Advertisement

ಕೈಕೊಟ್ಟ ಮಳೆ-ಒಣಗಿದ ಬೆಳೆ: ಅನ್ನದಾತ ಕಂಗಾಲು

11:16 AM Aug 01, 2019 | Naveen |

ರವಿಕುಮಾರ.ಎಂ.
ಕೊಟ್ಟೂರು:
ರೈತರು ಬಿತ್ತನೆ ಮಾಡಲು ಸಿದ್ಧರಾಗಿದ್ದಾರೆ. ಬಿತ್ತನೆಗೆ ಅಗತ್ಯವಾಗಿರುವ ಬೀಜಗಳು ಮತ್ತು ರಸಗೊಬ್ಬರಗಳನ್ನು ಖರೀದಿಸಿ ಬೀಜ ಬಿತ್ತಿದ್ದಾರೆ. ಆದರೆ ವರುಣನ ಹಿನ್ನೆಡೆ ಅನ್ನದಾತನನ್ನು ಕಂಗಾಲಾಗಿಸಿದೆ.

Advertisement

ಕಳೆದ ವರ್ಷ ಈ ಅವಧಿಯಲ್ಲಿ ಶೇ. 75ರಷ್ಟು ಬಿತ್ತನೆಯಾಗಿತ್ತು. ಈ ನಂಬಿಕೆ ಮೇಲೆ ಉತ್ತಮ ಮಳೆಯಾಗಬಹುದೆಂದು ನಿರೀಕ್ಷಿಸಿ ಬೀಜ ಬಿತ್ತಿದ್ದಾನೆ. ಈಗ ಮಳೆಯಿಲ್ಲದೆ ಬೀಜಗಳೆಲ್ಲ ಒಣಗಲಾರಂಭಿಸಿದೆ. ಇದೇ ರೀತಿ ಮುಂದುವರೆದರೆ ಜೀವನ ಸಾಗಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದಾನೆ.

ಮಳೆ ಹಿನ್ನೆಡೆಯಿಂದ ಕೆರೆಗಳು ತುಂಬಿಲ್ಲ, ಕೊಳವೆ ಬಾವಿಗಳು ಬತ್ತುವ ಸ್ಥಿತಿಗೆ ಬಂದು ತಲುಪಿವೆ. ಈಗ ದೇವರ ಮೇಲೆ ಭಾರ ಹಾಕಿ ಮಳೆ ಬರುವ ನಿರೀಕ್ಷೆಯಲ್ಲಿಯೇ ಸಮಯ ದೂಡುವಂತಾಗಿದೆ.

ನೀರಾವರಿ ಯೋಜನೆ ಮೂಲಕ ಕೆರೆ ಕಾಲುವೆಗಳಿಗೆ ನೀರೊದಗಿಸಿ ಅನ್ನದಾತನ ಬೆಳೆಗಳಿಗೆ ಜೀವತುಂಬುವ ಕೆಲಸವಾಗಲಿ ಎಂಬುದು ಅನ್ನದಾತನ ಮನವಿ. ಆದರೆ ಅಧಿಕಾರಿಗಳಾಗಲಿ-ಜನಪ್ರತಿನಿಧಿಗಳಾಗಲಿ ಗಮನ ಹರಿಸದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಮಳೆಯನ್ನೇ ನಂಬಿ ಕುಳಿತುಕೊಳ್ಳುವಂತಾಗಿದೆ.

ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಶೇ. 80ರಷ್ಟು ಬೀಜವನ್ನು ವಿತರಿಸಲಾಗಿದೆ. ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಮಳೆ ಕೊರತೆಯಿಂದ ಬಿತ್ತಿದ ಬೆಳೆಗಳೆಲ್ಲ ಹಾನಿಗೊಳಗಾಗುತ್ತಿವೆ. ಹಿಂಗಾರು ಮಳೆಯಾದರೂ ಸಮರ್ಪಕವಾಗಿ ಬಂದು ರೈತರ ಕೈ ಹಿಡಿಯುವಂತಾಗಲಿ. •ಗೊಂದಿ ಮಂಜುನಾಥ,
 ಕೃಷಿ ಅಧಿಕಾರಿ ಕೊಟ್ಟೂರು

ಕಳೆದ 3 ವರ್ಷದಿಂದ ಸಮರ್ಪಕವಾಗಿ ಮಳೆಯೂ ಇಲ್ಲ ಜಾನುವಾರುಗಳಿಗೆ ಮೇವು ಇಲ್ಲ. ಈ ವರ್ಷವೂ ಹದ ಮಳೆ ಬಂದಿಲ್ಲ. ಮುಂದೇನು ಎಂಬ ಚಿಂತೆ ಕಾಡುತ್ತಿದೆ. ಶೀಘ್ರ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಬೇಕು.
ವೀರಯ್ಯ ಮೂಲಿಮನಿ,
  ಕೊಟ್ಟೂರು
Advertisement

Udayavani is now on Telegram. Click here to join our channel and stay updated with the latest news.

Next