ಕೋಟೇಶ್ವರ: ಉಡುಪಿ ಜಿಲ್ಲಾ ಕಂಟ್ರಾಕ್ಟರ್ ಅಸೋಸಿಯೇಶನ್‌ಗೆ ಸ್ವಂತ ಕಟ್ಟಡ ನಿರ್ಮಿಸಲು ಯೋಗ್ಯವಾದ ಜಾಗವನ್ನು ಗುರುತಿಸಲಾಗುತ್ತದೆ ಎಂದು ಉಡುಪಿ ಜಿಲ್ಲಾ ಕಂಟ್ರಾಕ್ಟರ್ ಅಸೋಸಿಯೇಶನ್ ಅಧ್ಯಕ್ಷ ಉದಯ್ ಶೆಟ್ಟಿ ಮುನಿಯಾಲ್ ಹೇಳಿದರು.
ಕೋಟೇಶ್ವರದ ಅಂಕದಕಟ್ಟೆಯಲ್ಲಿನ ಸಹನಾ ಕನ್ವೆನ್ಶನ್‌ನಲ್ಲಿರುವ ಕೃಷ್ಣಾ ಸಭಾಭವನದಲ್ಲಿ ಸೆ.24ರಂದು ಸಂಜೆ ಮಣಿಪಾಲದ ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾದ ಯುನೈಟೆಡ್ ರೆಡಿಮಿಕ್ಸ್ ಕಾಂಕ್ರೆಟ್ ಕಂಪೆನಿಯ ಪ್ರಾಯೋಜಕತ್ವದಲ್ಲಿ ನಡೆದ ನೂತನ ಪದಾಧಿಕಾರಿಗಳ ಪರಿಚಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಸಂಘವು ಕ್ರೀಯಾಶೀಲವಾಗಿದ್ದು ಗುತ್ತಿಗೆದಾರರ ಸಮಸ್ಯೆಗಳಿಗೆ ಸ್ಪಂದಿಸುವ ನೆಲೆಯಲ್ಲಿ ಸೃಜನಶೀಲತೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಅವರು ಹೇಳಿದರು.
ಪ್ರಧಾನ ಕಾರ್ಯದರ್ಶಿ ರತ್ನಾಕರ ಶೆಟ್ಟಿ ಎಸ್., ಖಜಾಂಚಿ ಪ್ರಶಾಂತ ಮೊಳಹಳ್ಳಿ, ಯುನೈಟೆಡ್ ರೆಡಿಮಿಕ್ಸ್ ಕಾಂಕ್ರೆಟ್ ಕಂಪೆನಿಯ ಪಾಲುದಾರರಾದ ಸುರೇಂದ್ರ ಶೆಟ್ಟಿ ಅಂಕದಕಟ್ಟೆ, ರೋವನ್ ಡಿಕೋಸ್ಟಾ, ಕೆ. ಸುಖೀ ಶೆಟ್ಟಿ, ಅಬ್ದುಲ್ ಸತ್ತಾರ್, ಅಬ್ದುಲ್ ಶಕೀಲ್, ಉಡುಪಿ ಕಂಟ್ರಾಕ್ಟರ್ ಅಸೋಸಿಯೇಶನ್‌ಗೌರವಾಧ್ಯಕ್ಷ ಅಣ್ಣಯ್ಯ ನಾಯಕ್ ಪಟ್ಲ, ಉಡುಪಿ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ, ಸುಧೀರ್ ಕುಮಾರ್ ಮಾರ್ಕೋಡು ಉಪಸ್ಥಿತರಿದ್ದರು.
ಯುನೈಟೆಡ್ ರೆಡಿಮಿಕ್ಸ್ ಕಾಂಕ್ರೆಟ್ ಕಂಪನಿಯ ಪಾಲುದಾರರಾದ ಸುರೇಂದ್ರ ಶೆಟ್ಟಿ ಅಂಕದಕಟ್ಟೆ ಮಾತನಾಡಿದರು.
ಜಿಲ್ಲಾ ಕಂಟ್ರಾಕ್ಟರ್ ಅಸೋಸಿಯೇಶನ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಉದಯ ಶೆಟ್ಟಿ ಮುನಿಯಾಲ್ ಅವರನ್ನು ಕುಂದಾಪುರ ಹಾಗೂ ಉಡುಪಿ ಅಸೋಸಿಯೇಶನ್ ಮತ್ತು ಯುನೈಟೆಡ್ ರೆಡಿಮಿಕ್ಸ್ ಕಂಪೆನಿಯ ಪಾಲುದಾರರು ಸಮ್ಮಾನಿಸಿದರು.
ಯುನೈಟೆಡ್ ರೆಡಿಮಿಕ್ಸ್ ಕಂಪೆನಿಯ ಉತ್ಪನ್ನಗಳ ಬಗ್ಗೆ ಡಿಸ್‌ಪ್ಲೇ ಮೂಲಕ ಸಭೆಯಲ್ಲಿ ಗುತ್ತಿಗೆದಾರರಿಗೆ ವಿವರಿಸಲಾಯಿತು. ಕೌಶಿಕ ಯಡಿಯಾಳ ನಿರೂಪಿಸಿ, ವಂದಿಸಿದರು.