ಕೊಟ್ಟೂರು: ಕೊಟ್ಟೂರು ಕೆರೆಹಿಂಭಾಗದಲ್ಲಿರುವ ಯಸನ್ನುಲ್ಲಾ ಅವರಸ್ವಂತ 1 ಎಕರೆ ಜಮೀನಿನಲ್ಲಿ ಹಾಕಿರುವನಿಂಬೆ ಬೆಳೆ ಉತ್ತಮ ಫಸಲು ನೀಡಿದ್ದುಅವರ ಬದುಕನ್ನು ಹಸನುಗೊಳಿಸಿದೆ.1 ಎಕರೆಯಲ್ಲಿ 600ಕ್ಕೂ ಹೆಚ್ಚು ನಿಂಬೆಸಸಿಗಳನ್ನು ನೆಟ್ಟು ಅವುಗಳ ಪಾಲನೆ ಪೋಷಣೆ ನಡೆಸಿದ್ದಾರೆ.
ಪ್ರತಿ ಗಿಡದಲ್ಲಿ 2 ಸಾವಿರದಿಂದ3 ಸಾವಿರದವರೆಗೂ ನಿಂಬೆಹಣ್ಣುಬಿಡುತ್ತದೆ. ಇದರಿಂದ ಸಂತಸಗೊಂಡರೈತ ಇದನ್ನೇ ತಮ್ಮ ವೃತ್ತಿಯನ್ನಾಗಿ ಜೀವನಸಾಗಿಸುತ್ತಿದ್ದಾರೆ. ಈ ವರ್ಷ ನಿಂಬೆ ಫಸಲುಹೆಚ್ಚಾಗಿ ಬಂದಿರುವುದರಿಂದ ಪ್ರತಿ ನಿಂಬೆಹಣ್ಣಿಗೆ ರೂ. 2ರಂತೆ ನಿಗದಿಗೊಳಿಸಲಾಗಿದೆ.ಪ್ರತಿದಿನ 2ಸಾವಿರ ಹಣ್ಣುಗಳನ್ನುಮಾರುತ್ತಾರೆ.
ಆದರೆ ಕೃಷಿ ಮಾಡಿಖರ್ಚುವೆಚ್ಚವನ್ನು ಲೆಕ್ಕಹಾಕಿ ಮಾರಾಟಮಾಡಿದರೆ ಜೀವನಕ್ಕೆ ಸರಿದೂಗುತ್ತದೆಅಷ್ಟೆ. ಈಗಿನ ಕೂಲಿ ಆಳುಗಳ ಕೂಲಿ ವೆಚ್ಚ,ಹವಾಮಾನ ವೈಪರೀತ್ಯ, ಪಾಲನೆ ಪೋಷಣೆಎಲ್ಲವನ್ನು ನೋಡಿದರೆ ಕಷ್ಟವಿದೆ. ಸರ್ಕಾರವುನಮ್ಮಂಥವರನ್ನು ಗುರುತಿಸಿ ನಿಂಬೆಬೆಳೆಗಾರರಿಗೆ ಸೌಲಭ್ಯಗಳನ್ನು ನೀಡಿದರೆ ಬಡಕೃಷಿಕರಿಗೆ ಸಹಾಯವಾಗುತ್ತದೆ.ಈ ವರ್ಷ ಮಳೆ ಇನ್ನೂ ಇರುವುದರಿಂದನಿಂಬೆ ಬೆಳೆಯಲು ಸಹಾಯಕವಾಗಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ ನಿಂಬೆಹಣ್ಣಿಗೆಬೇಡಿಕೆ ಇದೆ ಆದರೂ ನಿಂಬೆಹಣ್ಣಿನದರ ಹೆಚ್ಚಾದರೆ ಖರ್ಚುವೆಚ್ಚಕ್ಕೆಸಹಾಯಕವಾಗುತ್ತದೆ ಎನ್ನುತ್ತಾರೆ ನಿಂಬೆಬೆಳೆಗಾರರು.ನಿಂಬೆ ಎಂದರೆ ಸಾಕು ಬಾಯಿಚಪ್ಪರಿಸೋ ಉಪ್ಪಿನಕಾಯಿ ಮಾಡಲು ನೆನಪಾಗುತ್ತದೆ.
ನಿಂಬೆ ಹಣ್ಣು ಇಲ್ಲದೆ ಅಡುಗೆರುಚಿಕರವಾಗುವುದಿಲ್ಲ ಎನ್ನುವಷ್ಟರ ಮಟ್ಟಿಗೆನಿಂಬೆ ಬಳಕೆಯಾಗುತ್ತಿದೆ. ಹೊಟ್ಟೆ ಉಬ್ಬರಕ್ಕೆಸೋಡ ಮಾಡಲು, ಸಿಹಿ ಪಾನಕಕ್ಕೆ ಮತ್ತುಕಬ್ಬಿನ ರಸಕ್ಕೆ ಹೀಗೆ ಹಲವಾರು ಖಾದ್ಯಗಳಜೊತೆ ನಿಂಬೆಹಣ್ಣು ಗುರುತಿಸಿಕೊಂಡಿದೆ.ಬೇಸಿಗೆ ಬಂತೆಂದರೆ ಉಪ್ಪಿನಕಾಯಿಗಾಗಿನಿಂಬೆಹಣ್ಣಿನ ವ್ಯಾಪಾರ ಬಲುಜೋರುನಡೆಯುತ್ತದೆ.
ಇಷ್ಟೆಲ್ಲ ಉಪಯೋಗವಿರುವನಿಂಬೆಹಣ್ಣು ಆರ್ಯುವೇದದಲ್ಲೂ ಹಾಗೂಔಷ ಧಿಯಾಗಿಯೂ ಕೆಲಸ ನಿರ್ವಹಿಸುತ್ತಿದೆ.ಆದ್ದರಿಂದ ಸರ್ಕಾರವು ನಿಂಬೆ ಬೆಳಗಾರರನ್ನುಗಮನಿಸಿ ಸರ್ಕಾರಿ ಸೌಲಭ್ಯಗಳನ್ನುಒದಗಿಸಬೇಕು ಎನ್ನುತ್ತಾರೆ.
ಎಂ. ರವಿಕುಮಾರ್