರಿಯುತ್ತವೆ. ಜೊತೆಗೆ ತಾಲೂಕು ಕೇಂದ್ರದಿಂದ ಕೇವಲ 10 ಕಿ.ಮೀ. ದೂರದ ಹೇಮಗಿರಿಯಲ್ಲಿ ಬೇಸಿಗೆ ಕಾಲದ ಎರಡು ತಿಂಗಳಲ್ಲಿ ನೀರಿನ ಪ್ರಮಾಣ ಸ್ವಲ್ಪ ಕಡಿಮೆಯಾಗುವುದನ್ನು ಹೊರತುಪಡಿಸಿದರೆ ವರ್ಷ ಪೂರ್ತಿ ಹೇಮೆ ಹರಿಯುತ್ತಾಳೆ. ಅಲ್ಲಿಯೇ ಪುರಸಭೆಯಿಂದ ಮೋಟಾರ್‌ ಅಳವಡಿಸಿ ಅಲ್ಲಿಂದ ಪೈಪ್‌ಗ್ಳ ಮೂಲಕ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ.

ಆಡಳಿತ ವರ್ಗದ ನಿರ್ಲಕ್ಷ್ಯ: ಹೇಮಾವತಿ ನದಿಯಲ್ಲಿ ನೀರಿಗೆ ಸಮಸ್ಯೆ ಆಗುವುದಿಲ್ಲ. ಆದರೆ ಅಧಿಕಾರಿಗಳು ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದೆ ಹಳ್ಳಕ್ಕೆ ಹರಿಸುವುದರಿಂದ ನೀರು ನೇರವಾಗಿ ಕೆಆರ್‌ಎಸ್‌ ಅಣೆಕಟ್ಟೆ ಸೇರುತ್ತಿದೆ. ಇದರ ಜೊತೆಗೆ ವಿದ್ಯುತ್‌ ಸಮಸ್ಯೆ, ನೀರು ಸೋರಿಕೆ, ಅಸಮರ್ಪಕ ನಿರ್ವಹಣೆಯಿಂದಾಗಿ ಪಟ್ಟಣದಲ್ಲಿ ವಾರಕ್ಕೆ ಒಂದು ದಿನ ಪುರಸಭೆಯವರು ನಲ್ಲಿಗಳಲ್ಲಿ ನೀರು ಹರಿಸುತ್ತಾರೆ. ಇದರಿಂದ ಬಡ ಕುಟುಂಬದವರಿಗೆ ನೀರಿನ ಸಮಸ್ಯೆ ಹೆಚ್ಚಳವಾಗಿದ್ದು ಕೆಲ ಸಮಯದಲ್ಲಿ ಶೌಚಕ್ಕೂ, ಕುಡಿಯುವುದಕ್ಕೂ ನೀರನ್ನು ಕೊಳವೆ ಬಾವಿಗಳನ್ನು ಹೊಂದಿರುವ ಸಿರಿವಂತರ ಮನೆಗಳ ಮುಂಭಾಗದಲ್ಲಿ ಖಾಲಿ ಕೊಡಗಳು ಹಿಡಿದುಕೊಂಡು ನಿಲ್ಲುವಂತಾಗಿದೆ. ಇದರ ಜೊತೆಗೆ ಕೆಲವು ಬಡಾವಣೆಗಳಲ್ಲಿ ವಾರಕ್ಕೆ ಒಂದು ದಿನವೂ ಸ್ನಾನ ಮಾಡಲು ಆಗದಂತಹ ಸ್ಥತಿಯಲ್ಲಿ ಜನಜೀವನ ನಡೆಸುತ್ತಿದ್ದಾರೆ.

● ಎಚ್.ಬಿ.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next