ಕೊಟ್ಟಿಗೆಹಾರ : ನೇಣು ಬಿಗಿದ ಸ್ಥಿತಿಯಲ್ಲಿ ಅಪ್ರಾಪ್ತ ಯುವತಿಯೊಬ್ಬಳು ಮೃತಪಟ್ಟಿದ್ದು ಯುವತಿಯ ಸಾವು ಅನುಮಾನಸ್ಪದವಾಗಿದೆ ಎಂದು ಯುವತಿಯ ಸಂಬಂಧಿಕರು ಬಣಕಲ್ ಠಾಣೆಗೆ ದೂರು ನೀಡಿದ್ದಾರೆ.
ಬಣಕಲ್ ಠಾಣಾ ವ್ಯಾಪ್ತಿಯ ಹೆಬ್ರಿಗೆ ಗ್ರಾಮದಲ್ಲಿ ಘಟನೆ ನಡೆದಿದ್ದು ಕೆ.ಆರ್. ದೀಕ್ಷಾ (17) ಮೃತಪಟ್ಟ ಯುವತಿ. ಸಕಲೇಶಪುರ ತಾಲ್ಲೂಕಿನ ಕೊಗರಹಳ್ಳಿ ಮೂಲದ ದೀಕ್ಷಾ ಬಣಕಲ್ ಸಮೀಪದ ಹೆಬ್ರಿಗೆ ಗ್ರಾಮದ ಸಂಬಂಧಿಕರ ಮನೆಯಲ್ಲಿದ್ದುಕೊಂಡು ಚಿಕ್ಕಮಗಳೂರಿನ ಕಾಲೇಜಿಗೆ ಹೋಗುತ್ತಿದ್ದಳು. ಶುಕ್ರವಾರ ಕಾಲೇಜಿಗೆ ರಜೆ ಇದ್ದುದ್ದರಿಂದ ದೀಕ್ಷಾ ಮನೆಯಲ್ಲಿ ಇದ್ದಳು.
ಸಂಜೆ ಮನೆಯವರು ಮನೆಗೆ ಬಂದು ನೋಡಿದಾಗ ದೀಕ್ಷಾ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಮೃತಳ ಸಂಬಂಧಿಕರಾದ ಅಣ್ಣಪ್ಪ ಬಣಕಲ್ ಠಾಣೆಗೆ ದೂರು ನೀಡಿದ್ದು ದೀಕ್ಷಾ ಸಾವಿನ ಬಗ್ಗೆ ಅನುಮಾನಗಳಿದ್ದು ತನಿಖೆ ನಡೆಸುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ಬಣಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ :ಮೇಕೆಗಳನ್ನು ಮೇಯಿಸುತ್ತಿದ್ದ ವೇಳೆ ಏಕಾಏಕಿ ಚಿರತೆ ದಾಳಿ : ಒಂದು ಮೇಕೆ ಸಾವು