•
ರವಿಕುಮಾರ.ಎಂ.
ಕೊಟ್ಟೂರು: ತಾಲೂಕಿನೆಲ್ಲೆಡೆ ಬಿತ್ತನೆ ಯಾಗಿರುವ ಮೆಕ್ಕೆಜೋಳದ ಬೆಳೆಗೆ ಸೈನಿಕ ಹುಳುಗಳ ಹಾವಳಿ ಹೆಚ್ಚಾಗಿದ್ದು ಬೇಸತ್ತ ಅನ್ನದಾತ ಬೆಳೆ ನಾಶಕ್ಕೆ ಮುಂದಾಗಿದ್ದಾರೆ.
ಲಕ್ಷ್ಮೀದೇವಿ ಅವರು ಕೀಟ ಭಾದೆಯಿಂದ ತಮ್ಮ 4 ಎಕರೆ ಜಮೀನಿನಲ್ಲಿ ಬೆಳೆದ ಬೆಳೆಯನ್ನು ನಾಶ ಮಾಡಿದ್ದಾರೆ. ಕಳೆದ 2 ವರ್ಷದಿಂದ ಸಮರ್ಪಕ ಮಳೆಯಾಗದೇ ಬಹುತೇಕ ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಬಿತ್ತಿದ ಬೀಜ ಮೊಳಕೆಯೊಡೆಯದೇ ಕೈಚಲ್ಲಿ ಕುಳಿತುಕೊಳ್ಳುವ ಹಾಗಾಗಿದೆ. ಇದರ ಮಧ್ಯೆ ಸೈನಿಕ ಹುಳುವಿನ ಕಾಟ ರೈತರನ್ನು ಹೈರಾಣಾಗಿಸಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಶೇ. 75ರಷ್ಟು ಬಿತ್ತನೆಯಾಗಿತ್ತು. ಆದರೂ ರೈತರು ಉತ್ತಮ ಮಳೆಯಾಗಬಹುದೆಂಬ ನಿರೀಕ್ಷೆ ಇಟ್ಟುಕೊಂಡು ಬಿತ್ತನೆ ಬೀಜಗಳನ್ನು ಬಿತ್ತಿದ್ದರೂ ಅವುಗಳೆಲ್ಲಾ ಮಳೆ ಇಲ್ಲದೆ ಒಣಗಲಾರಂಭಿಸಿವೆ. ತಾಲೂಕಿಗೆ ಯಾವುದಾದರೂ ಮೂಲದಿಂದ ನೀರಾವರಿ ಯೋಜನೆ ಜಾರಿಗೊಳಿಸಿ ಕೂಡಲೇ ಕೆರೆಕಟ್ಟೆಗಳಿಗೆ ನೀರೊದಗಿಸಿ ಅನ್ನದಾತನ ಬೆಳೆಗಳಿಗೆ ಜೀವ ಭರಿಸಿ ಈ ಭಾಗದ ಬಡ ರೈತರಿಗೆ ಅನುಕೂಲ ಮಾಡಬೇಕಾಗಿದೆ. ಈಗಾಗಲೇ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆಯಾದರೂ ಸಹ ಇನ್ನೂ ಯಾವುದೇ ಕೆಲಸಗಳು ನಡೆದಿಲ್ಲ. ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಇದರತ್ತ ಗಮನಹರಿಸುತ್ತಿಲ್ಲ. ಇದರಿಂದ ಮಳೆಯನ್ನೇ ನಂಬಿ ಕುಳಿತುಕೊಳ್ಳುವಂತ ಸ್ಥಿತಿ ಎದುರಾಗಿದೆ.
ಸೈನಿಕ ಹುಳು ಬಾಧೆದೆಗೆ ಬೇಸತ್ತು ಏಕಾಏಕಿ ಬೆಳೆ ನಾಶಕ್ಕೆ ಮುಂದಾಗಬೇಡಿ. ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಬೆಳೆ ರಕ್ಷಣೆಗೆ ಮುಂದಾಗಿ. ಬೆಳೆವಿಮೆ ಕುರಿತು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
•
ಜಿ. ಅನಿಲ್ಕುಮಾರ್,
ತಹಶೀಲ್ದಾರ್, ಕೊಟ್ಟೂರು
ಕಳೆದ 3 ವರ್ಷದಿಂದ ಸಮರ್ಪಕವಾಗಿ ಮಳೆಯಾಗಿಲ್ಲ. ಜಾನುವಾರುಗಳಿಗೆ ಮೇವು ಇಲ್ಲ. ಈ ವರ್ಷವೂ ಹದ ಮಳೆ ಬಂದಿಲ್ಲ. ಮುಂದೇನು ಎಂಬ ಚಿಂತೆ ಕಾಡುತ್ತಿದೆ. ಸರ್ಕಾರ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಿ ರೈತರ ಆತಂಕ ದೂರಮಾಡಲಿ.
•ವೀರಯ್ಯ ಮೂಲಿಮನಿ, ರೈತ