Advertisement

ಕೆಪಿಟಿಸಿಎಲ್‌ ಪರೀಕ್ಷೆಗೆ ಶೂ, ಬೆಲ್ಟ್ , ಪೂರ್ಣತೋಳಿನ ಅಂಗಿ ನಿಷಿದ್ಧ!

08:51 AM Jul 21, 2022 | Team Udayavani |

ಉಡುಪಿ: ಪೂರ್ಣತೋಳಿನ ಅಂಗಿ, ಶೂ, ಬೆಲ್ಟ್, ಚಿನ್ನದ ಸರ, ಕಿವಿಯೋಲೆ, ಎನ್‌-95 ಮಾಸ್ಕ್ ಧರಿಸುವಂತಿಲ್ಲ. ಪರೀಕ್ಷೆಗೆ ಸ್ಯಾಂಡಲ್‌, ಚಪ್ಪಲಿಯಲ್ಲೇ ಹೋಗಬೇಕು… ಷರತ್ತುಗಳ ಪಟ್ಟಿಕಂಡು ಬೆಚ್ಚಿಬಿದ್ದ ಅಭ್ಯರ್ಥಿಗಳು!

Advertisement

ಹೌದು, ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ ಸಹಾಯಕ ಎಂಜಿನಿಯರ್‌ (ವಿದ್ಯುತ್‌/ಸಿವಿಲ್‌), ಕಿರಿಯ ಎಂಜಿನಿಯರ್‌ (ವಿದ್ಯುತ್‌/ ಸಿವಿಲ್‌) ಮತ್ತು ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷೆ ಪ್ರಾಧಿಕಾರ ಜು. 24ರಂದು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ಮಾರ್ಗಸೂಚಿ, ಡ್ರೆಸ್‌ ಕೋಡ್‌ ಬಿಡುಗಡೆ ಮಾಡಿದೆ. ಪರೀಕ್ಷೆ ಬರೆಯಲು ಸಜ್ಜಾಗಿರುವ ಅಭ್ಯರ್ಥಿಗಳು ಷರತ್ತುಗಳನ್ನು ಕಂಡು ಹೌಹಾರಿದ್ದಾರೆ.

ಪುರುಷ ಅಭ್ಯರ್ಥಿಗಳಿಗೆ
ಪುರುಷರು ಕೋವಿಡ್‌ ಸುರಕ್ಷತೆ ಮಾರ್ಗ ಸೂಚಿ ಪ್ರಕಾರ ಅರೆ ಪಾರದರ್ಶಕವಾದ ಸರ್ಜಿ ಕಲ್‌ ಮಾಸ್ಕ್ ಮಾತ್ರ ಧರಿಸಬೇಕು. ಎನ್‌-95 ಅಥವಾ ಕಾಟನ್‌ ಮಾಸ್ಕ್ಗೆ ಅವಕಾಶವಿಲ್ಲ. ಆರ್ಧತೋಳಿನ ಅಂಗಿಯನ್ನೇ ಧರಿಸಿರಬೇಕು. ದಿರಿಸಿ ನಲ್ಲಿ ಜಿಪ್‌ ಪಾಟೆಕ್‌ಗಳು, ಪಾಕೆಟ್‌ಗಳಲ್ಲಿ ದೊಡ್ಡ ಬಟನ್‌ಗಳು, ವಿಸ್ತಾರವಾದ ಕಸೂತಿ ಇರುವ ಬಟ್ಟೆಗಳು ಇರಬಾರದು. ಕುರ್ತಾ, ಪೈಜಾಮ ಧರಿಸುವಂತಿಲ್ಲ. ಕೊಠಡಿ ಒಳಗೆ ಶೂ ಧರಿಸುವಂತಿಲ್ಲ. ತೆಳುವಾದ ಅಡಿಭಾಗ ಹೊಂದಿರುವ ಸ್ಯಾಂಡಲ್‌ ಅಥವಾ ಚಪ್ಪಲಿಯನ್ನಷ್ಟೇ ಧರಿಸ ಬೇಕು. ಯಾವುದೇ ಲೋಹದ ಆಭರಣ ಧರಿಸುವಂತಿಲ್ಲ. ಕಿವಿಯೋಲೆ, ಉಂಗುರ ಹಾಗೂ ಕಡಗಗಳಿಗೂ ನಿರ್ಬಂಧ ಹೇರಲಾಗಿದೆ.

ಮಹಿಳಾ ಅಭ್ಯರ್ಥಿಗಳಿಗೆ: ಮಹಿಳೆಯರು ಕೂಡ ಅರೆಪಾರದರ್ಶಕವಾದ ಸರ್ಜಿ ಕಲ್‌ ಮಾಸ್ಕ್ ಮಾತ್ರ ಧರಿಸಬೇಕು. ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‌ಗಳು ಅಥವಾ ಬಟನ್‌ಗಳನ್ನು ಹೊಂದಿರುವ ಉಡುಪು ಧರಿಸು ವಂತಿಲ್ಲ. ಪೂರ್ಣ ತೋಳಿನ ಯಾವುದೇ ಬಟ್ಟೆಗೆ ಅವಕಾಶವಿಲ್ಲ. ಎತ್ತರದ ಹಿಮ್ಮಡಿಯ ಮತ್ತು ಎತ್ತರದ ಅಡಿಭಾಗ ಹೊಂದಿರುವ ಬೂಟು ಹಾಕು ವಂತಿಲ್ಲ. ಸ್ಯಾಂಡಲ್ಸ್‌, ಚಪ್ಪಲಿ ಅಥವಾ ಕಡಿಮೆ ಹಿಮ್ಮಡಿಯ ಪಾದರಕ್ಷೆ ಬಳಸಬೇಕು. ಕಿವಿಯೋಲೆ, ಉಂಗುರ, ಪೆಂಡೆಂಟ್‌, ನೆಕ್ಲೇಸ್‌, ಬಳೆ ಸಹಿತ ಯಾವುದೇ ಲೋಹದ ಆಭರಣ ಧರಿಸುವಂತಿಲ್ಲ.

ನಿಷೇಧಿತ ವಸ್ತುಗಳು
ಎಲೆಕ್ಟ್ರಾನಿಕ್‌ ವಸ್ತುಗಳು, ಮೊಬೈಲ್‌, ಪೆನ್‌ಡ್ರೈವ್‌, ಇಯರ್‌ಫೋನ್‌, ಮೈಕ್ರೋ ಫೋನ್‌, ಬ್ಲೂಟೂತ್‌ ಹಾಗೂ ಕೈಗಡಿಯಾರ ಮೊದಲಾದ ಸಾಧನಗಳು, ಪ್ಯಾಕ್‌ ಮಾಡಿದ ಅಥವಾ ಮಾಡಿರದ ಯಾವುದೇ ಆಹಾರ ಪದಾರ್ಥವನ್ನು ಕೇಂದ್ರದೊಳಗೆ ಕೊಂಡೊ ಯ್ಯುವಂತಿಲ್ಲ. ಪೆನ್ಸಿಲ್‌, ಪೇಪರ್‌, ಎರೇಸರ್‌, ಮಾಪಕಗಳು, ಜ್ಯಾಮಿಟ್ರಿ ಬಾಕ್ಸ್‌, ಲಾಗ್‌ ಟೇಬಲ್‌ಗ‌ಳನ್ನು ಕೊಂಡೊಯ್ಯುವಂತಿಲ್ಲ. ವ್ಯಾಲೆಟ್‌, ಗಾಗಲ್ಸ್‌, ಬೆಲ್ಟ್, ಕ್ಯಾಪ್‌, ಪರಿಕರಗಳು, ಕೆಮರಾ, ಆಭರಣಗಳನ್ನು ಕೊಂಡೊ ಯ್ಯುವಂತಿಲ್ಲ. ಯಾವುದೇ ಲೇಬಲ್‌ ಇಲ್ಲದ ಪಾರದರ್ಶಕ ನೀರಿನ ಬಾಟಲಿ ಕೊಂಡೊ ಯ್ಯಲು ಅವಕಾಶವಿದೆ ಎಂದು ಪ್ರಾಧಿಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.

Advertisement

ಏಕೆ ಇಷ್ಟೊಂದು ಕಠಿನ?
ರಾಷ್ಟ್ರೀಯ ಪರೀಕ್ಷೆ ಏಜೆನ್ಸಿ ನಡೆಸುವ ಬಹುತೇಕ ಸ್ಪರ್ಧಾತ್ಮಕ ಪರೀಕ್ಷೆಗಳು ಇಷ್ಟೇ ಕಠಿನವಾದ ಷರತ್ತುಗಳನ್ನು ಹೊಂದಿರುತ್ತವೆ. ಆದರೆ ಕರ್ನಾಟಕ ಪರೀಕ್ಷೆ ಪ್ರಾಧಿಕಾರ ನಡೆಸುವ ಪರೀಕ್ಷೆಗೆ ಇಷ್ಟು ಕಠಿನವಾದ ಷರತ್ತುಗಳನ್ನು ವಿಧಿಸಿರು ವುದು ಇದೇ ಮೊದಲಿರಬಹುದು. ಇತ್ತೀಚೆಗೆ ಸದ್ದು ಮಾಡಿದ್ದ ಪಿಎಸ್‌ಐ ಪರೀಕ್ಷೆ ಅಕ್ರಮದಿಂದ ಎಚ್ಚೆತ್ತುಕೊಂಡು ಪರೀಕ್ಷೆಗೆ ಕಠಿನ ನಿಯಮ ರಚಿಸಲಾಗಿದೆ ಎನ್ನಲಾಗುತ್ತಿದೆ.

ಅವೈಜ್ಞಾನಿಕ ನಿಯಮ: ಅಭ್ಯರ್ಥಿಗಳ ಆಕ್ಷೇಪ
ಪರೀಕ್ಷೆ ಕೇಂದ್ರ ಹಾಗೂ ಪರೀಕ್ಷೆ ಕೊಠಡಿಯ ಒಳಗೆ ಸಿಸಿ ಕೆಮರಾ ಅಳವಡಿಸುವುದು ಉತ್ತಮ. ಪೂರ್ಣ ತೋಳಿನ ಶರ್ಟ್‌, ಕಿವಿಯೋಲೆ ಧರಿಸಬಾರದು, ಆಹಾರ ಪದಾರ್ಥ ಕೊಂಡೊ  ಯ್ಯುವಂತಿಲ್ಲ ಎಂಬ ಕೆಲವೊಂದು ನಿರ್ಬಂಧ ತೀರ ಅವೈಜ್ಞಾನಿಕವಾಗಿದೆ. ಇದರಿಂದಲೇ ಹಲವು ಅಭ್ಯರ್ಥಿಗಳು ಪರೀಕ್ಷೆ ಕೇಂದ್ರಕ್ಕೆ ಬಾರದೆಯೂ ಇರಬಹುದು. ಇದನ್ನು ಸರಕಾರ ಹಾಗೂ ಸಂಬಂಧಪಟ್ಟ ಪ್ರಾಧಿಕಾರದ ಅಧಿಕಾರಿಗಳು ಪುನರ್‌ ಪರಿಶೀಲನೆ ಮಾಡಬೇಕು ಎಂದು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next