Advertisement
ಪೊಲೀಸರಿಗೆ ವಸತಿ ಸಮುಚ್ಚಯ ನಿರ್ಮಿಸಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಪೊಲೀಸರ ಬೇಡಿಕೆಗೆ ಸ್ಪಂದಿಸಿದ್ದ ಸರಕಾರ ಪೊಲೀಸ್ ವಸತಿ ಸಮುಚ್ಚಯ ನಿರ್ಮಾಣಕ್ಕೆ ಹಸುರು ನಿಶಾನೆ ತೋರಿತ್ತು. 2016ರಲ್ಲಿ ಪೊಲೀಸ್ ವಸತಿ ಸಮುಚ್ಚಯದ ನಿರ್ಮಾಣ ಕೆಲಸ ಆರಂಭಿಸಲಾಗಿತ್ತು. ನಾಲ್ಕು ವರ್ಷದಲ್ಲಿ ಎರಡು ವಸತಿ ಸಮುಚ್ಚಯಗಳ ನಿರ್ಮಾಣ ಕಾಮಗಾರಿ ಮುಕ್ತಾಯಗೊಂಡಿದ್ದು, ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ಪೊಲೀಸರ ಕನಸು ನನಸಾದಂತಾಗಿದೆ. ವಸತಿ ಸಮುಚ್ಚಯವನ್ನು ಸೋಮವಾರ ಉದ್ಘಾಟಿಸಲಾಗಿದ್ದು, ಪೊಲೀಸರ ವಾಸಕ್ಕೆ ಹಸ್ತಾಂತರಿಸಲಾಗಿದೆ.
2 ಫ್ಲ್ಯಾಟ್‌ಗಳಲ್ಲಿ ತಲಾ 48 ಮನೆಗಳೊಂದಿಗೆ ಒಟ್ಟು 96 ಫ್ಲಾ ಟ್‌ಗಳನ್ನು ಈ ವಸತಿ ಸಮುಚ್ಚಯ ಹೊಂದಿದೆ. ಎರಡೂ ವಸತಿ ಸಮುಚ್ಚಯಗಳಲ್ಲಿ ನೆಲ ಮಹಡಿ ಮತ್ತು 5 ಮಹಡಿಗಳಿವೆ. 2 ಬಿಎಚ್‌ಕೆಯ ಕಟ್ಟಡದಲ್ಲಿ ಪ್ರತಿ ಮನೆಗೆ 2 ಬೆಡ್‌ರೂಂ, 1 ಕಿಚನ್, 1 ಹಾಲ್, ಟಾಯ್ಲೆಟ್, ಬಾತ್‌ರೂಂ ವ್ಯವಸ್ಥೆ ಇದೆ. ಎರಡು ಬೆಡ್‌ರೂಂಗಳ ಪೈಕಿ ಒಂದು ರೂಂನಲ್ಲಿ ಅಟ್ಯಾಚ್‌ಡ್ ಶೌಚಾಲಯ ವ್ಯವಸ್ಥೆ ಇದೆ. ಮೇಲಿನ ಮಹಡಿಗಳಿಗೆ ತೆರಳಲು ಲಿಫ್ಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಎನ್.ಆರ್. ಕನ್‌ಸ್ಟ್ರಕ್ಷನ್ಸ್ ಸಂಸ್ಥೆಯು ವಸತಿ ಸಮುಚ್ಚಯದ ನಿರ್ಮಾಣ ಕಾಮಗಾರಿಯನ್ನು ವಹಿಸಿಕೊಂಡಿತ್ತು. ಕೋಟಿ ಚೆನ್ನಯರ ಹೆಸರು
ಹಲವಾರು ವರ್ಷಗಳಿಂದ ಹಂಚಿನ ಮನೆಗಳಲ್ಲಿ ವಾಸಿಸುತ್ತಿದ್ದ ಪೊಲೀಸರಿಗೆ ಇನ್ನು ಅಪಾರ್ಟ್‌ಮೆಂಟ್ ವಾಸದ ಖುಷಿ. ಅಪಾರ್ಟ್‌ಮೆಂಟ್‌ಗೆ ಸತ್ಯ, ಧರ್ಮ, ನ್ಯಾಯಕ್ಕೆ ಹೆಸರಾದ ತುಳುನಾಡಿನ ಅವಳಿ ವೀರಪುರುಷರಾದ ಕೋಟಿ ಚೆನ್ನಯರ ಹೆಸರನ್ನು ಇಡಲಾಗಿದೆ.
Related Articles
ಪ್ರತಿಯೊಬ್ಬರಿಗೂ ಒಳ್ಳೆಯ ಮನೆಯಲ್ಲಿ ಜೀವಿಸಬೇಕೆಂಬ ಕನಸಿರುತ್ತದೆ. ಜನರಿಗೆ 24×7 ರಕ್ಷಣೆ ಕಲ್ಪಿಸುವ ಪೊಲೀಸರು ಮತ್ತು ಅವರ ಕುಟುಂಬದವರಿಗೂ ಉತ್ತಮ ಸೌಕರ್ಯಗಳು ಸಿಕ್ಕಿದಾಗ ಅವರ ಕೆಲಸದ ಉತ್ಸಾಹವೂ ಹೆಚ್ಚಾಗುತ್ತದೆ. ವಸತಿ ಸಮುಚ್ಚಯವಾಸದ ಬಗ್ಗೆ ಅವರ ಬಹುದಿನಗಳ ಕನಸು ಪ್ರಸ್ತುತ ನನಸಾಗಿದೆ. ಮುಂದೆಯೂ ಪೊಲೀಸರಿಗೆ ಉತ್ತಮ ಸೌಲಭ್ಯ ಕಲ್ಪಿಸಿಕೊಡುವಲ್ಲಿ ಸರಕಾರ ಬದ್ಧವಾಗಿದೆ.
- ಡಿ. ವೇದವ್ಯಾಸ ಕಾಮತ್, ಶಾಸಕರು
Advertisement