ಕೊಟ್ಟಿಗೆಹಾರ: ಬೆಂಗಳೂರಿನ ನೆರಳು, ಅವಿರತ, ಪರ್ಸಿಸ್ಟೆನ್ಸ್ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ನೆರೆ ಪೀಡಿತ ಪ್ರದೇಶಗಳ 7 ಶಾಲೆಯ ಮಕ್ಕಳಿಗೆ ಒಂದು ವರ್ಷಕ್ಕೆ ಬೇಕಾಗುವ ಪುಸ್ತಕ, ವಿವಿಧ ಸಾಮಗ್ರಿಗಳನ್ನು ಶನಿವಾರ ವಿತರಿಸಲಾಯಿತು.
ಅತ್ತಿಗೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಂಗಳೂರಿನ ಅವಿರತ ಸಂಸ್ಥೆಯ ಶಿವಪ್ರಕಾಶ್, ನೆರೆಯಿಂದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ವಿವಿಧ ಶಾಲಾ ಮಕ್ಕಳಿಗೆ ಉಚಿತ ಶಾಲಾ ಸಾಮಗ್ರಿ ನೀಡಿದ್ದೇವೆ. ಇದರ ಸದುಪಯೋಗ ಪಡೆದು ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯಬೇಕು ಎಂದರು.
ಮೂಡಿಗೆರೆ ತಾಲೂಕು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಬಾಳೂರು ಮಾತನಾಡಿ, ಸಂಕಷ್ಟದಲ್ಲಿರುವಾಗ ದೇವರು ಯಾವುದೋ ರೂಪದಲ್ಲಿ ಸಹಾಯ ಮಾಡುತ್ತಾನೆ ಎಂಬುದಕ್ಕೆ ಇದೇ ಉತ್ತಮ ನಿದರ್ಶನವಾಗಿದೆ. ನೆರೆಯಿಂದ ಅತಂತ್ರರಾದ ಮಲೆನಾಡಿನ ಶಾಲೆಯ ಮಕ್ಕಳಿಗೆ ಸಾಫ್ಟ್‌ವೇರ್ ಕಂಪೆನಿಗಳ ನೌಕರರು ತ್ಯಾಗದ ಮನೋಭಾವನೆಯನ್ನು ಕ್ರೋಢಿಕರಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ನೆರವು ಪಡೆದ ಪ್ರತಿಯೊಬ್ಬರೂ ಉತ್ತಮ ಭವಿಷ್ಯದಲ್ಲಿ ನಡೆದು ಬಂದ ಸಂಕಷ್ಟದ ದಾರಿಯನ್ನು ಒಮ್ಮೆ ತಿರುಗಿ ನೋಡಬೇಕು. ಉತ್ತಮ ಪರಿಸರವಾದಿಗಳು ನೆರೆ ಸಂತ್ರಸ್ತರ ಸಂಕಷ್ಟವನ್ನು ಆಳವಾಗಿ ತಿಳಿದು ಸಹಾಯ ಮಾಡಿದ್ದಾರೆ. ಪರಿಸರದ ಬಗ್ಗೆ ಅರಿಯದ ಪರಿಸರ ವ್ಯಾ ಗಳು ಮಾಧ್ಯಮದ ಮೂಲಕ ಇಲ್ಲಸಲ್ಲದ ಹೇಳಿಕೆ ನೀಡಿ ಸಂತ್ರಸ್ತರನ್ನು ಇಕ್ಕಟ್ಟಿಗೆ ಸಿಲುಕಿಸುವ ಕಾರ್ಯ ಮಾಡುತ್ತಿರುವುದು ಸಲ್ಲದು ಎಂದರು.
ಬಣಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎಂ.ಭರತ್ ಮಾತನಾಡಿ, ನೌಕರರು ತಮ್ಮ ಸಂಬಳವನ್ನು ತ್ಯಾಗ ಮಾಡಿ ಬಡ ಮಕ್ಕಳಿಗೆ ನೀಡಿರುವುದು ಸಂಸ್ಥೆಯ ನೌಕಕರ ನಿಸ್ವಾರ್ಥ ಸೇವೆಗೆ ಉದಾಹರಣೆಯಾಗಿದೆ. ಮಕ್ಕಳು ಪುಸ್ತಕ ಮುಂತಾದ ಸಾಮಗ್ರಿಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಫೌಂಡೇಷನ್‌ನ ಆಶೀಮ್, ಮಹಾಲಕ್ಷ್ಮೀ , ಹಿಮಾ, ಸ್ಪರ್ಶ ಟ್ರಸ್ಟ್‌ನ ಶಶಿಧರ್ ಕೋಟ್ಯಾನ್, ಸಂದೀಪ್, ಆಶೋಕ್, ಹರೀಶ್, ರಮ್ಯಾ, ಆರತಿ, ಶ್ರೀಕಾಂತ್, ನಾಗೇಂದ್ರ, ಪರಿಸರವಾದಿ ದಿನೇಶ್ ಹೊಳ್ಳ, ಟಿ.ಎಂ.ಗಜೇಂದ್ರ, ಜೆಸಿಐ ವಿಸ್ಮಯದ ಅಧ್ಯಕ್ಷ ವಾಟೇಖಾನ್ ರವಿ, ಹಳೆ ವಿದ್ಯಾರ್ಥಿ ಎ.ಎಂ. ಹಸೇನ, ಟಿ.ಎಂ.ನರೇಂದ್ರ, ಮುಖ್ಯ ಶಿಕ್ಷಕ ಡಿ.ರಾಜು, ಶಿಕ್ಷಕರಾದ ಕುಮಾರ್, ಮೈಮುನಾಬಿ, ಹಂಸಲೇಖ, ರಂಜನ, ದಿನೇಶ್, ಸಂಜಯ್ ಗೌಡ, ಉಮೇಶ್ ಬಾಳೂರು, ವೀರಪ್ಪಗೌಡ, ಆದರ್ಶ್ ಇತರರಿದ್ದರು.