Advertisement

ʼಕೌಸಲ್ಯ ಸುಪ್ರಜಾ ರಾಮʼ ಬಳಿಕ ಜತೆಯಾದ ಶಶಾಂಕ್‌- ಕೃಷ್ಣ: ಪ್ಯಾನ್‌ ಇಂಡಿಯಾ ಚಿತ್ರ ಅನೌನ್ಸ್‌

12:35 PM Jun 12, 2024 | Team Udayavani |

ಬೆಂಗಳೂರು: ಡಾರ್ಲಿಂಗ್‌ ಕೃಷ್ಣ ‘ಫಾದರ್‌ʼ ಸಿನಿಮಾದ ನಡುವೆಯೇ ಹೊಸ ಸಿನಿಮಾವೊಂದನ್ನು ಅನೌನ್ಸ್‌ ಮಾಡಿದ್ದಾರೆ.

Advertisement

ಸೂಪರ್‌ ಹಿಟ್‌ ಸಿನಿಮಾವನ್ನು ನೀಡಿರುವ ನಿರ್ದೇಶಕ ಶಶಾಂಕ್‌ ಜೊತೆ ಕೃಷ್ಣ ಮತ್ತೊಂದು ಸಿನಿಮಾವನ್ನು ಮಾಡಲಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲ ಸಮಯದಿಂದ ಹರಿದಾಡಿತ್ತು. ಕೃಷ್ಣ ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದರು. ಇದೀಗ ಅಧಿಕೃತವಾಗಿ ಸಿನಿಮಾವನ್ನು ಅನೌನ್ಸ್‌ ಮಾಡಿದ್ದಾರೆ.

2023 ರಲ್ಲಿ ನಿರ್ದೇಶಕ ಶಶಾಂಕ್‌ ಹಾಗೂ ಡಾರ್ಲಿಂಗ್‌ ಕೃಷ್ಣ ಅವರ ʼಕೌಸಲ್ಯ ಸುಪ್ರಜಾ ರಾಮʼ ಸಿನಿಮಾ ಬಂದಿತ್ತು. ಮಿಡಲ್‌ ಕ್ಲಾಸ್‌ ಹುಡುಗನೊಬ್ಬನ ಫ್ಯಾಮಿಲಿ ಕಥಾಹಂದರದ ಈ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು.

ಇದೀಗ ಶಶಾಂಕ್‌ ಹಾಗೂ ಡಾರ್ಲಿಂಗ್‌ ಕೃಷ್ಣ ಅವರು ಪ್ಯಾನ್‌ ಇಂಡಿಯಾ ಸಿನಿಮಾವನ್ನು ಅನೌನ್ಸ್‌ ಮಾಡಿದ್ದಾರೆ. ʼಪ್ರೊಡಕ್ಷನ್‌ ನಂ-3ʼ ಎಂದು ಸಿನಿಮಾವನ್ನು ಅನೌನ್ಸ್‌ ಮಾಡಿದ್ದಾರೆ. ಬ್ಲಾಕ್‌ ಬಸ್ಟರ್‌ ಜೋಡಿ ಪ್ಯಾನ್‌ ಇಂಡಿಯಾ ಸಿನಿಮಾದೊಂದಿಗೆ ಕಂಬ್ಯಾಕ್‌ ಮಾಡುತ್ತಿದೆ ಎನ್ನುವ ಪೋಸ್ಟರ್‌ ನಲ್ಲಿ ಶಶಾಂಕ್‌ – ಕೃಷ್ಣ ಕಾಣಿಸಿಕೊಂಡಿದ್ದಾರೆ.

ಡಾರ್ಲಿಂಗ್‌ ಕೃಷ್ಣ ಅವರ ಹುಟ್ಟುಹಬ್ಬದಂದೇ ಹೊಸ ಸಿನಿಮಾವನ್ನು ಅನೌನ್ಸ್‌ ಮಾಡಲಾಗಿದೆ. ಇದೊಂದು ಥ್ರಿಲ್ಲರ್‌ ಜಾನರ್‌ ಕಥೆವುಳ್ಳ ಸಿನಿಮಾವೆನ್ನಲಾಗುತ್ತಿದೆ. ಆಗಸ್ಟ್‌ ನಲ್ಲಿ ಚಿತ್ರೀಕರಣ ಆರಂಭಗೊಳ್ಳಲಿದೆ.

Advertisement

ಡಾಲ್ಫಿನ್ ಎಂಟರ್ಟೈನ್ಮೆಂಟ್ ಬ್ಯಾನರ್‌ ಅಡಿಯಲ್ಲಿ ಸಿನಿಮಾ ಬರಲಿದೆ. ಚಿತ್ರದ ಪಾತ್ರವರ್ಗದ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.

ಸದ್ಯ ಕೃಷ್ಣ ʼಫಾದರ್‌ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದು ಆರ್‌ ಚಂದ್ರು ಬ್ಯಾನರ್‌ ಅಡಿಯಲ್ಲಿ ಬರುತ್ತಿರುವ ಸಿನಿಮಾವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next