ಬೆಂಗಳೂರು: ಕೋವಿಡ್ ಹಾವಳಿ ತಡೆಗೆ ಸರಕಾರ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಇನ್ನು ಸರಕಾರದ ಕೋವಿಡ್ ಪರಿಹಾರ ನಿಧಿಗೆ ಚಿತ್ರರಂಗದ ಅನೇಕ ನಟ, ನಟಿಯರು, ನಿರ್ಮಾಪಕರು, ತಂತ್ರಜ್ಞರು ನೆರವಾಗಲು ಮುಂದೆ ಬರುತ್ತಿದ್ದಾರೆ.
ಈಗ ದಕ್ಷಿಣ ಭಾರತದ ಖ್ಯಾತ ಗಾಯಕ ಕನ್ನಡಿಗ ವಿಜಯ್ ಪ್ರಕಾಶ್ ಸಹ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹತ್ತು ಲಕ್ಷ ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.
‘ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೊ. ಜನರು ನನಗೆ ನೀಡಿರುವ ಪ್ರೀತಿಯ ಬೊಗಸೆಯಿಂದ ಚಿಕ್ಕ ಸೇವೆ. ನಾವೆಲ್ಲರೊ ಕೈ ಜೋಡಿಸಿದರೇ ವೈರಸ್ ಗೆಲ್ಲಬಹುದು. ಪಿಎಂ ಪರಿಹಾರ ನಿಧಿ ಹಾಗೂ ಇನ್ನೂ ಕೆಲ ರಾಜ್ಯಗಳ ಪರಿಹಾರ ನಿಧಿಗೆ ಸಹ ಒಂದು ಅಳಿಲು ದೇಣಿಗೆ ನೀಡಿದ್ದೇನೆ. ಈ ಸಮಯದಲ್ಲಿ ನಾವೆಲ್ಲರೂ ಕೈಜೋಡಿಸಿ ನಿಂತರೆ ಕೊರೊನಾ ಮಹಾಮಾರಿಯನ್ನು ಗೆದ್ದು ಮೊದಲಿನಂತೆಯೇ ಸಮಾಯಜದಲ್ಲಿ ಸುಖವಾಗಿ, ಸಂತೋಷವಾಗಿ ಬದುಕಲು ಸಾಧ್ಯ’ ಎಂದು ವಿಜಯ್ ಪ್ರಕಾಶ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ‘ಮುಖ್ಯಮಂತ್ರಿ ಪರಿಹಾರ ನಿಧಿ’ಗೆ ದೇಣಿಗೆ ನೀಡಿ ಕೋವಿಡ್ ಹೋರಾಟಕ್ಕೆ ಕೈಜೋಡಿಸಿರುವ ಗಾಯಕ ವಿಜಯ್ ಪ್ರಕಾಶ್ ಹಾಗೂ ಇತರರಿಗೆ ಧನ್ಯವಾದ ಹೇಳಿದ್ದಾರೆ.
ಕೋವಿಡ್ ವೈರಸ್, ವಿಜಯ್ ಪ್ರಕಾಶ್, ಸಿಎಂ ಪರಿಹಾರ ನಿಧಿ, ಪಿಎಂ ಪರಿಹಾರ ನಿಧಿ, Covid, Vijay prakash, cm relief fund, Udayavani Kannada news