Advertisement

ಸ್ಥಳೀಯರಿಗೆ ಕ್ಷೇತ್ರ ಬಿಟ್ಟುಕೊಡಲು ಕೆಎಚ್‌ಎಂಗೆ ಮನವಿ

11:29 AM Apr 01, 2023 | Team Udayavani |

ದೇವನಹಳ್ಳಿ: ಕೇಂದ್ರ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಹಿರಿಯ ರಾಜಕಾರಣಿ, ಅವರು ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆಲ್ಲುತ್ತಾರೆ. ಹೀಗಾಗಿ ಪಕ್ಷ ಸಂಘಟನೆ ಮಾಡಿದ ಸ್ಥಳೀಯರಿಗೆ ಕ್ಷೇತ್ರ ಬಿಟ್ಟುಕೊಡುವಂತೆ ಮನವಿ ಮಾಡಲು ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನಿಸಿದ್ದೇವೆ ಎಂದು ಕೆಪಿಸಿಸಿ ಸದಸ್ಯ ಎ.ಸಿ.ಶ್ರೀನಿವಾಸ್‌ ತಿಳಿಸಿದರು.

Advertisement

ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಮುಖಂಡರು, ಕಾರ್ಯಕರ್ತರ ಸಭೆಯ ನಂತರ ಮಾತನಾಡಿದ ಅವರು, ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನನ್ನನ್ನೂ ಸೇರಿ ಹಲವು ಮುಖಂಡರು ಪಕ್ಷ ಟಿಕೆಟ್‌ ನೀಡುತ್ತದೆ ಎಂದು 3-4 ವರ್ಷಗಳಿಂದ ತಾಲೂಕಿನಲ್ಲಿ ಕಾಂಗ್ರೆಸ್‌ ಅನ್ನು ಬಲಿಷ್ಠಗೊಳಿಸಿ ಗೆಲ್ಲುವ ಹಂತಕ್ಕೆ ತಂದಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಮುಖಂಡರಾದ ಕೆ.ಎಚ್‌. ಮುನಿಯಪ್ಪನವರಿಗೆ ಹೈಕಮಾಂಡ್‌ ಟಿಕೆಟ್‌ ಘೋಷಣೆ ಮಾಡಿದೆ. ಆದ್ದರಿಂದ ಮುನಿಯಪ್ಪಗೆ ಮನವರಿಗೆ ಮಾಡಿ, ಪಕ್ಷಕ್ಕಾಗಿ ದುಡಿಯುತ್ತಿರುವವರಲ್ಲಿ ಯಾರಾದರು ಒಬ್ಬರಿಗೆ ಟಿಕೆಟ್‌ ಬಿಟ್ಟುಕೊಡುವಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್‌ ಜಿಲ್ಲಾ ಉಪಾಧ್ಯಕ್ಷ ದ್ಯಾವರಹಳ್ಳಿ ಶಾಂತಕುಮಾರ್‌ ಮಾತನಾಡಿ, ಕೆ. ಎಚ್‌. ಮುನಿಯಪ್ಪನವರು 224 ಕ್ಷೇತ್ರಗಳಿಗೆ ಬಿ ಫಾರಂ ನೀಡುವಂತ ವ್ಯಕ್ತಿ. ನಾನು 20 ವರ್ಷದಿಂದ ಪಕ್ಷದಲ್ಲಿ ದುಡಿದಿದ್ದೇನೆ. ನಮ್ಮ ಕ್ಷೇತ್ರದಲ್ಲಿ 10 ವರ್ಷದಿಂದ ಪಕ್ಷದ ಶಾಸಕರಿಲ್ಲ. ಕ್ಷೇತ್ರದಲ್ಲಿ 7-8 ಜನ ಅಕಾಂಕ್ಷಿಗಳಿದ್ದು, ಅವರದೇ ರೀತಿಯಲ್ಲಿ ಎಲ್ಲರೂ ಪಕ್ಷವನ್ನು ತಾಲೂಕಿನಲ್ಲಿ ಬಲಿಷ್ಠವಾಗಿ ಕಟ್ಟಿದ್ದೇವೆ. ಆಕಾಂಕ್ಷಿಗಳಲ್ಲಿ ಯಾರಿಗೆ ಟಿಕೆಟ್‌ ನೀಡಲಿ, ನಾವೆಲ್ಲರು ಒಗ್ಗಟ್ಟಾಗಿ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ. ಪಕ್ಷ ಗೆಲ್ಲುವಷ್ಟು ಸಂಘಟನೆ ಮಾಡಿದ್ದೇವೆ. ರಾಷ್ಟ್ರೀಯ ನಾಯಕರು ಈ ಕ್ಷೇತ್ರಕ್ಕೆ ಬಂದಿರುವುದು ದೊಡ್ಡತನವಲ್ಲ, ನಮ್ಮಲ್ಲಿ ಯಾರಿಗಾದರೂ ಟಿಕೆಟ್‌ ಬಿಟ್ಟುಕೊಟ್ಟು ಬೇರೆಕಡೆ ನಿಂತು ಗೆಲ್ಲಲಿ, ನಾವು ಅವರ ಬೆನ್ನುಲುಬಾಗಿ ನಿಂತು ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಕೆಪಿಸಿಸಿ ಸದಸ್ಯ ಎ ಚಿನ್ನಪ್ಪ ಮಾತನಾಡಿ, ಕಳೆದ 20, 30 ವರ್ಷಗಳಿಂದ ತಾಲೂಕಿನಲ್ಲಿ ಪಕ್ಷವನ್ನು ಸಂಘಟನೆ ಮಾಡಿಕೊಂಡು ಬಂದಿದ್ದೇವೆ. ಐದು ವರ್ಷಗಳಿಂದ ವಿವಿಧ ಚುನಾವಣೆಗಳು, ತಾಲೂಕಿನಲ್ಲಿ ಪಕ್ಷ ಬಲವರ್ಧನೆಯನ್ನು ಮಾಡಿದ್ದೇವೆ. ಕೊರೊನಾ ಸಂದರ್ಭದಲ್ಲಿ ಜನರಿಗೆ ಸಹಾಯಹಸ್ತವನ್ನೂ ಆಕಾಂಕ್ಷಿಗಳು ಮಾಡಿದ್ದಾರೆ. ಹೈಕಮಾಂಡ್‌ ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಮಾಜಿ ಕೇಂದ್ರ ಸಚಿವ ಕೆಎಚ್‌ ಮುನಿಯಪ್ಪ ಅವರಿಗೆ ಟಿಕೆಟ್‌ ನೀಡಿದೆ ಎಂದು ಹೇಳಿದ್ದಾರೆ. ಸ್ಥಳೀಯರಿಗೆ ನೀಡಿದರೆ ಪಕ್ಷ ಗೆಲ್ಲಲು ಸಾಧ್ಯವಾಗುತ್ತದೆ. ಕಳೆದ ಹತ್ತು ವರ್ಷಗಳಿಂದ ಕಾಂಗ್ರೆಸ್‌ ಶಾಸಕರಿಲ್ಲದೆ ತಾಲೂಕಿನಲ್ಲಿ ಕಾರ್ಯಕರ್ತರು ಪರಿತಪಿಸುತ್ತಿದ್ದಾರೆ. ಈಗಾಗಲೇ ಪಕ್ಷದ ವರಿಷ್ಠರಿಗೆ ಇಲ್ಲಿನ ಸಮಸ್ಯೆಗಳನ್ನು ಮನವರಿಕೆ ಮಾಡಿದ್ದೇವೆ ಎಂದು ಹೇಳಿದರು.

ಈ ವೇಳೆಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸನ್ನಕುಮಾರ್‌, ಕೆಪಿಸಿಸಿ ಹಿಂದುಳಿದ ವರ್ಗದ ಉಪಾಧ್ಯಕ್ಷ ಸಿ.ಜಗನ್ನಾಥ್‌, ಜಿಪಂ ಮಾಜಿ ಸದಸ್ಯರಾದ ಲಕ್ಷ್ಮೀನಾರಾಯಣಪ್ಪ, ಮಂಜುನಾಥ್‌, ಅನಂತಕುಮಾರಿ, ತಾಪಂ ಮಾಜಿ ಸದಸ್ಯರಾದ ಲಕ್ಷ್ಮಣಗೌಡ, ಮುನೇಗೌಡ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಕೆ.ಆರ್‌.ನಾಗೇಶ್‌, ಜಿಲ್ಲಾ ಕಾಂಗ್ರೆಸ್‌ ಎಸ್ಸಿ ಘಟಕದ ಅಧ್ಯಕ್ಷ ಲೋಕೇಶ್‌, ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ನಾಗೇಗೌಡ, ಹೋಬಳಿ ಅಧ್ಯಕ್ಷರಾದ ರಂಗಪ್ಪ, ರಾಮಚಂದ್ರಪ್ಪ, ಕೋದಂಡರಾಮು, ಮಹಿಳಾಧ್ಯಕ್ಷೆ ಕೆ.ರಾಧರೆಡ್ಡಿ, ಶಶಿಕಲಾ, ಮಾಧವಿ, ದೇವನಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಎಸ್ಸಿ ಘಟಕದ ಅಧ್ಯಕ್ಷ ಬೈಚಾಪುರ ರಾಜಣ್ಣ, ಪುರಸಭೆ ಮಾಜಿ ಅಧ್ಯಕ್ಷರಾದ ನಾರಾಯಣಸ್ವಾಮಿ, ಎಂ.ಮೂರ್ತಿ, ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next