Advertisement

ಕೋವಿಡ್‌ 19 ಸಂಕಷ್ಟ; ಅಮೆರಿಕದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ

01:27 AM Aug 28, 2020 | mahesh |

ನ್ಯೂಯಾರ್ಕ್‌: ಕಳೆದ ವಾರ ಅಮೆರಿಕದಲ್ಲಿ ಒಂದು ಮಿಲಿಯನ್‌ ಕಾರ್ಮಿಕರು ನಿರುದ್ಯೋಗ ಪ್ರಯೋಜನಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ದೇಶ ವ್ಯಾಪಿ ಸಂಪೂರ್ಣ ಲಾಕ್‌ಡೌನ್‌ ನಿರ್ಧಾರದಿಂದಾಗಿ ನಿರುದ್ಯೋಗದ ಪ್ರಮಾಣ ಹೆಚ್ಚಾಗಿದೆ. ವಸತಿ ಮಾರುಕಟ್ಟೆ, ವಾಹನ ಮಾರಾಟ ಮತ್ತು ಆರ್ಥಿಕತೆಯ ಇತರ ವಿಭಾಗಗಳಲ್ಲಿ ಕುಸಿತ ಹೆಚ್ಚಾಗುತ್ತಿದೆ. ಅಮೆರಿಕದಲ್ಲಿ ಕೋವಿಡ್‌ ವೈರಸ್‌ ಅತೀ ಹೆಚ್ಚಿ ಸಂಖ್ಯೆಯಲ್ಲಿ ಇದ್ದಾರೆ. ಇದು ಅತೀ ಹೆಚ್ಚಿನ ಉದ್ಯೋಗ ನಷ್ಟಕ್ಕೆ ಮತ್ತೂಂದು ಕಾರಣವಾಗಿದೆ.

Advertisement

ಯುಎಸ್‌ ಬ್ಯೂರೋ ಆಫ್ ಲೇಬರ್‌ ಸ್ಟ್ಯಾಟಿಸ್ಟಿಕ್ಸ್‌ ಗುರುವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಕಳೆದ ವಾರ ನಿರುದ್ಯೋಗ ಹಕ್ಕುಗಳನ್ನು ಸಲ್ಲಿಸುವವರ ಸಂಖ್ಯೆ ಹಿಂದಿನ ವಾರಕ್ಕಿಂತ 98,000ರಷ್ಟು ಕಡಿಮೆಯಾಗಿದೆ ಎಂದಿದೆ. 14.5 ದಶಲಕ್ಷಕ್ಕೂ ಹೆಚ್ಚು ಜನರು ನಿರುದ್ಯೋಗ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಒಂದು ವರ್ಷದ ಹಿಂದೆ 1.7 ದಶಲಕ್ಷದಷ್ಟಿತ್ತು.

ಕಳೆದ ವಾರ, ಸುಮಾರು 608,000 ಜನರು ನಿರುದ್ಯೋಗ ಸಹಾಯಕ್ಕಾಗಿ ಹೊಸ ಕಾರ್ಯಕ್ರಮದಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸರಕಾರ ಈ ಹೊಸ ಯೋಜನೆ ಫ‌ಲಾನುಭವಿಗಳ ಅರ್ಹತೆಯನ್ನು ವಿಸ್ತರಿಸುತ್ತದೆ. ಒಟ್ಟಾರೆಯಾಗಿ, ಕಾರ್ಮಿಕ ಇಲಾಖೆಯಡಿ 27 ಮಿಲಿಯನ್‌ ಜನರು ಕೆಲವು ರೀತಿಯ ನಿರುದ್ಯೋಗ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.

ಸಾಂಕ್ರಾಮಿಕ ರೋಗವು ಅಮೆರಿಕದ ಆರ್ಥಿಕತೆಯ ಮೇಲೆ ಭಾರೀ ಪರಿಣಾಮವನ್ನು ಬೀರಿದೆ. ವ್ಯಾಪಾರಗಳು ಬಂದ್‌ ಆಗಿದ್ದು, ಲಾಕ್‌ಡೌನ್‌ ಜಾರಿಗೊಳಿಸಳಾಗಿದೆ. ಮಾರ್ಚ್‌ ಮತ್ತು ಎಪ್ರಿಲ್‌ ತಿಂಗಳಲ್ಲಿ 22 ದಶಲಕ್ಷಕ್ಕೂ ಹೆಚ್ಚಿನ ಉದ್ಯೋಗಗಳು ನಷ್ಟಗೊಂಡಿವೆ.

ಕೋವಿಡ್‌ ತನ್ನ ಶಕ್ತಿ ಕಳೆದುಕೊಳ್ಳುತ್ತಿದೆ !
ಲಂಡನ್‌: ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಎಲ್ಲ ಮಾದರಿಯ ಕೊರೊನಾ ವೈರಸ್‌ ಸೋಂಕಿಗೆ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಬ್ರಿಟನ್‌ ಹೇಳಿದೆ. ಈ ಲಸಿಕೆ ಕೋವಿಡ್‌-19ಗೆ ಮಾತ್ರವಲ್ಲದೇ ಎಲ್ಲ ಮಾದರಿಯ ಕೊರೊನಾ ವೈರಸ್‌ ಸೋಂಕಿಗೂ ಪರಿಣಾಮಕಾರಿ ಎಂದು ಬ್ರಿಟನ್‌ ವಿಜ್ಞಾನಿಗಳು ತಿಳಿಸಿದ್ದಾರೆ.

Advertisement

ಈಗಾಗಲೇ ಪ್ರಾಣಿಗಳ ಮೇಲಿನ ಪರೀಕ್ಷೆ ಯಶಸ್ವಿಯಾಗಿದ್ದು, ಮುಂದಿನ ವಾರದಲ್ಲಿ ಮಾನವರ ಮೇಲೆ ಪ್ರಯೋಗ ನಡೆಸಲಾಗುವುದು ಎಂದು ಅವರು ಖಚಿತಪಡಿಸಿದ್ದಾರೆ. ಇದೀಗ ಜಾಗತಿಕವಾಗಿ ಕೊರೊನಾ ಸೋಂಕಿನ ತೀವ್ರತೆ ಕಡಿಮೆಯಾಗಿದೆ. ಈ ಹಿಂದೆ ಇದ್ದ ಆರ್ಭಟವನ್ನು ವೈರಸ್‌ ಈಗ ಹೊಂದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದಕ್ಕೆ ಹವಾಮಾನ ಕಾರಣವಾಗಿರಬಹುದು.

ಜರ್ಮನಿ ಪ್ರಯಾಣದ ಹಿನ್ನೆಲೆ ಇರುವವರ ಕಡ್ಡಾಯ ಕೋವಿಡ್‌ ಪರೀಕ್ಷೆಯನ್ನು ಹಿಂಪಡೆದಿದೆ. ಈ ನಡುವೆ ಆಸ್ಟ್ರೇಲಿಯಾದಲ್ಲಿ ಸೋಂಕಿನ ಪ್ರಮಾನ ಹೆಚ್ಚುತ್ತಿದೆ. ಜಗತ್ತಿನಾದ್ಯಂತ ಒಟ್ಟು 24,466,049 ಸೋಂಕಿತರು ಇದ್ದಾರೆ. ಇದರಲ್ಲಿ 16,967,210 ಸೋಂಕಿತರು ಗುಣಮುಖರಾಗಿದ್ದಾರೆ. 832,242 ಸೋಂಕಿತರು ಮೃತಪಟ್ಟಿದ್ದಾರೆ. ಜಗತ್ತಿನಲ್ಲಿ ಅತಿಹೆಚ್ಚು ಪ್ರಕರಣಗಳು ವರದಿಯಾಗಿರುವ ಅಮೆರಿಕದಲ್ಲಿ ಈ ವರೆಗೆ 6,015,317 ಜನರಿಗೆ ಸೋಂಕು ತಗುಲಿದೆ.

Advertisement

Udayavani is now on Telegram. Click here to join our channel and stay updated with the latest news.

Next