Advertisement

ಇಂದೋರ್‌ನಿಂದ ಧರ್ಮಸ್ಥಳಕ್ಕೆ ವ್ಹೀಲ್‌ಚೇರ್‌ನಲ್ಲಿ ತೀರ್ಥಯಾತ್ರೆ

11:43 AM Mar 02, 2020 | Team Udayavani |

ಕೊಟ್ಟಿಗೆಹಾರ: ಮಧ್ಯ ಪ್ರದೇಶದ ಇಂದೋರ್‌ನ ಮೌನ್‌ಕೆಡದಿಂದ ಧರ್ಮ ಸ್ಥಳಕ್ಕೆ ವ್ಹೀಲ್‌ ಚೇರ್‌ನಲ್ಲಿ ತೀರ್ಥ ಯಾತ್ರೆ ಹೊರಟ ಜೈನ ಸಾದ್ವಿಯೊಬ್ಬರು ಶನಿವಾರ ಸಂಜೆ ಕೊಟ್ಟಿಗೆಹಾರ ತಲುಪಿದರು.

Advertisement

ಕೊಟ್ಟಿಗೆಹಾರದ ರಾಮಮಂದಿರದಲ್ಲಿ ಶನಿವಾರ ಸಂಜೆ ತಂಗಿದ್ದರು. ಈ ವೇಳೆ ಮಾತನಾಡಿದ ಮೂಡಿಗೆರೆ ಜೈನ ಸಂಘದ ಪ್ರವೀಣ್‌ ಜೈನ್‌ ಅವರು, ಮಧ್ಯಪ್ರದೇಶದ ಇಂದೋರ್‌ನ ಮೌನ್‌ಕೆಡದಿಂದ ಧರ್ಮಸ್ಥಳಕ್ಕೆ ಸುಮಾರು 3 ಸಾವಿರ ಕಿಮೀ ಇದ್ದು, ಭವ್ಯಗುಣ ಸಾದ್ವಿ ಅವರು ವ್ಹೀಲ್‌ಚೇರ್‌ನಲ್ಲೇ ತೀರ್ಥಯಾತ್ರೆ ಹೊರಟ್ಟಿದ್ದಾರೆ. ಶನಿವಾರ ಕೊಟ್ಟಿಗೆಹಾರದ ರಾಮಮಂದಿರದಲ್ಲಿ ತಂಗಿ, ಭಾನುವಾರ ಬೆಳಿಗ್ಗೆ ಚಾರ್ಮಾಡಿ ಘಾಟ್‌ ಮಾರ್ಗವಾಗಿ ಧರ್ಮಸ್ಥಳಕ್ಕೆ ತೆರಳಲಿದ್ದಾರೆ. ಅವರಿಗೆ ಸ್ಥಳೀಯ ಜೈನ ಸಮುದಾಯದವರು ಸಹಕಾರ ನೀಡುತ್ತಿದ್ದಾರೆ ಎಂದರು.

ಸಕಲೇಶಪುರದ ಜೈನ ಸಮುದಾಯದ ದಿನೇಶ್‌ ಕುಮಾರ್‌ ಮಾತನಾಡಿ, ಮಧ್ಯ ಪ್ರದೇಶದ ಇಂದೋರ್‌ನಿಂದ ಧರ್ಮಸ್ಥಳಕ್ಕೆ ಸಾಗುವ ಮಾರ್ಗದುದ್ದಕ್ಕೂ ಜೈನ ಸಮುದಾಯದವರು ವಸತಿ ಮತ್ತಿತರ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಜೈನ ಸಮುದಾಯದ ಶೀತಲ್‌, ಮೂಡಿಗೆರ ಜೈನ ಸಂಘದ ದಿನೇಶ್‌ ಜೈನ್‌, ಸುರೇಶ್‌ ಜೈನ್‌, ಕೊಟ್ಟಿಗೆಹಾರ ವರ್ತಕರ ಸಂಘದ ಕಾರ್ಯದರ್ಶಿ ವೇಣುಗೋಪಾಲ್‌ ಪೈ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next