Advertisement

ಕೊಟ್ಟೂರು ರಥೋತ್ಸವ: ರಥ ಕಟ್ಟುವ ಕಾರ್ಯ ಚುರುಕು

04:59 PM Feb 17, 2020 | Naveen |

ಕೊಟ್ಟೂರು: ಪಟ್ಟಣದ ಪ್ರಸಿದ್ಧ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ ಫೆ.18ರಂದು ಜರಗುವ ಹಿನ್ನೆಲೆಯಲ್ಲಿ ರಥ ನಿರ್ಮಾಣ ಕಾರ್ಯ ಮತ್ತು ಸಿದ್ಧತೆ ಕಾರ್ಯಗಳು ಚುರುಕುಗೊಂಡಿವೆ. ರಥದ ಅಂಕಣಗಳಿಗೆ ಪಟ್ಟಿಗಳನ್ನು ಜೋಡಿಸಿ, ದಪ್ಪನೆ ಹಗ್ಗದಿಂದ ಬಿಗಿ ಮಾಡಲಾಗಿದೆ. ರಥಕ್ಕೆ ಬಣ್ಣದ ಬಟ್ಟೆಗಳಿಂದ ಅಲಂಕಾರ ಹಾಗೂ ಕೊನೆ ಅಂಕಣದಲ್ಲಿ ಪಟಾಕಿಗಳನ್ನು ಹಾಕಲಾಯಿತು.

Advertisement

ಮಹಾರಥೋತ್ಸವ ಜರುಗುವ ಹಿನ್ನೆಲೆಯಲ್ಲಿ ರಸ್ತೆ ಹಾಗೂ ಓಣಿಗಳಲ್ಲಿ ಸ್ವಚ್ಛತೆ ಕಾರ್ಯ ನಡೆದಿದೆ. ನಿರ್ಮಾಣವಾಗಿರುವ ಮಿನಿ ವಾಟರ್‌ ಟ್ಯಾಂಕ್‌ ಗಳಿಗೆ ನೀರು ಭರ್ತಿ ಮಾಡಲಾಗುತ್ತಿದ್ದು, ದಾರಿಯುದ್ದಕ್ಕೂ ಟ್ರ್ಯಾಕ್ಟರ್‌ ಮೂಲಕ ರಸ್ತೆಗೆ ನೀರಾಯಿಸಿ, ಧೂಳಾಗದಂತೆ, ಆಗಮಿಸಿರುವ ಭಕ್ತರಿಗೆ ನೀರಿನ ತೊಂದರೆಯಾಗದಂತೆ ಮುನ್ನಚ್ಚರಿಕೆ ವಹಿಸಿದ್ದಾರೆ. ರಥ ಬೀದಿಯಲ್ಲಿನ ಎರಡೂ ಬದಿಗಳ ಪಾದಚಾರಿ ರಸ್ತೆಗಳನ್ನು ಸಣ್ಣವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದಾರೆ. ಅಲ್ಲದೇ ಜಾತ್ರೆಯಲ್ಲಿ ಅನೇಕರು ಅಂಗಡಿಗಾಗಿ ಟೆಂಟ್‌ ಹಾಕುತ್ತಾರೆ. ರಥವು ಇದೇ ಬೀದಿಯಲ್ಲಿ ಸಾಗುವುದರಿಂದ ರಥ ವೀಕ್ಷಣೆಗೆ ಭಕ್ತರಿಗೆ ಜಾಗದ ಸಮಸ್ಯೆಯಾಗುತ್ತದೆ. ಪಟ್ಟಣ ಪಂಚಾಯಿತಿ ಮತ್ತು ಪೊಲೀಸ್‌ ಇಲಾಖೆಯವರು ಜಂಟಿಯಾಗಿ ಪಾದಚಾರಿ ರಸ್ತೆಗಳನ್ನು ವ್ಯಾಪಾರಿಗಳಿಂದ ಮುಕ್ತಗೊಳಿಸಬೇಕೆಂಬುದು ಸಾರ್ವಜನಿಕರ ಒತ್ತಾಯಿಸಿದ್ದಾರೆ.

ರಥೋತ್ಸವ ಪ್ರಯುಕ್ತ ದೂರದ ಮುಂಡರಗಿ, ಗದಗ, ರಾಣಿಬೆನ್ನೂರು, ದಾವಣಗೆರೆ, ಹಾಸನ, ಅರಸಿಕೇರಿ, ಬೆಂಗಳೂರು, ಚಿತ್ರದುರ್ಗ, ಕೂಡ್ಲಿಗಿ ಭಾಗಗಳಿಂದ ಲಕ್ಷಾಂತರ ಭಕ್ತರು ಕಾಲ್ನಡಿಗೆಯಲ್ಲಿ ಬರುವುದು ವಿಶೇಷ. ಹೀಗೆ ಬರುವ ಭಕ್ತರಿಗಾಗಿ ಪಟ್ಟಣದ ನಾನಾ ಸಂಘಟನೆಯವರು ಅಲ್ಲಲ್ಲಿ ಕ್ಯಾಂಪ್‌ ನಿರ್ಮಿಸಿ ಪಾನೀಯ, ತಿಂಡಿ, ಊಟದ ವ್ಯವಸ್ಥೆಗಳನ್ನು ಮಾಡಿದ್ದಾರೆ. ರಥದ ದಿನದಂದು ಗಚ್ಚಿನ ಮಠ, ಹಿರೇಮಠ, ತೊಟ್ಟಿಲುಮಠ, ಜೈನ ಮಂದಿರ, ಕನ್ನಿಕಾ ಪರಮೇಶ್ವರಿ, ಬನಶಂಕರಿ, ಮಾರ್ಕಂಡೇಶ್ವರ ದೇವಸ್ಥಾನಗಳಲ್ಲಿ ಸಂಘಟಕರು ಪ್ರಸಾದ ವ್ಯವಸ್ಥೆ ಮಾಡುತ್ತಿದ್ದಾರೆ. ಈಗಾಗಲೇ ಭಕ್ತರು ಕಾಲ್ನಡಿಗೆ ಮೂಲಕ ಕೊಟ್ಟೂರಿಗೆ ತಲುಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next