Advertisement

“ಮಾರು’ವೇಷ:  ಕ್ಯಾಮೆರಾ ಕಣ್ಣಲ್ಲಿ ಕೆ.ಆರ್‌. ಮಾರುಕಟ್ಟೆ

03:29 PM Dec 08, 2018 | |

“ಬೆಳಕಿದ್ದಲ್ಲಿ ಕತ್ತಲೆಗೆ ಜಾಗವಿಲ್ಲ’ ಎಂಬುದು ಹಳೆಯ ನಾಣ್ಣುಡಿ. ವಾಸ್ತವವಾಗಿ ಅವೆರಡೂ ಒಟ್ಟೊಟ್ಟಿಗೇ ಇರುವಂಥವು! ಕಲೆ ಅಥವಾ ಛಾಯಾಗ್ರಹಣದಲ್ಲಿ ಸೃಜನಶೀಲ ಕಣ್ಣಿನ ದೃಷ್ಟಿಕೋನವು ಅವೆರಡನ್ನು ಒಂದರೊಡನೆ ಒಂದು ಆಟವಾಡುವಂತೆ ಮಾಡಬಲ್ಲದು. ದೈನಂದಿನ ಚಟುವಟಿಕೆ ಅಚ್ಚರಿಯೆಂದರೆ ಅನೇಕ ಕ್ಷಣಗಳು ನಮ್ಮ ಕಣ್ಣಿಗೆ ಬೀಳದೆ ಕಳೆದುಹೋಗುವುದೇ ಹೆಚ್ಚು. ಇಂಥ ಕ್ಷಣಗಳನ್ನು ಸೆರೆಹಿಡಿದು ಚಿತ್ರಮಾಲಿಕೆಯನ್ನಾಗಿಸಿದವರು ಛಾಯಾಗ್ರಾಹಕ ಕೆ. ಮಂಜುನಾಥ್‌. ಈ ಬಾರಿ ಅವರು ಆರಿಸಿಕೊಂಡ ಜಾಗ ಕೆ.ಆರ್‌. ಮಾರುಕಟ್ಟೆ. ಅಲ್ಲಿನ ಕತ್ತಲು ಬೆಳಕಿನ ನಡುವಿನ ಹೋರಾಟವನ್ನು ಮಾತ್ರವಲ್ಲದೆ ಅಸಂಗತ ವಿದ್ಯಮಾನಗಳನ್ನೂ ಗ್ರಹಿಸುವುದು ಅವರ ವೈಶಿಷ್ಟéತೆ. 

Advertisement

ಮೇಲುಸೇತುವೆ ಕೆಳಗಡೆ ಸಂಭ್ರಮ ಪಕ್ಕನೆ ನೋಡಿದರೆ ಕಾಣದು. ಧ್ಯಾನಸ್ಥರಾದಾಗ ಮಾತ್ರ ಅದು ಕಾಣುತ್ತದೆ. ನಿಧಾನಗತಿಯಲ್ಲಿ ಸಾಗುವ ವಾಹನಗಳ ಹೆಡ್‌ಲ್ಯಾಂಪುಗಳ ಪ್ರಭೆ, ಕೈಗಳಲ್ಲಿ ತಲೆ ಮೇಲೆ ಬ್ಯಾಗು ಹಿಡಿದು ಅವಸರದಿಂದ ಮನೆಗೆ ತೆರಳುತ್ತಿರುವ ಮಂದಿ ಜೀವಂತಿಕೆಯಲ್ಲಿ ತುಳುಕುತ್ತಿರುತ್ತಾರೆ. ಅಲ್ಲೂ ಒಂದು ಸೌಂದರ್ಯವಿದೆ ಎನ್ನುವುದನ್ನು ಕಂಡುಕೊಂಡವರು ವೆಂಕಟೇಶ್‌.

ಮಾರುಕಟ್ಟೆಯಲ್ಲಿ ಎಡತಾಕುವ ಗೋಡೆ, ರಸ್ತೆ, ಅಪರಿಚಿತರ ಮನುಷ್ಯರು, ಅಷ್ಟೇ ಯಾಕೆ ನಾಯಿ, ದನ- ಕರುಗಳೂ ಮಾರುಕಟ್ಟೆಯೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದ್ದಾರೆ ಎನ್ನುವುದು ಛಾಯಾಗ್ರಾಹಕರ ಅನುಭವದ ಮಾತು. ಕೆ.ಆರ್‌. ಮಾರುಕಟ್ಟೆಯ ಚಿತ್ರಮಾಲಿಕೆಯ ಹಿಂದೆ ಒಂದು ಅದ್ಭುತ ಹೊಳಹು  ಇದೆ. ಸರಕು ಗಾಡಿಗಳನ್ನು ತಳ್ಳುವ, ಮಣಭಾರದ ತರಕಾರಿ ಸಾಮಗ್ರಿ ಹೊತ್ತುಕೊಂಡು ಓಡಾಡುವ, ಸೂರ್ಯ ಮೂಡುವ ಮುಂಚೆಯೇ ನೆಲದ ಮೇಲೆ ಹಾಸು ಹಾಸಿ ಕುಳಿತು ರಾತ್ರಿ ಕತ್ತಲಲ್ಲಿ ಕರಗಿ ಹೋಗುವ, ಹೋರಾಟ ಜೀವನ ನಡೆಸುತ್ತಾ ಜೀವನದ ಬಂಡಿಯನ್ನು ಎಳೆಯುತ್ತಿರುವ ಶ್ರೀಸಾಮಾನ್ಯರಿಂದಲೇ ಕಲಿಯಬಹುದಾದ್ದು ತುಂಬಾ ಇವೆ. ಇಲ್ಲಿನ ಚಿತ್ರಗಳನ್ನು ನೋಡುತ್ತಿದ್ದರೆ ಅದು ದಿಟವಾಗುತ್ತದೆ.

Advertisement

ಜೀವನದಲ್ಲಿ ಎಲ್ಲಾ ಕಷ್ಟಗಳೂ, ಅಂದುಕೊಂಡರೆ ಮಾತ್ರ ಕಷ್ಟ. ಮಾರುಕಟ್ಟೆಯಲ್ಲೇ ಜೀವನ ನಡೆಸುವ ಜೀವಗಳಿಂದ ಮನಗೊಂದಿಷ್ಟು ಜೀವನೋತ್ಸಾಹ ಸಿಕ್ಕಲಿ ಎಂಬ ಆಶಯವೇ ಈ ಚಿತ್ರಸರಣಿಯ ಆಶಯ– ಕೆ. ವೆಂಕಟೇಶ್‌ 

Advertisement

Udayavani is now on Telegram. Click here to join our channel and stay updated with the latest news.

Next