Advertisement
ಬಿರುಗಾಳಿಗೆ ಹಾರಿಹೋದ ಮನೆ ಶೀಟುಗಳು, ಹೆಂಚುಗಳು, ಆಲಿಕಲ್ಲು ಮಳೆಗೆ ನೆಲಕಚ್ಚಿದ 20ರಿಂದ 30 ಎಕರೆ ದಾಳಿಂಬೆ ತೋಟ ಹತ್ತರಿಂದ ಹದಿನೈದು ಎಕರೆ ಬಾಳೆತೋಟ, 10 ಎಕರೆ ಪಪ್ಪಾಯಿ ಒಟ್ಟು ಸುಮಾರು 30ರಿಂದ 40 ಲಕ್ಷ ರೂ. ಹಾನಿಯಾಗಿದೆ.
Related Articles
Advertisement
ಕಾಡು ಹಂದಿ ಹಾವಳಿ ಭೀತಿ ಇಲ್ಲ. ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಬೆಳೆ. ವರ್ಷಕಾಲ ಕಷ್ಟಪಟ್ಟರೆ ಒಂದಷ್ಟು ಆದಾಯ ಬರುತ್ತದೆ ಎಂದು ಕಷ್ಟಪಟ್ಟು ಬೆಳೆದ ಬಾಳೆ, ಅಲ್ಪಾವಧಿ ಬೆಳೆಯಾಗಿ ತರಕಾರಿ ಬೆಳೆಗಳಾದ ಟೊಮೆಟೋ ಸೋಲಾರ್ ಬೀನ್ಸ್ ಇತರೆ ತರಕಾರಿ ಬೆಳೆಗಳು ನಾಶವಾಗಿರುವ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿದ್ದಾರೆ. ಬಿರುಗಾಳಿಯಿಂದ ಬೆಳೆಗಳು ಕ್ಷ ಣಾರ್ಧದಲ್ಲೇ ನಾಶವಾದವು. ಈ ರೀತಿ ಆದರೆ ಮಾಡಿದ ಸಾಲ ತೀರಿಸುವುದು ಹೇಗೆ. ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಏನು ಮಾಡುವುದು ಎಂದು ನಿಂಬಳಗೇರಿ ಗ್ರಾಮದ ನಷ್ಟಕ್ಕೆ ಸಿಲುಕಿದ ರೈತ ಕೊಟ್ರೇಶ್, ಜಿ. ಶಾಂತಮ್ಮ, ಮಹಾಂತೇಶ್, ರಾಜೇಂದ್ರ ಗೌಡ, ಎಸ್.ಪ್ರಕಾಶ್, ಗಂಗಾಧರ, ಮರುಳಸಿದ್ದಪ್ಪ ಅಳಲು ತೋಡಿಕೊಂಡಿದ್ದಾರೆ.