Advertisement

ಫೆ. 18ರಂದು ಕೊಟ್ಟೂರೇಶ್ವರ ರಥೋತ್ಸವ: ಸಕಲ ವ್ಯವಸ್ಥೆ

03:41 PM Jan 19, 2020 | Naveen |

ಕೊಟ್ಟೂರು: ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಫೆ.18ರಂದು ವಿಜೃಂಭಣೆಯಿಂದ ನಡೆಯುವ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಕೊಟ್ಟೂರಿಗೆ ಆಗಮಿಸಲಿದ್ದು ಅವರ ಅನುಕೂಲಕ್ಕಾಗಿ ಸಕಲ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ಶಾಸಕ ಎಸ್‌. ಭೀಮಾನಾಯ್ಕ ಹೇಳಿದರು.

Advertisement

ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ನಿಮಿತ್ತ ಕೊಟ್ಟೂರೇಶ್ವರ ದೇವಸ್ಥಾನದ ಎದುರುಗಡೆ ಮುಜರಾಯಿ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಫೆಬ್ರುವರಿ 18ರಂದು ನಡೆಯುವ ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿ ಮಹಾರಥೋತ್ಸವಕ್ಕೆ ಅತೀ ಹೆಚ್ಚು ಭಕ್ತರು ಆಗಮಿಸುವುದರಿಂದ ಪೊಲೀಸ್‌ ಇಲಾಖೆ ಸೂಕ್ತ ಭದ್ರತೆ ಕೈಗೊಳ್ಳಬೇಕು ಎಂದು ಸೂಚಿಸಿದರು.

ಆರೋಗ್ಯ ಮತ್ತು ತುರ್ತು ಚಿಕಿತ್ಸೆಗಾಗಿ ವೈದ್ಯಕೀಯ ಸಲಕರಣೆಗಳನ್ನು ಒಳಗೊಂಡ ಆಂಬ್ಯುಲೆನ್ಸ್‌ ವಾಹನ ವ್ಯವಸ್ಥೆ ಹಾಗೂ ಬಿಸಿಲಲ್ಲಿ ಬಳಲಿ ಬಂದ ಪಾದಯಾತ್ರಿ ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲಸೌಲಭ್ಯಗಳನ್ನು ಒದಗಿಸಿಕೊಡಲು ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು ಹಾಗೂ
ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯ ಉಪಕೇಂದ್ರಗಳನ್ನು ಏರ್ಪಡಿಸುವಂತೆ ತಿಳಿಸಿದರು.

ರಥೋತ್ಸವಕ್ಕೆ ಆಗಮಿಸುವ ಸುಮಾರು 5-6 ಲಕ್ಷ ಭಕ್ತರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಿಕೊಡಬೇಕೆಂಬ ಕಾರಣಕ್ಕಾಗಿ
2 ದೊಡ್ಡಮಟ್ಟದ ತಾತ್ಕಾಲಿಕ ಆರ್‌ಓ ಘಟಕಗಳನ್ನು ಸ್ಥಾಪಿಸಬೇಕು.ನಂತರ ಭಕ್ತ ಸಮೂಹಕ್ಕೆ ಹಾಗೂ ಊರಿನ ಸ್ವತ್ಛತೆಗಾಗಿ ಜಿಲ್ಲಾಡಳಿತದಿಂದ ಮೊಬೈಲ್‌ ಶೌಚಾಲಯ ಒದಗಿಸಬೇಕು. ಕೊಟ್ಟೂರಿಗೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಈ ಘಟಕಗಳನ್ನು ಕೂಡಲೇ ತೆರೆಯಲು ಕಾರ್ಯಪ್ರವೃತ್ತರಾಗಬೇಕು ಎಂದು ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು.

Advertisement

ಪಪಂ ಮುಖ್ಯಾಧಿಕಾರಿಗಳು ಎಚ್‌.ಎಫ್‌. ಬಿದರಿ ಮಾತನಾಡಿ, ಜೆಸ್ಕಾಂ ಇಲಾಖೆ ಸಮರ್ಪಕವಾದ ವಿದ್ಯುತ್‌ ನೀಡಿದಲ್ಲಿ ಪಟ್ಟಣದ
ಜನತೆಗೆ ತೊಂದರೆಯಾಗದಂತೆ ನೀರು ಪೂರೈಸಲಾಗುವುದು ಎಂದರು.

ಆರೋಗ್ಯ ಇಲಾಖೆ ಹೊರತುಪಡಿಸಿ ಖಾಸಗಿಯವರು ರಕ್ತದಾನ ಶಿಬಿರ ನಡೆಸಕೂಡದು. ಈ ಸಂಬಂಧ ತಾಲೂಕು ಆರೋಗ್ಯ ಅಧಿಕಾರಿ ಕ್ರಮ ಕೈಗೊಳ್ಳಬೇಕು. ಕೊಟ್ಟೂರೇಶ್ವರ ಸ್ವಾಮಿಯ ರಥದಲ್ಲಿ ಸ್ವಾಮಿಯೊಂದಿಗೆ ಕೇವಲ 12 ಪೂಜಾಕರ್ತರು ರಥದಲ್ಲಿ ಆಸೀನರಾಗಬೇಕು. ಬೆಳ್ಳಿ ರಥದಲ್ಲಿ 4 ಜನ ಆಸೀನರಾಗಬೇಕು. ತೇರಿನ ಸುತ್ತಮುತ್ತಲಲ್ಲಿ ಬಿಗಿಭದ್ರತೆ ಒದಗಿಸುವಂತೆ ಶಾಸಕರು ಸೂಚಿಸಿದರು.

ಹೊಸಪೇಟೆ ಸಹಾಯಕ ಆಯುಕ್ತ ಲೋಕೇಶ್‌ ನಾಯ್ಕ, ಧರ್ಮಕರ್ತ ಸಿ.ಎಚ್‌.ಎಂ. ಗಂಗಾಧರ, ಕ್ರಿಯಾಮೂರ್ತಿ ಶಂಕರಸ್ವಾಮಿಜಿ, ಎಂ.ಎಂ.ಜೆ ಹರ್ಷವರ್ಧನ್‌, ಜಿಪಂ ಸದಸ್ಯ ಉಜ್ಜಯಿನಿ, ಡಿವೈಎಸ್‌ಪಿ ಶಿವಕುಮಾರ, ಸಿಪಿಐ ಎಂ. ರವೀಂದ್ರ ಕುರುಬಗಟ್ಟಿ, ಪಿಎಸ್‌ಐ ಕಾಳಿಂಗ ದ್ವಾರಕೀಶ, ಪಪಂ ನೂತನ ಸದಸ್ಯರು, ಷಣ್ಮುಖ ನಾಯ್ಕ, ತಾಲೂಕು ವೈದ್ಯಾಧಿಕಾರಿಗಳು ಕೂಡ್ಲಿಗಿ, ಡಾ| ರವಿಪ್ರಕಾಶ, ಡಾ| ಪೃಥ್ವಿ ಹಾಗೂ ಕೊಟ್ಟೂರು ಕಟ್ಟಿಮನಿ ದೈವದವರು, ಮಾರ್ಗದಪ್ಪ ಪಿ.ಡಬ್ಲೂಡಿ ಇತರರು ಇದ್ದರು. ಧಾರ್ಮಿಕ ಇಲಾಖೆಯ ಸಹಾಯಕ ಆಯುಕ್ತರು ಪ್ರಕಾಶ್‌ರಾವ್‌ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next