Advertisement

ಹೆದ್ದಾರಿ ಪ್ರಾಧಿಕಾರ ಅವೈಜ್ಞಾನಿಕ ಕಾಮಗಾರಿ : ಕಂದಕಕ್ಕೆ ಬಿದ್ದ ಕಾರು, ಚಾಲಕನಿಗೆ ಗಾಯ

02:27 PM Sep 07, 2022 | Team Udayavani |

ಕೊಟ್ಟಿಗೆಹಾರ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿ ಹೊಡದು ಕಂದಕಕ್ಕೆ ಬಿದ್ದು ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಬುಧವಾರ ನಡೆದಿದೆ.

Advertisement

ಮೂಡಿಗೆರೆಯಿಂದ ಮಾಗುಂಡಿಗೆ ಕಾರಿನಲ್ಲಿ ತೆರೆಳುತ್ತಿದ್ದ ಮಾಗುಂಡಿಯ ನಿತ್ಯದಾರ್ ಕೊಟ್ಟಿಗೆಹಾರ ದ ಅತ್ತಿಗೆರೆ ಹೆದ್ದಾರಿ ಸಮೀಪ ನಿಯಂತ್ರಣ
ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ.

ಹೆದ್ದಾರಿ ಪ್ರಾಧಿಕಾರ ತಿರುವುಗಳಲ್ಲಿ ತಡೆಗೋಡೆ ನಿರ್ಮಿಸದೆ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿರುವುದರಿಂದ ಈ ಘಟನೆಗಳು ನಡೆಯುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಗಾಯಗೊಂಡ ನಿತ್ಯದಾರ್ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ : ಪಾಕಿಸ್ತಾನ, ಬಾಂಗ್ಲಾದೇಶವನ್ನು ಜೋಡಿಸಿ: ಕಾಂಗ್ರೆಸ್ ಗೆ ಹಿಮಂತ ಬಿಸ್ವಾ ಶರ್ಮಾ ಸವಾಲು

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next