Advertisement
ಕಳೆದ ಮೂರು ದಿನಗಳಿಂದ ಗ್ರಾಮದ ಕೆಲವರಿಗೆ ಹೊಟ್ಟೆನೋವು, ಬೇಧಿ ಕಾಣಿಸಿಕೊಂಡಿದ್ದು ಮಂಗಳವಾರ ಗ್ರಾಮದಲ್ಲಿ ಹಲವರಿಗೆ ಹೊಟ್ಟೆನೋವು, ಬೇಧಿ ಕಾಣಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಮಂಗಳವಾರದವರೆಗೆ ಭಾರತಿಬೈಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 30 ಕ್ಕೂ ಹೆಚ್ಚು ಮಂದಿ ಹೊಟ್ಟೆನೋವು ಮತ್ತು ಬೇಧಿಗೆ ಚಿಕಿತ್ಸೆ ಪಡೆದಿದ್ದಾರೆ. ಗ್ರಾಮದಲ್ಲಿ ಯಾವ ಕಾರಣದಿಂದ ಏಕಕಾಲದಲ್ಲಿ ಹಲವರಿಗೆ ಹೊಟ್ಟೆನೋವು, ಬೇಧಿ ಕಾಣಿಸಿಕೊಂಡಿದೆ ಎಂಬುದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಕುಡಿಯುವ ನೀರಿನಿಂದ ಈ ರೀತಿ ಆಗಿರಬಹುದು ಎಂದು ವೈದ್ಯಾಧಿ ಕಾರಿಗಳು ಅನುಮಾನಿಸಿದ್ದು ಪ್ರಯೋಗಾಲಯಕ್ಕೆ ಕುಡಿಯುವ ನೀರಿನ ಮಾದರಿಯನ್ನು ಕಳಿಸಿದ್ದು ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ.
ವಾರಕ್ಕೆ 2 ಬಾರಿ ಬ್ಲೀಚಿಂಗ್ ಪೌಡರ್ ಹಾಕಿ ಸ್ವತ್ಛಗೊಳಿಸಲು ಸೂಚಿಸಲಾಗಿದೆ. ಕುಡಿಯುವ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ವರದಿ ಬರಲು 36 ಗಂಟೆ ಬೇಕಾಗಿದೆ. ಮೇಲ್ನೋಟಕ್ಕೆ ಈ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬುದು ಕಂಡು ಬಂದಿದ್ದು ವರದಿಯ ನಂತರ ಸತ್ಯಾಂಶ ಹೊರಬರಲಿದೆ ಎಂದರು. ಗ್ರಾಮದ ಸುಮಾರು 250 ಮನೆಗಳಿಗೆ 5 ಸಾವಿರ ಹಾಲೋಜಿನ್ ಮಾತ್ರೆಗಳನ್ನು ವಿತರಿಸಲಾಗಿದ್ದು ಈ ಮಾತ್ರೆಗಳನ್ನು 20 ಲೀಟರ್ ನೀರಿಗೆ 1 ಮಾತ್ರೆಯನ್ನು ಹಾಕಿ ಸೇವಿಸಬೇಕು ಎಂದರು. ಗ್ರಾಮಸ್ಥ ಶಿವಪ್ರಸಾದ್ ಮಾತನಾಡಿ, ಮಂಗಳವಾರದಿಂದ ನನಗೆ ಹೊಟ್ಟೆನೋವು ಪ್ರಾರಂಭವಾಗಿದೆ. ಭಾರತಿಬೈಲ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದೇನೆ. ನಮ್ಮ ಮನೆಯಲ್ಲಿ ಕಾಯಿಸಿ ಆರಿಸಿದ ನೀರನ್ನೇ ಬಳಸುತ್ತೇವೆ. ಗ್ರಾಮದಲ್ಲಿ ಹೊಟ್ಟೆನೋವು, ಬೇಧಿ ಹಲವರಿಗೆ ಕಾಣಿಸಿಕೊಂಡಿದೆ ಎಂದರು. ಬಿ. ಹೊಸಳ್ಳಿ ಗ್ರಾಪಂ ಅಧ್ಯಕ್ಷ ರವಿಗೌಡ, ಪಿಡಿಒ ಸಮಿವುಲ್ಲಾ ಶರೀಫ್, ಕಿರಿಯ ಪುರುಷ ಆರೋಗ್ಯ ಸಹಾಯಕ ದಿನೇಶ್, ಶುಶೂಶ್ರಕಿ ಹರಿಣಾಕ್ಷಿ, ಪ್ರಮೀಳಾ ಮತ್ತಿತರರು ಇದ್ದರು.