Advertisement

ಇಂದು ಕೆಪಿಎಂಇ ವಿಧೇಯಕ ಮಂಡನೆ?

10:27 AM Nov 20, 2017 | |

ಬೆಳಗಾವಿ: ವೈದ್ಯರ ಮುಷ್ಕರಕ್ಕೆ ಕಾರಣ ವಾಗಿ ನಂತರ ಅವರ ಒತ್ತಾಯದ ಮೇರೆಗೆ ಕೆಲವು ತಿದ್ದುಪಡಿಗಳಿಗೆ ಒಳಗಾಗಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ಸರ್ಕಾರದ ನಿಯಂತ್ರ ಣ ಕ್ಕೊಳಪಡಿಸುವ ಕೆಪಿಎಂಇ ವಿಧೇಯಕ ಸೋಮವಾರ ಸದನದಲ್ಲಿ
ಮಂಡನೆಯಾಗಲಿದೆಯೇ? ಆರೋಗ್ಯ ಸಚಿವ ರಮೇಶ್‌ಕುಮಾರ್‌ ಅವರ ಸೂಚನೆಯಂತೆ ಇಲಾಖೆ ಅಧಿಕಾರಿಗಳು ಕೆಲವು ಮಾರ್ಪಾಡುಗಳೊಂದಿಗೆ ವಿಧೇಯಕ ಸಿದ್ಧಪಡಿಸಿದ್ದಾರೆ. ಇದನ್ನು ಸೋಮವಾರ ಸದನದಲ್ಲಿ ಮಂಡಿಸಲು ಸಚಿವರೂ ಮುಂದಾಗಿದ್ದಾರೆ. 

Advertisement

ಒಂದು ವೇಳೆ ವಿಧೇಯಕದಲ್ಲಿ ಮಾರ್ಪಾಡು ಮಾಡಿರು ವುದರಿಂದ ಅದನ್ನು ಮತ್ತೆ ಸಚಿವ ಸಂಪುಟ ಸಭೆ ಮುಂದಿಡ ಬೇಕು ಎಂದು ಸರ್ಕಾರ ಬಯಸಿದರೆ ಸೋಮವಾರ ಸಂಜೆ ನಡೆಯುವ ಸಂಪುಟ ಸಭೆಯಲ್ಲಿಟ್ಟು ಮಂಗಳವಾರ ಮಂಡಿ ಸಲಾಗುತ್ತದೆ. ಇಲ್ಲ  ದಿದ್ದರೆ ಸೋಮವಾರವೇ ವಿಧೇಯಕ ಮಂಡನೆಯಾಗಲಿದೆ. ಈ ಹಿಂದೆಯೇ ಕೆಪಿಎಂಇ ವಿಧೇಯಕ ಸಿದ್ಧಪಡಿಸಿದ್ದ ಆರೋಗ್ಯ ಸಚಿವ ರಮೇಶ್‌ಕುಮಾರ್‌ ಕಳೆದ ವಾರವೇ ಅದನ್ನು ಸದನದಲ್ಲಿ ಮಂಡಿಸಲು ಮುಂದಾಗಿದ್ದರು. ಆದರೆ, ವಿಧೇಯಕ ಮಂಡನೆ ವಿರೋಧಿಸಿ ವೈದ್ಯರು ಮುಷ್ಕರ ನಡೆಸಿದ ಪರಿಣಾಮ ಅದು ಸಾಧ್ಯವಾಗಿರಲಿಲ್ಲ. ಈ ಮಧ್ಯೆ ಶುಕ್ರವಾರ ವೈದ್ಯರ ಸಂಘಟನೆಗಳ ಪ್ರಮುಖರೊಂದಿಗೆ  ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಮತ್ತು ಆರೋಗ್ಯ ಸಚಿವ ರಮೇಶ್‌ಕುಮಾರ್‌ ವಿಧೇಯಕದಲ್ಲಿ ಕೆಲವು ಮಾರ್ಪಾಟು ಗಳನ್ನು ಮಾಡಲು ಒಪ್ಪಿಕೊಂಡಿದ್ದರು. 

ಅದರಂತೆ ವಿಧೇಯಕದಲ್ಲಿ ಮಾರ್ಪಾಟು ಮಾಡಲಾಗಿದ್ದು, 2007ರಲ್ಲಿ ರೂಪಿಸಿದ್ದ ಮೂಲ ಕಾಯ್ದೆಯಲ್ಲೇ ಇದ್ದ ಜೈಲು ಶಿಕ್ಷೆ ರದ್ದುಗೊಳಿಸಿ, ದಂಡ ಮಾತ್ರ ಉಳಿಸಿಕೊಳ್ಳಲಾಗಿದೆ. ಜಿಪಂ ಸಿಇಒ ಅಧ್ಯ ಕ್ಷತೆಯ ದೂರು ನಿವಾರಣೆ ಸಮಿತಿ ಜವಾ ಬ್ದಾರಿಯನ್ನು ನೋಂದಣಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ. ಸಾಮೂಹಿಕ ದರ ನಿಗದಿ ಕೈಬಿಟ್ಟು ಸರ್ಕಾರಿ ಯೋಜನೆಗಳಿಗೆ ಮಾತ್ರ ಸರ್ಕಾರ ದರ ನಿಗದಿ ಮಾಡುತ್ತದೆ. ವೈದ್ಯರ ವಿರುದ್ಧ ನಿರ್ಲಕ್ಷ್ಯದ ದೂರು ಬಂದರೆ ವಕೀಲರಿಲ್ಲದೆ ವೈದ್ಯರೇ ಖುದ್ದಾಗಿ ಹಾಜರಾಗಬೇಕು ಎಂಬ ಅಂಶ ಸಹ ಸಡಿಲಿಸಿ ವಕೀಲರ ಮೂಲಕ ವಾದ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಸಚಿವ ಸಂಪುಟ ಸಭೆ ಇಂದು
ವಸತಿ ಶಾಲಾ ಸಂಕೀರ್ಣ, ಆರೋಗ್ಯ ಸಂಸ್ಥೆಗಳಿಗೆ ಔಷಧ, ರಾಸಾಯನಿಕ ಖರೀದಿಗೆ ಒಪ್ಪಿಗೆ ಸಾಧ್ಯತೆ ಬೆಳಗಾವಿ: ರಾಜ್ಯದಲ್ಲಿರುವ ವಿವಿಧ ಸರ್ಕಾರಿ ವಸತಿ ಶಾಲೆಗಳ 53 ಶಾಲಾ ಸಂಕೀರ್ಣಗಳನ್ನು ಸುಮಾರು 888.78 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು
ಸಚಿವ ಸಂಪುಟ ಸಭೆ ಸೋಮವಾರ ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಇದರೊಂದಿಗೆ, 2017-18ನೇ ಸಾಲಿನಲ್ಲಿ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ಅಗತ್ಯವಿರುವ ಔಷಧ, ರಾಸಾಯನಿಕ ಮತ್ತಿತರೆ ವಸ್ತುಗಳನ್ನು 340.47 ಕೋಟಿ ರೂ. ವೆಚ್ಚದಲ್ಲಿ ಖರೀದಿಸುವ
ಬಗ್ಗೆಯೂ ತೀರ್ಮಾನ ಕೈಗೊಳ್ಳುವ ಸಂಭವವಿದೆ. ಇಲ್ಲಿನ ಸುವರ್ಣಸೌಧದಲ್ಲಿ ಸೋಮವಾರ ಸಂಜೆ ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ಸಭೆಯ ಪ್ರಮುಖ ವಿಷಯ ಪಟ್ಟಿಯಲ್ಲಿ ಈ ಅಂಶಗಳಿವೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಡಾ.ಬಿ.ಆರ್‌.ಅಂಬೇಡ್ಕರ್‌, ಇಂದಿರಾ ಗಾಂಧಿ, ಅಟಲ್‌ಬಿಹಾರಿ ವಸತಿ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿದ್ದು, ಆ ಪೈಕಿ 53 ಶಾಲಾ ಸಂಕೀರ್ಣ ಗಳನ್ನು ಸುಮಾರು 888.78 ಕೋಟಿ ರೂ. ವೆಚ್ಚದಲ್ಲಿ
ನಿರ್ಮಾಣ ಮಾಡುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ. ಅದೇ ರೀತಿ ಹಾವೇರಿ ಜಿಲ್ಲೆಯ ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠಕ್ಕೆ ಚಿತ್ರದುರ್ಗ ನಗರಾ  ಭಿವೃದ್ಧಿ ಪ್ರಾಧಿಕಾರದಿಂದ ಚಿತ್ರದುರ್ಗ ಜಿಲ್ಲೆ ಕೆಂಚನ ಕಟ್ಟೆ ಗ್ರಾಮದಲ್ಲಿ 21,531 ಚದರ
ಅಡಿಯ ಸಿಎ ನಿವೇ ಶನವನ್ನು ಗುತ್ತಿಗೆ ಆಧಾರದಲ್ಲಿ ಮಂಜೂರು ಮಾಡುವುದು, ಕಾವೇರಿ ನೀರಾವರಿ ನಿಗಮಕ್ಕೆ ಅವಧಿ ಸಾಲ ಮೂಲಕ 500 ಕೋಟಿ ರೂ. ಸಂಗ್ರಹಿಸಲು ಸರ್ಕಾರದ ಖಾತರಿ ನೀಡುವುದು, ವಿದ್ಯಾಸಂಸ್ಥೆ ಮತ್ತು ಸೇವಾ ಸಂಸ್ಥೆಗಳಿಗೆ ಭೂಮಿ
ಮಂಜೂರು ಮುಂತಾದ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಇನ್ನು 1963ರ ಕರ್ನಾಟಕ ಪೊಲೀಸ್‌ ಕಾಯ್ದೆಗೆ ತಿದ್ದುಪಡಿ ತರುವುದು ಮತ್ತು ಕರ್ನಾಟಕ ವಿದ್ಯುನ್ಮಾನ ವ್ಯವಸ್ಥೆಯ ವಿನ್ಯಾಸ ಮತ್ತು ಉತ್ಪಾದನಾ ನೀತಿ- 2017
ಬಗ್ಗೆಯೂ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಕೆಪಿಎಂಇ ಮಸೂದೆಗೆ ತಿದ್ದುಪಡಿ ಮಾಡಿರುವುದು ಖಾಸಗಿ ವೈದ್ಯರಿಗೆ ಕಡಿವಾಣ ಹಾಕುವ ಉದ್ದೇಶದಿಂದ ಅಲ್ಲ. ಬಡರೋಗಿಗಳ ಅನುಕೂಲಕ್ಕಾಗಿ ಮಾಡಿದ್ದು. ವೈದ್ಯರಿಗೆ ಕಾಯ್ದೆ ಕುರಿತು ಮನವರಿಕೆ ಮಾಡಲಾಗಿದೆ. ಆ ಮಸೂದೆ ಮಂಡನೆಯಾಗಲಿದೆ. ಇಲ್ಲಿ
ಗೆದ್ದಿರುವುದು ಬಡರೋಗಿಗಳು.

 ●ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next