Advertisement
ಶ್ರೀಗುರುಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ನಿಮಿತ್ತ ಕೊಟ್ಟೂರೇಶ್ವರ ದೇವಸ್ಥಾನದ ಎದುರುಗಡೆ ಮುಜರಾಯಿ ಧಾರ್ಮಿಕ ದತ್ತಿ ಇಲಾಖೆವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
Related Articles
Advertisement
ಪಪಂ ಮುಖ್ಯಾಧಿಕಾರಿ ಎಚ್.ಎಫ್. ಬಿದರಿ ಮಾತನಾಡಿ, ಜಾತ್ರೋತ್ಸವದ ಅವಧಿಯಲ್ಲಿ ಪಟ್ಟಣದ ಜನತೆಗೆ ಯಾವುದೇ ಹಂತದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಪಟ್ಟಣ ಪಂಚಾಯತ್ ಆಡಳಿತ ಕ್ರಮ ಕೈಗೊಂಡಿದೆ. ಜೆಸ್ಕಾಂ ಇಲಾಖೆ ಸಮರ್ಪಕವಾದ ವಿದ್ಯುತ್ ನೀಡಿದ್ದಲ್ಲಿ ಪಟ್ಟಣದ ಜನತೆಗೆ ತೊಂದರೆಯಾಗದಂತೆ ನೀರು ಪೂರೈಸಲಾಗುವುದು ಎಂದರು.
ಜಾತ್ರಾ ಮಹೋತ್ಸವದಲ್ಲಿ ಯಾವುದೇ ಬಗೆಯ ವಿದ್ಯುತ್ ಅವಘಡ ಮತ್ತು ಭಕ್ತರಿಗೆ ತಕ್ಷಣದ ಚಿಕಿತ್ಸೆ ಒದಗಿಸಲು ಜೆಸ್ಕಾಂ ಹೆಲ್ಪ್ಲೈನ್ ಸಂಪರ್ಕ ಕಲ್ಪಿಸಬೇಕು. ಪಟ್ಟಣದ ನಾಲ್ಕೈದು ಕಡೆ ಉಪ ಆರೋಗ್ಯ ಕೇಂದ್ರಗಳನ್ನು ತೆರೆಯಬೇಕು ಎಂದು ಜೆಸ್ಕಾಂ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಆರೋಗ್ಯ ಇಲಾಖೆ ಹೊರತುಪಡಿಸಿ ಖಾಸಗಿಯವರು ರಕ್ತದಾನ ಶಿಬಿರ ನಡೆಸಕೂಡದು. ಈ ಸಂಬಂಧ ತಾಲೂಕು ಆರೋಗ್ಯ ಅಧಿಕಾರಿ ಕ್ರಮ ಕೈಗೊಳ್ಳಬೇಕು. ಕೊಟ್ಟೂರೇಶ್ವರ ಸ್ವಾಮಿಯ ರಥದಲ್ಲಿ ಸ್ವಾಮಿಯೊಂದಿಗೆ ಕೇವಲ 12 ಪೂಜಾಕರ್ತರು ರಥದಲ್ಲಿ ಆಸೀನರಾಗಬೇಕು. 12ಕ್ಕಿಂತ ಒಬ್ಬರು ಹೆಚ್ಚಾದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಹಶೀಲ್ದಾರ್ ಮಂಜುನಾಥ ಎಚ್ಚರಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಜಾತ್ರಾ ಮಹೋತ್ಸವ ಯಶಸ್ವಿಯಾಗಿ ಪೂರ್ಣಗೊಳ್ಳಲು ಅಧಿಕಾರಿಗಳು ತಮಗೆ ನಿರ್ವಹಿಸಿದ ಕಾರ್ಯವನ್ನು ನಿರ್ಲಕ್ಷ್ಯ ವಹಿಸದೆ ಶೀಘ್ರವಾಗಿ ಮಾಡಬೇಕು ಎಂದು ಸೂಚಿಸಿದರು.
ಹೊಸಪೇಟೆ ಸಹಾಯಕ ಆಯುಕ್ತ ಲೋಕೇಶ, ಧರ್ಮಕರ್ತ ಸಿ.ಎಚ್.ಎಂ. ಗಂಗಾಧರ, ಕ್ರಿಯಾಮೂರ್ತಿ ಶಂಕರಸ್ವಾಮೀಜಿ, ಎಂ.ಎಂ.ಜೆ. ಹರ್ಷವರ್ಧನ್, ಜಿಪಂ ಸದಸ್ಯ ಉಜ್ಜಯಿನಿ, ಡಿವೈಎಸ್‌ಪಿ ಬಸವೇಶ್ವರ, ಸಿಪಿಐ ಎಂ. ರವೀಂದ್ರ ಕುರಬಗಟ್ಟಿ, ಪಿಎಸ್‌ಐ ತಿಮ್ಮಣ್ಣ, ಪಿ.ಎಚ್. ದೊಡ್ಡರಾಮಣ್ಣ, ದ್ವಾರಕೀಶ್, ಬೂದಿ ಶಿವಕುಮಾರ್, ಪಪಂ ನೂತನ ಸದಸ್ಯರು ಇತರರು ಇದ್ದರು. ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಸ್.ಪಿ.ಬಿ. ಮಹೇಶ್ ಸ್ವಾಗತಿಸಿದರು. ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್. ಪ್ರಕಾಶ್‌ರಾವ್ ವಂದಿಸಿದರು.