Advertisement

ವಿವಾದಾತ್ಮಕ ತೀರ್ಪು ಕೊಟ್ಟಿದ್ದ ಕಲ್ಲಿಕೋಟೆಯ ಸೆಷನ್ಸ್‌ ಕೋರ್ಟ್‌ನ ಜಡ್ಜ್ ವರ್ಗಾವಣೆ

09:41 PM Aug 24, 2022 | Team Udayavani |

ತಿರುವನಂತಪುರ: ಕಲ್ಲಿಕೋಟೆಯ ಸೆಷನ್ಸ್‌ ಕೋರ್ಟ್‌ ನ್ಯಾಯಾಧೀಶ ಎಸ್‌.ಕೃಷ್ಣಕುಮಾರ್‌ ಅವರನ್ನು ಕೊಲ್ಲಂ ಜಿಲ್ಲೆಯ ಕಾರ್ಮಿಕರ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.

Advertisement

ಇತ್ತೀಚೆಗೆ ಅವರು ಪ್ರಚೋದನಕಾರಿ ಬಟ್ಟೆ ತೊಟ್ಟ ಹೆಣ್ಣಿನ ಮೇಲೆ ಲೈಂಗಿಕ ದೌರ್ಜನ್ಯವಾದರೆ ಅಂತಹ ಪ್ರಕರಣ ಗಟ್ಟಿಯಾಗಿ ನಿಲ್ಲುವುದಿಲ್ಲ ಎಂದು ತೀರ್ಪು ನೀಡಿದ್ದರು ಮತ್ತು ಬರಹಗಾರ ಸಿವಿಕ್‌ ಚಂದ್ರನ್‌ ಅವರಿಗೆ ಜಾಮೀನು ನೀಡಿದ್ದರು.

ಈ ನಡುವೆ, ಕೇರಳ ಹೈಕೋರ್ಟ್‌ನಲ್ಲೂ ಪ್ರಕರಣದ ಬಗ್ಗೆ ವಿಚಾರಣೆ ನಡೆದಿದ್ದು, ಕೃಷ್ಣ ಕುಮಾರ್‌ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿದೆ. ಕೃಷ್ಣಕುಮಾರ್‌ ಆ.2ರಂದು ನೀಡಿದ್ದ ಆದೇಶ ಪ್ರಶ್ನಿಸಿ ಕೇರಳ ಸರ್ಕಾರ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next