Advertisement

ಕೊಟ್ಟಾರಚೌಕಿ: ರಸ್ತೆ ಗುಂಡಿ ಸರಿಪಡಿಸಿ

11:28 AM Apr 08, 2022 | Team Udayavani |

ಕೊಟ್ಟಾರಚೌಕಿ: ರಸ್ತೆಗಳಲ್ಲಿ ಮ್ಯಾನ್‌ಹೋಲ್‌ ಗಾಗಿ ಮಾಡಿರಿಸಲಾದ ರಚನೆ ವಾಹನ ಸವಾರರಿಗೆ ಸಂಕಷ್ಟ ತರುವ ಹಲವು ಸ್ಥಳ ಮಂಗಳೂರಿನಲ್ಲಿದೆ. ಈ ಪೈಕಿ ಕೊಟ್ಟಾರಚೌಕಿ ಫ್ಲೈಓವರ್‌ ಕೆಳಭಾಗದ ಸಮಸ್ಯೆ ಕೂಡ ಇದೀಗ ವಾಹನ ಸವಾರರಿಗೆ ನಿತ್ಯ ಕಿರಿಕಿರಿ ಉಂಟು ಮಾಡಿದೆ.

Advertisement

ಲೇಡಿಹಿಲ್‌ ಕಡೆಯಿಂದ ಕೂಳೂರು ಭಾಗಕ್ಕೆ ಕೊಟ್ಟಾರಚೌಕಿ ಫ್ಲೈಓವರ್‌ ಕೆಳಭಾಗದಿಂದ ತಿರುವು ಪಡೆಯುವ ಸಂದರ್ಭದಲ್ಲಿಯೇ ಇಂತಹ ಸಮಸ್ಯೆಗಳು ಕಿರಿಕಿರಿ ಉಂಟು ಮಾಡುತ್ತಿದೆ. ಅದರಲ್ಲಿಯೂ ದ್ವಿಚಕ್ರ ವಾಹನಗಳ ಓಡಾಟಕ್ಕೆ ಇಲ್ಲಿ ನಿತ್ಯ ಸಮಸ್ಯೆ ಉಂಟು ಮಾಡಿದೆ.

ಒಂದೆಡೆ ಹೊಂಡ ಇದ್ದರೆ, ಮತ್ತೂಂದೆಡೆ ಹೊಂಡ ಮುಚ್ಚಲು ಅವೈಜ್ಞಾನಿಕವಾಗಿ ಮಾಡಿದ ಕಾಮಗಾರಿ… ಹೀಗೆ ಬೇರೆ ಬೇರೆ ವಿಧಾನದಲ್ಲಿ ಇಲ್ಲಿ ಸಮಸ್ಯೆ ಇದೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಇಲ್ಲಿನ ರಸ್ತೆಯನ್ನು ಈಗಲೇ ದುರಸ್ತಿ ಮಾಡಿದರೆ ಉತ್ತಮ; ಇಲ್ಲವಾದರೆ ಮಳೆಗಾಲಕ್ಕೆ ಇಲ್ಲಿ ಮತ್ತೂಂದು ಸಮಸ್ಯೆ ಸೃಷ್ಟಿಯಾಗಲು ಕಾರಣವಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next