Advertisement
ರವಿವಾರ ಪುರಭವನದಲ್ಲಿ ಕೊಟ್ಟಾರಿ ಯುವ ವೇದಿಕೆಯ ಉದ್ಘಾಟನೆ, ಯುವ ಸಮಾವೇಶ ಹಾಗೂ ವಿದ್ಯಾನಿಧಿ ಉದ್ಘಾಟನೆ ಕಾರ್ಯಕ್ರಮ ದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅಲ್ಲಿ ಉನ್ನತಿ ಇದೆ. ಯುವ ಸಮುದಾಯಕ್ಕೆ ಸದ್ವಿಚಾರಗಳನ್ನು ತಿಳಿಸಿಕೊಡಬೇಕು. ಯುವ ಶಕ್ತಿಯ ಸದ್ವಿವಿನಿ
ಯೋಗವಾಗಲಿ ಎಂದು ಹಾರೈಸಿದರು. ಮಾರ್ಗದರ್ಶನ ಅಗತ್ಯ
ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಯುವಶಕ್ತಿ ಮನಸ್ಸು ಮಾಡಿದರೆ ಸದೃಢ ದೇಶ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ. ಅದಕ್ಕಾಗಿ ಮೌಲ್ಯಧಾರಿತ ವಿಚಾರಗಳೊಂದಿಗೆ ಯುವ ಜನರನ್ನು ಮುನ್ನಡೆಸುವ ಮಾರ್ಗದರ್ಶಕರು ಬೇಕು ಎಂದರು. ಯಾವುದೇ ವ್ಯಕ್ತಿಯ ಹೆಸರು ರಸ್ತೆಗೆ ಇಡಬೇಕು ಎಂದಾಗ ಜಾತಿ, ಧರ್ಮದ ಬಗ್ಗೆ ಚಿಂತಿಸದೆ ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಮುಂದೆ ಹೆಜ್ಜೆ ಇಡಬೇಕು ಎಂದು ಅಭಿಪ್ರಾಯಪಟ್ಟರು.
Related Articles
ಕರಾವಳಿ ಕಾಲೇಜು ಸಮೂಹ ಸಂಸ್ಥೆಯ ಅಧ್ಯಕ್ಷ ಗಣೇಶ್ ರಾವ್ ಮಾತನಾಡಿ, ಸಮುದಾಯದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರನ್ನು ಗುರುತಿಸಿ ಅವರಿಗೆ ಸಹಾಯ ಮಾಡುವ ಗುರಿ ಹೊಂದಿರುವ ನೂತನ ವೇದಿಕೆ ಉತ್ತಮ ಕಾರ್ಯಗಳಿಂದ ಪ್ರಬಲ ಸಮುದಾಯಗಳಿಗೆ ಮಾದರಿಯಾಗಿ ಬೆಳೆಯಬೇಕು. ಅವಶ್ಯವಿದ್ದರೆ ಕೊಟ್ಟಾರಿ ಸಮುದಾಯದ ಇಬ್ಬರು ವಿದ್ಯಾರ್ಥಿಗಳಿಗೆ ತನ್ನ ಸಂಸ್ಥೆಯಲ್ಲಿ ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡಲು ಬದ್ಧ ಎಂದು ಹೇಳಿದರು.
ವಿದ್ಯಾನಿಧಿಯನ್ನು ಎಡಪದವು ಭೂತನಾಥೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ್ ಶೆಟ್ಟಿ ಉದ್ಘಾಟಿಸಿದರು. ದ.ಕ. ಜಿಲ್ಲಾ ಕೊಟ್ಟಾರಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಎಂ. ಪುರುಷೋತ್ತಮ ಕೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು.
Advertisement
ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್, ಶಾಸಕ ಜೆ.ಆರ್. ಲೋಬೋ, ಮೇಯರ್ ಕವಿತಾ ಸನಿಲ್, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಚಿತ್ರನಟ ನವೀನ್ ಡಿ. ಪಡೀಲ್, ಸಮಾಜದ ಪ್ರಮುಖರಾದ ವಾಸು ದೇವ ಕೊಟ್ಟಾರಿ, ಉಮಾನಾಥ ಕೊಟ್ಟಾರಿ, ಜಯಪ್ರಕಾಶ್ ವಾಮಂಜೂರು ಡಾ| ಕಿಶೋರ್ ಕೊಟ್ಟಾರಿ, ನೋಣಯ್ಯ ಕೊಟ್ಟಾರಿ, ಶ್ರೀನಿವಾಸ ಕೊಟ್ಟಾರಿ, ನೇಮು ಕೊಟ್ಟಾರಿ, ಕೇಶವ ಕೊಟ್ಟಾರಿ, ಯೋಗೀಶ್ ಕೊಟ್ಟಾರಿ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಪೂರ್ವಭಾವಿ ಯಾಗಿ ಶೋಭಾಯಾತ್ರೆ ಜರಗಿತು. ಯುವ ಒಕ್ಕೂಟದ ಅಧ್ಯಕ್ಷ ಅಶ್ವಿತ್ ಕೊಟ್ಟಾರಿ ಸ್ವಾಗತಿಸಿದರು. ಶುಕರಾಜ್ ಎಸ್. ಕೊಟ್ಟಾರಿ ಪ್ರಸ್ತಾವನೆಗೈದರು.