Advertisement
ಕಳೆದ 10 ವರ್ಷಗಳಿಂದ ಆಂಧ್ರದ ನೆಲ್ಲೂರ ಗ್ರಾಮದವರಾದ ರಾಮು ನರಸಯ್ಯ ನೆಲ್ಲೂರ ಅವರು ಈಗ ತಾಳಿಕೋಟೆ ಪ್ರವಾಸಿ ಮಂದಿರದ ಪಕ್ಕದ ಫುಟ್‌ಪಾತ್‌ನಲ್ಲಿ ಬಿಸಿಲು ಚಳಿ ಎನ್ನದೇ ತಮ್ಮ ಬುಟ್ಟಿ ಹೆಣೆಯುವ ವೃತ್ತಿಯನ್ನು ತಮ್ಮ ಕುಟುಂಬದೊಂದಿಗೆ ಮುಂದುವರಿಸಿಕೊಂಡು ಹೊರಟಿದ್ದಾರೆ. ಪತ್ನಿ ಪೋಲಮ್ಮ ದಂಪತಿಗೆ ಮೂವರು ಪುತ್ರಿಯರು, ಒಬ್ಬ ಪುತ್ರನಿದ್ದಾನೆ. ಗಂಡು ಮಗು ಹುಟ್ಟಿನಿಂದಲೇ ಮೂಗನಾಗಿದ್ದಾನೆ.
Related Articles
Advertisement
ತಮ್ಮ ಜನಾಂಗದ ಕುಟುಂಬದವರಿಗೆ ಗುರುತಿಸುವಂತಹ ಕಾರ್ಯ ಸರ್ಕಾರವಾಗಲಿ, ಅಧಿಕಾರಿಗಳಾಗಲಿ ಮಾಡಿಲ್ಲ ಎಂಬ ಕೊರಗು ಕೋರವ ಜನಾಂಗದಲ್ಲಿ ಕಾಡಲಿಕ್ಕೆ ಹತ್ತಿದೆ. ಇಂತಹ ಉದ್ಯೋಗ ಅರಸಿಕೊಂಡು ಬಂದ ಕೊರವ ಜನಾಂಗದ ಕುಟುಂಬಗಳಿಗೆ ವಾಸಿಸಲು ಸರ್ಕಾರ ಮನೆಯನ್ನು ನೀಡಿದರೆ ತಮ್ಮ ಉದ್ಯೋಗದಲ್ಲಿಯೇ ಮಕ್ಕಳಿಗೆ ಶಿಕ್ಷಣ ಕಲಿಯಲು ಅವಕಾಶ ದೊರಕಿಸಿಕೊಡಲು ಅನುಕೂಲವಾಗಲಿದೆ. 10, 15 ವರ್ಷಗಳಿಂದ ಈ ರಾಜ್ಯದಲ್ಲಿ ಉದ್ಯೋಗ ಅರಿಸಿಕೊಂಡು ಬಂದು ಉದ್ಯೋಗ ದೊರಕದ ಕಾರಣದಿಂದಲೇ ತಮ್ಮ ಕಲೆಯ ಬುಟ್ಟಿ ಹೆಣೆಯುವ ಕಾಯಕದಲ್ಲಿ ಮುಂದುವರಿಯಲು ಕಾರಣವಾಗಿದೆ ಎನ್ನುತ್ತಾರೆ ರಾಮು ನೆಲ್ಲೂರ.
ಬುಟ್ಟಿ ಹೆಣೆಯುವ ಕಲೆ ಮುಂದುವರಿಸಿಕೊಂಡು ಮುನ್ನಡೆದ ನಮ್ಮ ಕುಟುಂಬದವರಿಗೆ ಇಲ್ಲಿವರೆಗೂ ಚುನಾವಣೆಯ ಗುರುತಿನ ಚೀಟಿಯಿಲ್ಲ, ಆಧಾರ್ ಕಾರ್ಡ್, ರೇಶನ್ ಕಾರ್ಡ್ ಇಲ್ಲವೆಂದು ಅಳಲು ತೋಡಿಕೊಂಡರು. ತಮ್ಮ ಕಲೆಯನ್ನೆ ನೆಚ್ಚಿಕೊಂಡು ಜೀವನ ಸಾಗಿಸುತ್ತಿರುವ ಕೊರವ ಜನಾಂಗದ ನಿರ್ಗತಿಕರನ್ನು ಸರ್ಕಾರ ಗುರುತಿಸಿ ಸಹಾಯ ಹಸ್ತ ಚಾಚಬೇಕಿದೆ.
ಜಿ.ಟಿ. ಘೋರ್ಪಡೆ