Advertisement

ಶತಮಾನದ ತೇರಿಗೆ ಧೂಳಿನ ಮಜ್ಜನ!

12:23 PM Nov 27, 2019 | Naveen |

ಎಂ. ರವಿಕುಮಾರ
ಕೊಟ್ಟೂರು:
ಪಂಚಗಣಾಧೀಶ್ವರರಲ್ಲಿ ಒಬ್ಬರಾದ ಗುರು ಬಸವೇಶ್ವರರು ಕೊಟ್ಟೂರಿನಲ್ಲಿ ನೆಲೆಸಿ ಭಕ್ತರ ಉದ್ಧಾರ ಕೈಗೊಂಡು ಶಿಖಾಪುರವನ್ನು ಕೊಟ್ಟೂರನ್ನಾಗಿಸಿದ ಮಹಿಮರು.

Advertisement

ಬೇಡಿ ಬಂದ ಭಕ್ತರಿಗೆ ವರ ನೀಡುತ್ತಾ ಹಿರೇಮಠ, ತೊಟ್ಟಿಲು ಮಠ ಹಾಗೂ ಗಚ್ಚಿನ ಮಠಗಳಲ್ಲಿ ದರ್ಶನ ನೀಡುತ್ತಿರುವ ಸ್ವಾಮಿಗೆ ಪ್ರತಿ ವರ್ಷ ವಿಳಂಬಿನಾಮ ಸಂವತ್ಸರದ ಮೂಲ ನಕ್ಷತ್ರದಲ್ಲಿ ತೇರು ಜರುಗುವುದು ಪ್ರತೀತಿ. ಈ ತೇರಿಗೆ ಲಕ್ಷಾಂತರ ಭಕ್ತರು ನಾಡಿನಾದ್ಯಂತ ಪಾದಯಾತ್ರೆ ಮೂಲಕ ಭಕ್ತ ಸಮೂಹ ಸೇರಿ ಇಂದಿಗೂ ಪ್ರಸಿದ್ಧಿಯಾಗಿದೆ. ಆದರೆ ಹಳೆಯ ಕಾಲದ ತೇರು ಧೂಳಿನಲ್ಲಿ ಮುಳುಗಿ ತನ್ನ ಗತವೈಭವನ್ನು ಕಳೆದುಕೊಂಡಿದೆ.

ಗುರು ಕೊಟ್ಟೂರೇಶ್ವರರ ಸ್ವಾಮಿಯ ಲಕ್ಷಾಂತರ ಭಕ್ತರ ಸಮೂಹದಲ್ಲಿ 21-02-2017 ರಲ್ಲಿ ವಿಜೃಂಭಣೆಯಿಂದ ಜರುಗುತ್ತಿದ್ದ ಶತಮಾನದ ತೇರು ಇನ್ನೇನು ನೆಲೆ ನಿಲ್ಲುವ ಸುಮಾರು ದೂರದಲ್ಲಿ ಇದ್ದಕ್ಕಿದ್ದ ಹಾಗೆ ಅಚ್ಚು ಮುರಿದು ನೆಲಕ್ಕುರುಳಿತು. ಗುರು ಕೊಟ್ಟೂರೇಶ್ವರ ಸ್ವಾಮಿ ಪವಾಡ ಎಂಬಂತೆ ಯಾರೊಬ್ಬರಿಗೂ ಏನು ಆಗಲಿಲ್ಲ. ಶತಮಾನಗಳಿಂದ ದೇವರ ಉತ್ಸವ ನಡೆದುಕೊಂಡು ಬಂದಿರುವ ಈ ತೇರನ್ನು ಕೂಡಲೇ ಬದಲಾಯಿಸುವಂತೆ ದೈವಸ್ಥರು ನಿರ್ಧಾರ ಕೈಗೊಂಡು ಮುಜರಾಯಿ ಇಲಾಖೆಯಿಂದ ಹೊಸ ತೇರು ಮಾಡಿಸಲು ಮುಂದಾಗಿ 2018ನೇ ವರ್ಷದಿಂದ ಹೊಸ ತೇರು ತಯಾರಿಸಿ ಈಗಾಗಲೇ 2 ವರ್ಷಗಳಿಂದ ಹೊಸ ತೇರಿನಲ್ಲಿ ಸ್ವಾಮಿಯ ಉತ್ಸವ ಸಾಂಗೋಪಾಂಗವಾಗಿ ನೆರವೇರಿದೆ.

ಹೊಸ ತೇರು ಮಾಡಿಸುವಾಗ ಹಳೆಯ ಶತಮಾನದ ತೇರನ್ನು ಭಕ್ತ ಸಮೂಹಕ್ಕೆ ಇತಿಹಾಸವಾಗಿರಲೆಂದು ಅದಕ್ಕೆ ಗಾಜಿನ ಮನೆ ನಿರ್ಮಿಸಿ ಭದ್ರತೆ ಒದಗಿಸುವುದಾಗಿ ಹೇಳಲಾಗಿತ್ತು. ಆದರೆ ಈಗಾಗಲೇ 3 ವರ್ಷಗಳೇ ಸಮೀಪಿಸುತ್ತಿದ್ದರು ಶತಮಾನದ ತೇರನ್ನು ಯಾರು ಗಮನ ಹರಿಸುತ್ತಿಲ್ಲ. ಈಗ ಮೂರ್ಕಲ ಮಠದ ರಸ್ತೆ ಪಕ್ಕದಲ್ಲಿ ತಾತ್ಕಾಲಿಕ ಬಯಲು ಶೆಡ್‌ ನಿರ್ಮಿಸಿ ತೇರು ನಿಲ್ಲಿಸಲಾಗಿದೆ.

ಪವಾಡ ಸೃಷ್ಟಿಸಿದ ಶತಮಾನದ ತೇರು ವಾಹನಗಳ ಓಡಾಟದಿಂದಾಗಿ ಧೂಳು ತುಂಬಿ ಹಾಳಾಗುತ್ತಿದೆ. ಗುರು ಕೊಟ್ಟೂರೇಶ್ವರ ಹಿರೇಮಠದಿಂದ ಪ್ರತಿವರ್ಷ 1 ಕೋಟಿಗೂ ಅ ಧಿಕ ಮೊತ್ತದ ಆದಾಯ ಸಂಗ್ರಹವಾಗುತ್ತಿದ್ದು, ಇದು ಮುಜರಾಯಿ ಇಲಾಖೆ ಸೇರಿದ ಮಠವಾಗಿದೆ. ಸರ್ಕಾರ ಶತಮಾನದ ತೇರಿಗೆ ಭದ್ರತೆ ಒದಗಿಸವತ್ತ ಮುಂದಾಗಬೇಕಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next