ಕೊಟ್ಟಿಗೆಹಾರ: ಸಮೀಪದ ಅತ್ತಿಗೆರೆ ಅಂಗನವಾಡಿ ಕೇಂದ್ರ ತೀರಾ ಶಿಥಿಲಾವಸ್ತೆಯಲ್ಲಿದ್ದು ಕುಸಿಯುವ ಹಂತಕ್ಕೆ ತಲುಪಿದೆ.
ಅಂಗನವಾಡಿಯ ದುಃಸ್ಥಿತಿ ಬಗ್ಗೆ ಅನೇಕ ಬಾರಿ ಸ್ಥಳೀಯ ಆಡಳಿತದ ಗಮನ ಸೆಳೆದಿದ್ದರೂ ಯಾವುದೇ ಪ್ರಯೋಜನ ಆಗಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ.
ಅಂಗನವಾಡಿ ಶಿಥಿಲ ಆಗಿರುವುದರಿಂದ ಮಕ್ಕಳನ್ನು ಇಲ್ಲಿಗೆ ಕಳಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಸುತ್ತಮುತ್ತ ಪೊದೆಗಳು ಇರುವುದರಿಂದ ಹಾವುಗಳ ಕಾಟವು ಅಧಿಕವಾಗಿದ್ದು, ಕಳೆದ 1 ವಾರದಲ್ಲಿ 3 ಬಾರಿ ಇಲ್ಲಿ ಹಾವು ಪತ್ತೆಯಾಗಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಶಿಥಿಲಗೊಂಡ ಕಟ್ಟಡವನ್ನು ದುರಸ್ತಿಪಡಿಸುವ ಬದಲಾಗಿ, ಹೊಸದಾಗಿ ಕಟ್ಟಡ ನಿರ್ಮಿಸಬೇಕು. ಅಲ್ಲಿಯವರೆಗೆ, ತಾತ್ಕಾಲಿಕವಾಗಿ ಅಂಗನವಾಡಿ ಕೇಂದ್ರವನ್ನು ಸೂಕ್ತ ಸ್ಥಳಕ್ಕೆ ವರ್ಗಾಯಿಸಬೇಕು ಎನ್ನುವ ಅಭಿಪ್ರಾಯ ಹಲವರದ್ದು.
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಕ್ಷಣ ಈ ನಿಟ್ಟಿನಲ್ಲಿ ಗಮನ ಹರಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.