Advertisement
ದೇಯಿ ಬೈದ್ಯೆತಿ, ಕೋಟಿ -ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತ್ಲ್‌ನಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮದ ಅಂಗವಾಗಿ ಶನಿವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ಧರ್ಮಸ್ಥಳ ನಿತ್ಯಾನಂದನಗರ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ, ರಾಮ ಲಕ್ಷ್ಮಣರಂತೆ ಕೋಟಿ-ಚೆನ್ನಯರು. ಲೋಕಕಲ್ಯಾಣಕ್ಕಾಗಿ ಶಕ್ತಿ ವಿನಿಯೋಗಿ ಸಿದವರು. ತಾಳ್ಮೆ, ಸಮನ್ವಯತೆ, ಶ್ರಮ ದಿಂದ ಕೀರ್ತಿ ಆಗುತ್ತದೆ ಎಂದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.
ತುಳುನಾಡಿನ ದೈವಸ್ಥಾನಗಳಿಗೆ ಮೇರು ಸ್ಥಾನದಲ್ಲಿ ಮುಂದೆ ಗೆಜ್ಜೆಗಿರಿ ಕ್ಷೇತ್ರ ನಿಲ್ಲಲಿದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರು ಇಡಬೇಕೆಂಬ ಮನವಿಗೆ ಪೂರ್ಣ ರೀತಿಯ ಪ್ರಯತ್ನ ಮಾಡುತ್ತೇನೆ ಎಂದು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಗಿರಿನಂದನ ಸ್ಮರಣ ಸಂಚಿಕೆ ಕರಡು ಪ್ರತಿ ಅನಾವರಣ ಮಾಡಲಾಯಿತು. ಗೆಜ್ಜೆಗಿರಿ ಬ್ರಹ್ಮಕಲಶೋತ್ಸವ ಸಮಿತಿಅಧ್ಯಕ್ಷ ಪೀತಾಂಬರ ಹೇರಾಜೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುತ್ತೂರು ಶಾಸಕ ಸಂಜೀವ ಮಠಂದೂರು, ಕಾರ್ಕಳ ಶಾಸಕ ಸುನಿಲ್ ಕುಮಾರ್, ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ಮಂಗಳೂರಿನ ಉದ್ಯಮಿ ಊರ್ಮಿಳಾ ರಮೇಶ್ ಕುಮಾರ್, ಬಡಗನ್ನೂರು ಗ್ರಾ.ಪಂ. ಅಧ್ಯಕ್ಷ ಕೇಶವ ಗೌಡ ಕನ್ನಯ, ಗುಲ್ಬರ್ಗಾ ಆಕಾಶವಾಣಿ ನಿರ್ದೇಶಕ ಡಾ| ಸದಾನಂದ ಪೆರ್ಲ, ಚಲನಚಿತ್ರ ನಿರ್ದೇಶಕ ಸೂರ್ಯೋದಯ ಪೆರಂಪಳ್ಳಿ ಉಪಸ್ಥಿತರಿದ್ದರು.
Related Articles
Advertisement
ಗೌರವಾರ್ಪಣೆಬಡಗನ್ನೂರು ಗ್ರಾ.ಪಂ. ಸದಸ್ಯೆ ಸುಶೀಲಾ, ಶಿಲಾ ಸ್ತಪತಿಗಳಾದ ಲಮಾಣಿ ಕುಬೇರಪ್ಪ ಹಾಗೂ ಕುಪ್ಪು ಸ್ವಾಮಿ ಅವರಿಗೆ ಗೌರವಾರ್ಪಣೆ ನಡೆಯಲಿದೆ. ಕೋಟ ಹಾಗೂ ಮಠಂದೂರು ಅವರನ್ನು ಈ ಸಂದರ್ಭ ಗೌರವಿಸಲಾಯಿತು. ಜಯಂತ ನಡುಬೈಲು ಮನವಿ ಓದಿದರು. ಸಂತೋಷ್ ಕುಮಾರ್ ಕೊಟ್ಟಿಂಜ ಸ್ವಾಗತಿಸಿದರು. ತಾಲೂಕು ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಕೆಡೆಂಜಿ ಪ್ರಸ್ತಾವನೆಗೈದರು. ಅರುಣ್ ಉಳ್ಳಾಲ ನಿರ್ವಹಿಸಿದರು.