Advertisement

ಕೊರೊನಾ ತಡೆಗೆ ಕಠಿಣ ಕ್ರಮ ಅನಿವಾರ್ಯ

03:44 PM Apr 08, 2020 | Naveen |

ಕೊಟ್ಟೂರು: ಕೋವಿಡ್‌ -19ಗೆ ಸಂಬಂಧಿಸಿದಂತೆ ಶಾಸಕ ಎಸ್‌. ಭಿಮಾ ನಾಯ್ಕ ನೇತೃತ್ವದಲ್ಲಿ ಕೊಟ್ಟೂರಿನ ಹರಿಪ್ರಿಯ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿದರು. ಜಿಲ್ಲೆಯಲ್ಲಿ ಈಗಾಗಲೇ 6 ಕೊರೊನಾ ಪ್ರಕರಣ ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಬಳ್ಳಾರಿಯ ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ. ಆರೋಗ್ಯ ಇಲಾಖೆ ಶ್ರಮದಿಂದಾಗಿ ಬೇರೆ ಊರು, ದೇಶಗಳಿಂದ ಬಂದವರ ಮಾಹಿತಿ ಪಡೆದು ಅವರನ್ನೂ ಗೃಹಬಂಧನಲ್ಲಿ ಇರಿಸಲಾಗಿದೆ ಎಂದರು.

Advertisement

ಕೊರೊನಾ ತಡೆಗಟ್ಟಲು ಕೆಲವು ಕಠಿಣ ಕ್ರಮ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ ಹಲವು ಮಹತ್ವದ ಅಂಶಗಳನ್ನು ಚರ್ಚಿಸಲಾಯಿತು. ಪ್ರಧಾನಿ, ಸಿಎಂ ಸೂಚಿಸಿರುವ ಲಾಕ್‌ಡೌನ್‌ ಗೆ ಸ್ಪಂದಿಸಬೇಕಾದುದು ನಮ್ಮ ಕರ್ತವ್ಯ ಎಂದರು. ತಾಲೂಕು ದಂಡಾಧಿಕಾರಿಗಳು ಈಗಾಗಲೇ ಸ್ವತಃ ವಾರ್ಡ್‌ಗಳಲ್ಲಿ ಹಾಗೂ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಔಷಧ ಗಳನ್ನು ಸಿಂಪಡಿಸಿ ಜನ ಜಾಗ್ರತೆ ಮೂಡಿಸುತ್ತಿದ್ದಾರೆ ಹಾಗೂ ಪ್ರತಿ ವಾರ್ಡ್‌ನ ಕಡುಬಡವರಿಗೆ
ಉಚಿತ ಹಾಲು ಸೌಲಭ್ಯ ಮತ್ತು 2 ತಿಂಗಳ ಪಡಿತರವನ್ನು ಸಹ ವಿತರಿಸಲಾಗುತ್ತಿದೆ ಎಂದರು.

ಎರಡು ಜಿಲ್ಲೆಗಳು ಸೇರುವ ಗಡಿಗಳಲ್ಲಿ ಚೆಕ್‌ಪೋಸ್ಟ್‌ ನಿರ್ಮಿಸಿ ಸಂಚಾರ ನಿಯಮ ಪಾಲಿಸುತ್ತಿರುವ ಪೊಲೀಸ್‌ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸೇವೆ ಶ್ಲಾಘನೀಯ ಎಂದರು. ಇನ್ನೂ 4 ಚೆಕ್‌ ಪೋಸ್ಟ್‌ ನಿರ್ಮಿಸುವಂತೆ ಸೂಚಿಸಿದರು. ಅಗತ್ಯ ವಸ್ತುಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು. ಮತ್ತು ಮುಸ್ಲಿಂ ಬಾಂಧವರು ನಮಾಜ್‌ನ್ನು ಮನೆಯಲ್ಲಿಯೇ ಮಾಡಿಕೊಳ್ಳಿ ಎಂದು ಹೇಳಿದರು.

ತಾಲೂಕು ದಂಡಾಧಿಕಾರಿ ಜಿ.ಅನಿಲ್‌ ಕುಮಾರ, ಜಿಪಂ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ, ಪಶುವೈದ್ಯ ಡಾ| ರವಿಪ್ರಕಾಶ, ಪಪಂ ಮುಖ್ಯಾಧಿಕಾರಿ ಎಚ್‌.ಎಫ್‌ ಬಿದರಿ, ತಾಲೂಕು ವೈದ್ಯಾಧಿಕಾರಿ ಷಣ್ಮುಖ ನಾಯ್ಕ, ರವೀಂದ್ರ ಕುರುಬಗಟ್ಟೆ, ಕಾಳಿಂಗ, ಇಒ ಬಸಣ್ಣ ಹಾಗೂ ಪಪಂ ಸದಸ್ಯರು ಮತ್ತು ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next