Advertisement

Kottigehara: ಮೇಗೂರು ಚಹಾ ತೋಟಕ್ಕೆ ಕಾಡಾನೆ ದಾಳಿ; ಬಾಳೆ, ಕಾಫಿ ಗಿಡಗಳು ಧ್ವಂಸ

06:11 PM Sep 23, 2024 | Team Udayavani |

ಕೊಟ್ಟಿಗೆಹಾರ (ಮೂಡಿಗೆರೆ): ತಾಲೂಕಿನ ಕೆಳಗೂರು ಸಮೀಪದ ಮೇಗೂರು’ಎ’ ವಿಭಾಗ ಚಹಾ (ಟೀ) ತೋಟದಲ್ಲಿ ಭಾನುವಾರ ಮಧ್ಯರಾತ್ರಿ ಒಂಟಿ ಸಲಗವೊಂದು ದಾಳಿ ನಡೆಸಿ ತೋಟದ ಲೈನ್ ಸಮೀಪ ಹಾಕಿರುವ ಬಾಳೆಗಿಡ ಹಾಗೂ ಕಾಫಿ ಗಿಡಗಳ ತುಳಿದು ಹಾನಿ ಉಂಟು ಮಾಡಿದೆ.

Advertisement

ಭಾನುವಾರ ರಾತ್ರಿ ಚಹಾ ಕಾರ್ಖಾನೆಯ ಟೀ ಮೇಕರ್ ಸುಧಾಕರ್ ಅವರ ಮನೆಯ ಮುಂದೆ ಲದ್ದಿ ಹಾಕಿ ಕಾಡಾನೆ ಕೂಗಿದಾಗ ಲೈನ್ ನಲ್ಲಿ ವಾಸ್ತವ್ಯವಿದ್ದ ಕಾರ್ಮಿಕರು ಭಯಭೀತರಾಗಿದ್ದಾರೆ. ಅದೃಷ್ಟವಶಾತ್ ಯಾರೂ ಹೊರ ಬಂದಿಲ್ಲ. ಲೈನ್ ಬಳಿ ದಾಂಧಲೆ ನಡೆಸಿದ ಕಾಡಾನೆ ಒಂದು ಗಂಟೆಗೂ ಅಧಿಕ ಕಾಲ ಅಲ್ಲೇ ಇದ್ದು ಸುತ್ತಮುತ್ತಲ ಬಾಳೆಗಿಡ ತುಳಿದು ಹಾನಿ ಮಾಡಿ ನಂತರ ಅಲ್ಲಿಂದ ತೆರಳಿದೆ.

ಒಂಟಿ ಸಲಗ ಸ್ಥಳಾಂತರಕ್ಕೆ ಒತ್ತಾಯ:
ಚಾರ್ಮಾಡಿ ಘಾಟ್, ಬಿದಿರುತಳ, ಆಲೇಕಾನ್, ಮಲೆಮನೆ ಮಾರ್ಗದ ಮೂಲಕ ಒಂಟಿ ಸಲಗ ಮೇಗೂರಿಗೆ ಬಂದಿದೆ. ಟೀ ಎಸ್ಟೇಟಿನಲ್ಲಿ ಹಲವು ಕಾರ್ಮಿಕರು ಜೀವನ ನಡೆಸುತ್ತಿದ್ದಾರೆ.ಈ ಒಂಟಿ ಸಲಗ ಹಗಲಿನಲ್ಲಿ ಬಂದಿದ್ದರೆ ಕೂಲಿ ಕಾರ್ಮಿಕರ ಮೇಲೆ ದಾಳಿ ಮಾಡುತ್ತಿತ್ತು. ರಾತ್ರಿ ಬಂದಿದ್ದರಿಂದ ದೊಡ್ಡ ದುರಂತ ತಪ್ಪಿದೆ. ಈ ಭಾಗದಲ್ಲಿ ಒಂಟಿ ಸಲಗ ಆಗಾಗ ಜನವಸತಿ ಇರುವ ಕಡೆ ಪ್ರವೇಶಿಸುತ್ತಿದೆ. ಸಂಬಂಧಪಟ್ಟ ಅರಣ್ಯಾಧಿಕಾರಿಗಳು ಒಂಟಿ ಸಲಗ ಸ್ಥಳಾಂತರಿಸಬೇಕು ಎಂದು ಕಾರ್ಮಿಕ ಜಾನ್ ನೊರೋನ್ಹ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next