Advertisement

ಕುಮಾರಿ ಕೈಗೆ ಕೋಟಿಲಿಂಗ ದೇಗುಲ ಹೊಣೆ

04:04 PM Nov 23, 2019 | Suhan S |

ಬಂಗಾರಪೇಟೆ: ಹೈಕೋರ್ಟ್‌ ತೀರ್ಪುನಂತೆ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಆದೇಶದ ಮೇರೆಗೆ ತಾಲೂಕಿನ ಕಮ್ಮಸಂದ್ರದ ಶ್ರೀಕ್ಷೇತ್ರ ಕೋಟಿಲಿಂಗೇಶ್ವರ ದೇಗುಲದ ನಿರ್ವಹಣೆ ಹೊಣೆಯನ್ನು ಆಡಳಿತಾಧಿಕಾರಿಯಾಗಿದ್ದ ಕೆಜಿಎಫ್ ತಹಶೀಲ್ದಾರ್‌ ಕೆ.ರಮೇಶ್‌, ಕೆ.ವಿ.ಕುಮಾರಿಗೆ ಹಸ್ತಾಂತರ ಮಾಡಿದರು.

Advertisement

ಸೆ.5ರಂದು ರಾಜ್ಯ ಹೈಕೋರ್ಟ್‌ ನೀಡಿದ್ದ ಆದೇಶದ ಮೇರೆಗೆ ಜಿಲ್ಲಾಧಿಕಾರಿ ಮಂಜುನಾಥ್‌, ಒಂದು ಪುಟದಲ್ಲಿ ನೀಡಿದ್ದ ದೇಗುಲ ಹಸ್ತಾಂತರದ ಆದೇಶದ ಪತ್ರವನ್ನು ಕೆಜಿಎಫ್ ತಹಶೀಲ್ದಾರ್‌ ಕೆ.ರಮೇಶ್‌ ಶುಕ್ರವಾರ ಟ್ರಸ್ಟಿ ಕೆ.ವಿ.ಕುಮಾರಿಗೆ ನೀಡಿದರು. ಈ ಪತ್ರದಲ್ಲಿ ಈ ಹಿಂದೆ ಕೆಜಿಎಫ್ ನ್ಯಾಯಾಲಯ ನೀಡಿದ್ದ ಆದೇಶದಂತೆ ಶ್ರೀಕೋಟಿಲಿಂಗೇಶ್ವರ ದೇಗುಲದ ಸಾಮಗ್ರಿ, ಪುಸ್ತಕ ಹಾಗೂ ಇತರೆ ವಸ್ತುಗಳನ್ನು ಸರ್ಕಾರದ ವಶಕ್ಕೆ ಪಡೆಯಲಾಗಿತ್ತು. ಅದನ್ನುಕೆ.ವಿ.ಕುಮಾರಿಗೆ ಹಸ್ತಾಂತರ ಮಾಡಲು ತಿಳಿಸಲಾಗಿದೆ.

ಡೀಸಿ ಸೂಚನೆ: ಭಕ್ತರ ಹಿತದೃಷ್ಟಿಯಿಂದ ದೇಗುಲದ ಆಡಳಿತದ ನಿರ್ವಹಣೆಯಲ್ಲಿ ಯಾವುದೇ ಗೊಂದಲ ಇಲ್ಲದಂತೆ, ಶಾಂತಿಭಂಗವಾಗದಂತೆ ಎಚ್ಚರವಹಿಸಿ. ದೇವಾಲಯಕ್ಕೆ ಬರುವ ಆದಾಯ ದುರುಪಯೋಗ ಆಗದಂತೆ, ದೇವಾಲಯದ ಆಸ್ತಿಯಿಂದ ಬರುವ ಆದಾಯ ಮತ್ತು ಖರ್ಚುಗಳನ್ನು ಪಾರದರ್ಶಕವಾಗಿ, ನಿರ್ವಹಿಸಲು ದೇಗುಲ ಕಾರ್ಯದರ್ಶಿ ಕೆ.ವಿ.ಕುಮಾರಿಗೆ ಸೂಚನೆ ನೀಡಿದ್ದಾರೆ.

ಸಮಗ್ರ ಅಭಿವೃದ್ಧಿಗೆ ಶ್ರಮ: ಶ್ರೀಕೋಟಿಲಿಂಗೇಶ್ವರ ದೇವಾಲಯದ ಕಾರ್ಯದರ್ಶಿ ಕೆ.ವಿ.ಕುಮಾರಿ ಮಾತನಾಡಿ, ಶ್ರೀಕೋಟಿಲಿಂಗ ದೇಗುದಲ್ಲಿ 30 ವರ್ಷಗಳ ಸೇವೆ ಮಾಡಿದ್ದರಿಂದ ಆ ದೇವರು ಮತ್ತೆ ಈ ದೇವಾಲಯವನ್ನು ಮುನ್ನಡೆಸಲು ರಾಜ್ಯ ಹೈಕೋರ್ಟ್‌ ಮೂಲಕ ಅವಕಾಶ ನೀಡಿದೆ. ಶ್ರೀಸಾಂಭವಶಿವಮೂರ್ತಿ ಸ್ವಾಮೀಜಿಗಳ ಆಶಯಯಂತೆ ದೇಗುಲದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next