Advertisement

ಅತಂತ್ರದ ಅಡಕತ್ತರಿಯಲ್ಲಿ ಪರದಾಡುತ್ತಿದೆ ಕೆಪಿಎಲ್‌ ಟಿ20

10:26 AM Dec 08, 2019 | Team Udayavani |

ಕರ್ನಾಟಕ ಕ್ರಿಕೆಟ್‌ ಪರಿಸ್ಥಿತಿ ಅತ್ಯಂತ ಸಂದಿಗ್ಧದಲ್ಲಿದೆ. ಇದು ವಿಪರ್ಯಾಸದ ಅವಸ್ಥೆ. ಒಂದುಕಡೆ ರಾಜ್ಯ ಕ್ರಿಕೆಟ್‌ ತಂಡ ಟ್ರೋಫಿಗಳ ಮೇಲೆ ಟ್ರೋಫಿಗಳನ್ನು ಗೆಲ್ಲುತ್ತ, ಅಭೇದ್ಯ, ಅಜೇಯ ತಂಡವಾಗಿ ಹೊರಹೊಮ್ಮಿದೆ. ದೇಶದ ಇತರೆ ತಂಡಗಳಿಗೆ ಈ ತಂಡವನ್ನು ಸೋಲಿಸುವುದೇ ಒಂದು ಸವಾಲು. ರಾಜ್ಯ ತಂಡ ಇಂತಹ ಉಚ್ಛಾ†ಯಸ್ಥಿತಿ ತಲುಪಿರುವಾಗಲೇ, ದಿಢೀರನೆ ಫಿಕ್ಸಿಂಗ್‌ ಹಗರಣಕ್ಕೆ ಸಿಲುಕಿ, ರಾಜ್ಯದ ಕ್ರಿಕೆಟ್‌ ವ್ಯವಸ್ಥೆ ಪರದಾಡುತ್ತಿದೆ. ಇದೆಲ್ಲ ಶುರುವಾಗಿದ್ದು ಕರ್ನಾಟಕ ಪ್ರೀಮಿಯರ್‌ ಲೀಗ್‌ ಟಿ20 ಕೂಟದ ಮೂಲಕ. ಬೆಳಗಾವಿ ಪ್ಯಾಂಥರ್ಸ್‌ ಕ್ರಿಕೆಟ್‌ ತಂಡದ ನಾಯಕ ಬಂಧನಕ್ಕೊಳಗಾಗಿದ್ದರೆ, ಬಳ್ಳಾರಿ ಟಸ್ಕರ್ಸ್‌ ತಂಡದ ಮಾಲಿಕ ಅರವಿಂದ್‌ ವೆಂಕಟೇಶ್‌ ರೆಡ್ಡಿ ಪತ್ತೆಗಾಗಿ ಸಿಸಿಬಿ ಪೊಲೀಸರು ಲುಕೌಟ್‌ ನೋಟಿಸ್‌ ಹೊರಡಿಸಿದ್ದಾರೆ.

Advertisement

ಇದರ ಜೊತೆಗೆ ಕರ್ನಾಟಕದ ಖ್ಯಾತ ಬ್ಯಾಟ್ಸ್‌ಮನ್‌ಗಳಾದ ಸಿ.ಎಂ.ಗೌತಮ್‌, ಅಬ್ರಾರ್‌ ಖಾಜಿಯನ್ನು ಬಂಧಿಸಲಾಗಿದೆ. ಇವರಿಬ್ಬರಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಅದರ ಬೆನ್ನಲ್ಲೇ ಹಲವಾರು ಪ್ರಮುಖ ಕ್ರಿಕೆಟಿಗರಿಗೆ ನೋಟಿಸ್‌ ನೀಡಿ ವಿಚಾರಣೆ ಮಾಡಲು ತೀರ್ಮಾನಿಸಲಾಗಿದೆ. ಅದಕ್ಕೆಲ್ಲ ಕಪ್ಪುಚುಕ್ಕೆ ಎನ್ನುವಂತೆ ಕರ್ನಾಟಕ ಕ್ರಿಕೆಟ್‌ ಸಂಸ್ಥೆ ಆಡಳಿತ ಸಮಿತಿ ಸದಸ್ಯ ಸುಧೀಂದ್ರ ಶಿಂಧೆ ಮನೆ ಮೇಲೆಯೇ ದಾಳಿ ಮಾಡಲಾಗಿದೆ. ಈ ದಾಳಿಯಲ್ಲಿ ಸಿಸಿಬಿ ಪೊಲೀಸರು ಏನು ಪಡೆದರೋ? ಗೊತ್ತಿಲ್ಲ. ಆದರೆ ರಾಜ್ಯ ಕ್ರಿಕೆಟ್‌ ಸಂಸ್ಥೆ ಆಡಳಿತ ವ್ಯವಸ್ಥೆಯಲ್ಲಿರುವ ವ್ಯಕ್ತಿಯೊಬ್ಬರೇ ವಿಚಾರಣೆಗೊಳಗಾಗಿದ್ದು ಭಾರೀ ಆತಂಕ ಮೂಡಿಸಿದೆ. ಈ ಪ್ರಕರಣ ಇನ್ನೆಷ್ಟು ದೂರ ಬೆಳೆಯಬಹುದು ಎಂಬ ಆತಂಕವೂ ಎದುರಾಗಿದೆ. ರಾಜ್ಯದ ಅತ್ಯಂತ ಮಹತ್ವಾಕಾಂಕ್ಷಿ ಕೂಟ ಕರ್ನಾಟಕ ಪ್ರೀಮಿಯರ್‌ ಲೀಗ್‌ ಭವಿಷ್ಯವೂ ಅತಂತ್ರಗೊಳಗಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next