ಈ ಪೈಕಿ ಗರಿಷ್ಠ ಪೈಪೋಟಿ ನಡೆಸಿದ್ದು ಬೆಂಗಳೂರು ಬ್ಲಾಸ್ಟರ್ಸ್, ಶಿವಮೊಗ್ಗ ಲಯನ್ಸ್, ಬಳ್ಳಾರಿ ಟಸ್ಕರ್ಸ್.
Advertisement
ಆಟಗಾರರ ಪೈಕಿ ವೇಗದ ಬೌಲರ್/ಆಲ್‌ರೌಂಡರ್ ಅಭಿಮನ್ಯು ಮಿಥುನ್ ಕೆಪಿಎಲ್ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದರು. ಅವರನ್ನು ಶಿವಮೊಗ್ಗ ಲಯನ್ಸ್ ತಂಡ ದಾಖಲೆಯ 8.30 ಲಕ್ಷ ರೂ. ನೀಡಿ ಖರೀದಿಸಿತು. 2ನೇ ಗರಿಷ್ಠ ಮೊತ್ತ ಕಂಡಿದ್ದು ಪ್ರಸ್ತುತ ಸೌರಾಷ್ಟ್ರ ಪರ ಆಡುತ್ತಿರುವ ರಾಬಿನ್ ಉತ್ತಪ್ಪ. ಅವರನ್ನು ಕೊಳ್ಳಲು ಫ್ರಾಂಚೈಸಿ ಬಿರುಸಿನ ಹೋರಾಟ ನಡೆಸಿದವು. ಅವರು 7.90 ಲಕ್ಷ ರೂ.ಗೆ ಬೆಂಗಳೂರು ಬ್ಲಾಸ್ಟರ್ಸ್ ಪಾಲಾದರು. ಅಮಿತ್ ವರ್ಮ 3ನೇ ಗರಿಷ್ಠ ಮೊತ್ತ 7.60 ಲಕ್ಷ ರೂ.ಗೆ ಮೈಸೂರು ವಾರಿಯರ್ಸ್ ಸೇರಿಕೊಂಡರು. ಮಾಯಾಂಕ್ ಅಗರ್ವಾಲ್, ಆರ್. ಸಮರ್ಥ್, ಕೆ. ಗೌತಮ್, ಶ್ರೇಯಸ್ ಗೋಪಾಲ್, ವೇಗಿ ಪ್ರಸಿದ್ಧ ಕೃಷ್ಣ ಇವರೆಲ್ಲ ಈ ಬಾರಿ ಐಪಿಎಲ್‌ನಲ್ಲಿ ಮಿಂಚಿದವರು. ಆದರೆ ಇವರೆಲ್ಲ ರಾಷ್ಟ್ರೀಯ ತಂಡದ ಕದ ಬಡಿಯುತ್ತಿರುವುದರಿಂದ ಫ್ರಾಂಚೈಸಿಗಳು ಕೊಳ್ಳಲು ಹಿಂದೇಟು ಹಾಕಿದವು. ಇಲ್ಲಿ ಫ್ರಾಂಚೈಸಿಗಳ ಪಕ್ಕಾ ಲೆಕ್ಕಾಚಾರ ಕೆಲಸ ಮಾಡಿತ್ತು. ಕಡೆಗೂ ಮಾಯಾಂಕ್, ಕೆ. ಗೌತಮ್, ಪ್ರಸಿದ್ಧಕೃಷ್ಣ ಅಲ್ಪ ಮೊತ್ತಕ್ಕೆ ಮಾರಾಟವಾದರು. ಬಿ ಗುಂಪಿನಲ್ಲಿದ್ದ ಆಟಗಾರರ ಪೈಕಿ ಮೋಹನ್ ರಾಮ್ ನಿದೀಶ್, ಆರ್. ಜೊನಾಥನ್ ಅಚ್ಚರಿ ಮಾರಾಟ ಕಂಡರು. ಇವರನ್ನು ಹೊರತುಪಡಿಸಿದರೆ ಮೊಹಮ್ಮದ್ ತಾಹಾ ಅವರಿಗಾಗಿ ಫ್ರಾಂಚೈಸಿಗಳು ಪೈಪೋಟಿ ನಡೆಸಿದವು. ಬ್ಯಾಟ್ಸ್‌ಮನ್ ಮೀರ್ ಕೌನೈನ್ ಅಬ್ಟಾಸ್ ಮೊದಲ ಸುತ್ತಿನಲ್ಲಿ ಮಾರಾಟವಾಗಲಿಲ್ಲ. ಆದರೆ 2ನೇ ಸುತ್ತಿನಲ್ಲಿ ಅವರು 3 ಲಕ್ಷ ರೂ.ಗೆ ಬಿಜಾಪುರ ಪಾಲಾದರು.