Advertisement

ನಾಲ್ಕು ಮಳೆಗಾಲ ಬಂದರೂ ನೆಲೆಯಾಗದ ಬದುಕು : ಪುನರ್ವಸತಿ ನಿರೀಕ್ಷೆಯಲ್ಲಿ ನೆರೆಸಂತ್ರಸ್ಥರು

09:07 AM Aug 09, 2022 | Team Udayavani |

ಕೊಟ್ಟಿಗೆಹಾರ : 2019 ರಲ್ಲಿ ಸುರಿದ ಮಹಾಮಳೆಗೆ ಮಲೆ ಮನೆಯ ನೆರೆ ಸಂತ್ರಸ್ಥರು ನೆಲೆ ಕಳೆದುಕೊಂಡಿದ್ದು ನಾಲ್ಕು ವರ್ಷ ಕಳೆದರೂ ನೆರೆ ಸಂತ್ರಸ್ಥರು ನೆಲೆ ಕಂಡುಕೊಂಡಿಲ್ಲ.

Advertisement

2019ರ ಆಗಸ್ಟ್‌ 9 ರಂದು ಸುರಿದ ಭಾರಿ ಮಳೆಗೆ ಮಲೆಮನೆಯ 5 ಮನೆ ಹಾಗೂ 2 ದೇವಸ್ಥಾನಗಳು ಕೊಚ್ಚಿ ಹೋಗಿದ್ದವು. ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌ ಯಡಿಯೂರಪ್ಪ ಹಾದಿಯಾಗಿ ರಾಜ್ಯ ಸರ್ಕಾರವೇ ಗ್ರಾಮಕ್ಕೆ ಬಂದು ಬದುಕು ಕಟ್ಟಿಕೊಡುವ ಭರವಸೆ ನೀಡಿ ಹೋಗಿದ್ದರು. ಆದರೆ ಅದು ಕೇವಲ ಭರವಸೆಯಾಗಿಯೇ ಉಳಿಯಿತೇ ಹೊರತು ಕಾರ್ಯರೂಪಕ್ಕೆ ಬರಲೇ ಇಲ್ಲ.

ಕಳೆದ ವರ್ಷದ ಮಳೆಗಾಲದಲ್ಲಿ ಉಸ್ತುವಾರಿ ಸಚಿವರಾಗಿದ್ದ ಎಸ್‌ ಅಂಗಾರ ಅವರೂ ಕೂಡಾ ಜಿಲ್ಲಾಡಳಿತದ ಜೊತೆಗೆ ಬಂದು ಪುನರ್ವಸತಿಯ ಭರವಸೆ ನೀಡಿದ್ದರು. ಮನೆ ಕಳೆದುಕೊಂಡಿದ್ದ ನೆರೆಸಂತ್ರಸ್ಥರಿಗೆ ಒಂದು ಲಕ್ಷ ಪರಿಹಾರ ನೀಡಲಾಗಿತ್ತು. ಆದರೆ ನಾಲ್ಕು ವರ್ಷ ಕಳೆದರೂ ಕೂಡ ಪುನರ್ವಸತಿ ಕಲ್ಪಸದೇ ಇರುವುದರಿಂದ ನೆರೆಸಂತ್ರಸ್ಥರ ಬದುಕು ಅತಂತ್ರವಾಗಿದೆ.

ವರ್ಷಗಳೆ ಕಳೆದರೂ ಸರ್ಕಾರ ಪುನರ್ವಸತಿ ಕಲ್ಪಿಸದೇ ಇರುವುದು ನೆರೆಸಂತ್ರಸ್ಥರ ಬೇಸರಕ್ಕೆ ಕಾರಣವಾಗಿದ್ದು ಸರ್ಕಾರ ಶೀಘ್ರ ಪುನರ್ವಸತಿ ಕಲ್ಪಿಸಲು ಮುಂದಾಗದೇ ಇದ್ದರೆ ತಾಲ್ಲೂಕು ಕಚೇರಿ ಮುಂಭಾಗ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆಯನ್ನು ನೆರೆಸಂತ್ರಸ್ಥರು ನೀಡಿದ್ದಾರೆ.

ಇದನ್ನೂ ಓದಿ : ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಿರುವ ತೀವ್ರ ನಿಗಾ ಘಟಕ ಗೃಹ ಸಚಿವರಿಂದ ಉದ್ಘಾಟನೆ

Advertisement

ಮಲೆಮನೆ ಗ್ರಾಮಸ್ಥರಿಗೆ2-3 ಬಾರಿ ಜಾಗ ಗುರುತಿಸಿ ಕಡತ ಸಿದ್ದಪಡಿಸಲಾಗಿತ್ತು. ನಾವು ತೋರಿಸಿದ ಜಾಗಕ್ಕೆ ಹೋಗಲು ಅವರು ಸಿದ್ದರಿಲ್ಲ. ಕಡತ ಸಂಪೂರ್ಣವಾದ ನಂತರ ಶಾಸಕರ ಬಳಿ ಹೋಗಿ ನಾವು ಅಲ್ಲಿಗೆ ಹೋಗಲ್ಲ ಎನ್ನುತ್ತಾರೆ. ಅವರ ಇಂದಿನ ಪರಿಸ್ಥಿತಿಗೆ ಅವರೇ ಕಾರಣ. ಇತ್ತೀವಿಗೆ ಒಂದು ಜಾಗ ಗುರುತಿಸಿದ್ದೇವೆ. ಇನ್ನೊಂದು ವಾರ, ಹತ್ತು ದಿನದಲ್ಲಿ ಜಾಗ ನೀಡುತ್ತೇವೆ*
– ಕೆ.ಎನ್‌.ರಮೇಶ್‌, ಜಿಲ್ಲಾಧಿಕಾರಿಗಳು.

2019ರಲ್ಲಿ ಮನೆ ಕಳೆದುಕೊಂಡ ನಮಗೆ ತಳಪಾಯ ನಿರ್ಮಾಣಕ್ಕೆಂದು 1 ಲಕ್ಷ ಕೊಟ್ಟಿದ್ದು ಬಿಟ್ಟರೇ ಬದಲಿ ಜಾಗವನ್ನೂ ನೀಡಿಲ್ಲ. ಬಾಡಿಗೆ ಮನೆಯಲ್ಲಿ ಇರಲು ಸೂಚಿಸಿದ್ದರೂ ಬಾಡಿಗೆ ಹಣವನ್ನೂ ಕೊಟ್ಟಿಲ್ಲ. ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಇದ್ದೇವೆ. ಕೊನೆಯ ಹಂತಕ್ಕೆ ಬಂದು ತಲುಪಿದ್ದೇವೆ. ಮಲೆಮನೆಯ 5 ಮನೆಯವರೂ ತಾಲ್ಲೂಕು ಕಚೇರಿ ಮುಂದೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ದರಿಸಿದ್ದೇವೆ
– ಅಶ್ವತ್‌, ನೆರೆಸಂತ್ರಸ್ಥರು, ಮಲೆಮನೆ

– ಸಂತೋಷ್‌ ಅತ್ತಿಗೆರೆ

Advertisement

Udayavani is now on Telegram. Click here to join our channel and stay updated with the latest news.

Next