ಬೆಂಗಳೂರು: ಕರ್ನಾಟಕ ಕ್ರೀಡಾ ಲೋಕದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಕೆಪಿಎಲ್ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇಬ್ಬರು ಆಟಗಾರರನ್ನು ಬಂಧಿಸಿಲಾಗಿದೆ. ಅವರಿಬ್ಬರೂ ಕರ್ನಾಟಕದ ಪರ ರಣಜಿ ಆಡಿದ ಆಟಗಾರರು ಎನ್ನುವುದು ವಿಶೇಷ.
ಬಳ್ಳಾರಿ ಟಸ್ಕರ್ಸ್ ತಂಡದ ನಾಯಕ ಸಿ ಎಂ ಗೌತಮ್ ಮತ್ತು ಅಬ್ರಾರ್ ಖಾಜಿ ಬಂಧಿತ ಆಟಗಾರರು.
ಈ ಇಬ್ಬರು ಆಟಗಾರರು ಈ ಬಾರಿಯ ಕೆಪಿಎಲ್ ಕೂಟದ ಫೈನಲ್ ಪಂದ್ಯದಲ್ಲಿ ಸ್ಟಾಟ್ ಫಿಕ್ಸಿಂಗ್ ನಡೆಸಿದ್ದರು ಎಂದು ವರದಿಯಾಗಿದೆ. ಹುಬ್ಬಳ್ಳಿ ಟೈಗರ್ಸ್ ಮತ್ತು ಬಳ್ಳಾರಿ ಟಸ್ಕರ್ಸ್ ನಡುವಿನ ಪಂದ್ಯದಲ್ಲಿ ಈ ಸ್ಪಾಟ್ ಫಿಕ್ಸಿಂಗ್ ನಡೆದಿತ್ತು.
ಈ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ಗಾಗಿ 20 ಲಕ್ಷ ಪಡೆದಿದ್ದರು ಮತ್ತು ಬೆಂಗಳೂರು ವಿರುದ್ಧದ ಪಂದ್ಯದಲ್ಲೂ ಫಿಕ್ಸಿಂಗ್ ಮಾಡಿದ್ದರು ಎಂದು ವರದಿಯಾಗಿದೆ.
ಫೈನಲ್ ಪಂದ್ಯದಲ್ಲಿ ಬೆಳ್ಳಾರಿ ಟಸ್ಕರ್ಸ್ ತಂಡದ ನಾಯಕ ಸಿಎಂ ಗೌತಮ್ 37 ಎಸೆತ ಎದುರಿಸಿ 29 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಬೆಳ್ಳಾರಿ ತಂಡ ಎಂಟು ರನ್ ಗಳಿಂದ ಸೋಲನುಭವಿಸಿತ್ತು.