Advertisement

ಕೈ ಅಭ್ಯರ್ಥಿ ಡಿ.ರವಿಶಂಕರ್‌ ಗೆಲುವು ನಿಶ್ಚಿತ

04:29 PM Nov 01, 2022 | Team Udayavani |

ಕೆ.ಆರ್‌.ನಗರ: ಕಾಂಗ್ರೆಸ್‌ ಪಕ್ಷದ ಕೆ.ಆರ್‌.ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಿ.ರವಿಶಂಕರ್‌ ಮತ್ತು ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಅವರುಗಳ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಜನಾಶೀರ್ವಾದ ಯಾತ್ರೆ ಆರಂಭ ಮಾಡಿದ್ದು, ಇದರಿಂದ ಪಕ್ಷದ ಅಭ್ಯರ್ಥಿ ಡಿ.ರವಿಶಂಕರ್‌ ಗೆಲುವು ನಿಶ್ಚಿತ ಎಂದು ಕೆಪಿಸಿಸಿ ಕಾಯಾಧ್ಯಕ್ಷ ಆರ್‌.ಧ್ರುವನಾರಾಯಣ್‌ ಹೇಳಿದರು.

Advertisement

ಸಾಲಿಗ್ರಾಮ ತಾಲೂಕಿನ ಅರಕೆರೆ ಗ್ರಾಮದ ಬಸವೇಶ್ವರಸ್ವಾಮಿ ದೇವಾಲಯದ ಬಳಿ ಕಾಂಗ್ರೆಸ್‌ ಪಕ್ಷದ ಜನಾಶೀರ್ವಾದ ಯಾತ್ರೆಗೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ವಿಧಾನಸಭೆಗೆ ಮೇ 2023ರ ಒಳಗೆ ಚುನಾವಣೆ ನಡೆಯಲಿದ್ದು, ಈ ಯಾತ್ರೆ ಪಕ್ಷದ ಗೆಲುವಿಗೆ ಅನುಕೂಲವಾಗಲಿದೆ ಎಂದರು.

ಅತ್ಯಧಿಕ ಮತಗಳಿಂದ ಜಯಗಳಿಸಲಿದ್ದಾರೆ: ವಿವಿಧ ಇಲಾಖೆಗಳ ಸಚಿವರಾಗಿ, ರಾಜ್ಯಪಾಲರಾಗಿ ಮತ್ತು ರಾಷ್ಟ್ರಮಟ್ಟದ ನಾಯಕರಾಗಿದ್ದ ಬಿ. ರಾಚಯ್ಯರವರ ಮಗನ ವಿರುದ್ಧ ಕೇವಲ ಒಂದು ಮತಗಳ ಅಂತರ ದಲ್ಲಿ ಸಂತೆಮರಹಳ್ಳಿ ಕ್ಷೇತ್ರದಿಂದ ನಾನು ಗೆಲುವು ಸಾಧಿಸಲು ಜನಾಶೀರ್ವಾದ ಕಾರ್ಯಕ್ರಮವೇ ಕಾರಣವಾಗಿತ್ತು. 2018ರ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ವಿರುದ್ಧ ಅಲ್ಪ ಮತಗಳಲ್ಲಿ ಸೋಲು ಕಂಡ ಡಿ.ರವಿಶಂಕರ್‌ ಜನಾಶೀರ್ವಾದ ಯಾತ್ರೆ ಮಾಡುತ್ತಿರುವುದರಿಂದ ಈ ಬಾರಿ ಅತ್ಯಧಿಕ ಮತಗಳಿಂದ ಜಯಗಳಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

ಜೆಡಿಎಸ್‌ ಮತ್ತು ಬಿಜೆಪಿಯವರ ಆಡಳಿತಾವಧಿಯಲ್ಲಿ ಜನತೆಗೆ ಯಾವುದೇ ರೀತಿಯ ಅನುಕೂಲವಾಗಿಲ. ದಿನನಿತ್ಯದ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದ್ದು ಕುಟುಂಬ ನಿರ್ವಹಣೆ ಮಾಡಲು ಕಷ್ಟ ಸಾಧ್ಯವಾಗಿದೆ. ಸಿದ್ದರಾಮಯ್ಯನವರ ಆಡಳಿತಾವಧಿಯಲ್ಲಿ ಜನರಿಗೆ ಉಪಯುಕ್ತವಾದ ಯೋಜನೆಗಳನ್ನು ಜಾರಿಗೆ ತರುವುದರ ಜತೆಗೆ ನೆಮ್ಮದಿಯ ಜೀವನ ನಡೆಸಲು ಅನುಕೂಲ ಕಲ್ಪಿಸಲಾಗಿತ್ತು ಎಂದರು.

ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಉಸ್ತುವಾರಿ ಡಾ.ರವೀಂದ್ರ, ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ತಾ.ಪಂ. ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ಮುಖಂಡರಾದ ಡಿ.ರವಿಶಂಕರ್‌, ಸಿ.ಪಿ.ರಮೇಶ್‌ ಅವರುಗಳು ಮಾತನಾಡಿ ಜನಾಶೀರ್ವಾದ ಯಾತೆಗ್ರೆಸ್‌ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಎಲ್ಲಾ ರೀತಿಯ ಸಹಕಾರ ನೀಡಬೇಕೆಂದು ಕೋರಿದರಲ್ಲದೆ ಯಾತ್ರೆ ಸಂದರ್ಭದಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪಕ್ಷದ ಮುಖಂಡರುಗಳು ಭೇಟಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

Advertisement

ಬೈಕ್‌ ರ್ಯಾಲಿ: ಇದಕ್ಕೂ ಮೊದಲು ಕೆ.ಆರ್‌.ನಗರ ಪಟ್ಟಣದಲ್ಲಿರುವ ಮಂದಿರಗಳು, ಮಸೀದಿ, ಚರ್ಚ್‌ ಗಳಿಗೆ ಭೇಟಿ ನೀಡಿದ ಡಿ.ರವಿಶಂಕರ್‌ ಮತ್ತು ಪತ್ನಿ ಸುನೀತಾ ಪೂಜೆ ಸಲ್ಲಿಸಿ ನಂತರ ಹಳೇಎಡತೊರೆಯ ಮೀನಾಕ್ಷಿ ಸಮೇತ ಅರ್ಕೇಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

ನಂತರ ಡಾ.ಬಿ.ಆರ್‌. ಅಂಬೇಡ್ಕರ್‌, ಬಾಬು ಜಗಜೀವನ್‌ ರಾಂ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬೈಕ್‌ ರ್ಯಾಲಿಯ ಮೂಲಕ ಅರಕೆರೆ ಗ್ರಾಮಕ್ಕೆ ತೆರಳಲಾಯಿತು. ಪುರಸಭೆ ಅಧ್ಯಕ್ಷ ಕೋಳಿಪ್ರಕಾಶ್‌, ಉಪಾಧ್ಯಕ್ಷೆ ಸೌಮ್ಯಲೋಕೇಶ್‌, ಸದಸ್ಯರಾದ ಕೆ.ಜಿ. ಸುಬ್ರಹ್ಮಣ್ಯ, ಶಿವಕುಮಾರ್‌, ಸೈಯದ್‌ಸಿದ್ದಿಕ್‌, ಜಾವೀದ್‌ ಪಾಪಾ, ತಾಪಂ ಮಾಜಿ ಅಧ್ಯಕ್ಷರಾದ ಎಚ್‌.ಟಿ. ಮಂಜುನಾಥ್‌, ಚಂದ್ರಶೇಖರ್‌, ಮಾಜಿ ಸದಸ್ಯೆ ಶೋಭಾಕುಮಾರ್‌, ಜಿಪಂ ಮಾಜಿ ಸದಸ್ಯ ರಾಜಯ್ಯ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಎಂ.ಎಸ್‌.ಮಹದೇವ್‌, ಉದಯಶಂಕರ್‌, ತಾಲೂಕು ವಕ್ತಾರ ಸೈಯದ್‌ಜಾಬೀರ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಡಿ.ಎಸ್‌.ಆನಂದ್‌, ಮುಖಂಡರಾದ ಹೊಸೂರುಕಲ್ಲಹಳ್ಳಿ ಶ್ರೀನಿವಾಸ್‌, ನಟರಾಜು, ಎಚ್‌.ಎಚ್‌.ನಾಗೇಂದ್ರ, ಗಾರೆರವಿ, ಕೆ.ವಿನಯ್‌, ಗುರುಶಂಕರ್‌, ಗುಣಪಾಲ್‌ಜೆçನ್‌, ಬಲ ರಾಮು, ಶಾಂತಾರಾಜು, ಸುಧಾಕರ್‌ ಇದ್ದರು.

ಅಭಿವೃದ್ಧಿಯ ಪರ್ವ ಆರಂಭ : ರಾಹುಲ್‌ ಗಾಂಧಿರವರ ಭಾರತ್‌ ಜೋಡೋ ಯಾತ್ರೆ ಯಶಸ್ವಿಯಾಗಿದ್ದು, ಇದರ ಜತೆಗೆ ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನಖರ್ಗೆ ಅವರು ಚುನಾಯಿತರಾಗಿ ರುವುದರಿಂದ ರಾಜ್ಯದ ಜನತೆ ಕಾಂಗ್ರೆಸ್‌ ಪಕ್ಷದ ಪರವಾಗಿದ್ದು, ಈ ಬಾರಿ ಪಕ್ಷ ಅಧಿಕಾರಕ್ಕೆ ಬರುವುದರ ಜತೆಗೆ ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ. ಈ ಕ್ಷೇತ್ರದಿಂದ ರವಿಶಂಕರ್‌ ಶಾಸಕರಾಗಲಿದು,ª ಅಭಿವೃದ್ಧಿಯ ಪರ್ವ ಆಗಲಿದೆ ಎಂದು ಧ್ರುನಾರಾಯಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next