Advertisement

ಕೋಟಿಲಿಂಗೇಶ್ವರ ದೇಗುಲ ಕೊಡಿ ಹಬ್ಬ: ಕೋವಿಡ್‌-19ರ ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ

08:30 PM Nov 28, 2020 | mahesh |

ಕೋಟೇಶ್ವರ: ಇಲ್ಲಿನ ಶ್ರೀ ಕೋಟಿಲಿಂಗೇಶ್ವರ ದೇಗುಲದ ಕೊಡಿ ಹಬ್ಬ ನ. 30ರಂದು ನಡೆಯಲಿದೆ. ಈ ಬಾರಿ ಕೋವಿಡ್‌-19ರ ಕಾನೂನಿನಂತೆ ಸರಳ ಉತ್ಸವ ಆಚರಣೆಗೆ ಅವಕಾಶ ಕಲ್ಪಿಸಲಾಗಿದೆ, ಹಾಗಾಗಿ ಉತ್ಸವಕ್ಕೆ ಆಗಮಿಸುವ ಭಕ್ತರಿಗೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ.

Advertisement

ಹಬ್ಬಕ್ಕೆ ಮಾರ್ಗ ಸೂಚಿ
65 ವರ್ಷಕ್ಕೆ ಮೇಲ್ಪಟ್ಟವರು ಹಾಗೂ 10 ವರ್ಷದ ಒಳಗಿನ ಮಕ್ಕಳು ಅಲ್ಲದೇ ಗರ್ಭಿಣಿಯರು ಮನೆಯಲ್ಲೇ ಕುಳಿತು
ದೃಶ್ಯ ಮಾಧ್ಯಮದ ಮೂಲಕ ಬಿತ್ತರಿಸುವ ಕೊಡಿ ಹಬ್ಬದ ನೇರ ಪ್ರಸಾರ ವೀಕ್ಷಿಸ ಬಹುದು. ಭಕ್ತರು ಹಣ್ಣು ಕಾಯಿಯನ್ನು ತಂದು ದೇಗುಲದಲ್ಲಿ ಮಾತ್ರ ಸಮರ್ಪಿಸಬಹುದಾಗಿದ್ದು, ರಥೋತ್ಸವದಲ್ಲಿ ರಥಕ್ಕೆ ಸಲ್ಲಿಸುವ ಹಣ್ಣುಕಾಯಿ ಸೇವೆಗೆ ಅವಕಾಶವಿರುವು ದಿಲ್ಲ, ದೇಗುಲವನ್ನು ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಒಳ ಪ್ರವೇಶಿಸಬೇಕು.

ಜಾತ್ರೆಯ ಅನ್ನಸಂತರ್ಪಣೆ ರದ್ದುಗೊಳಿಸಲಾಗಿದೆ. ಕೋಟಿತೀರ್ಥ ಸರೋವರದಲ್ಲಿ ತೀರ್ಥಸ್ನಾನ, ಸಂಪ್ರೋಕ್ಷಣೆ ಇತ್ಯಾದಿಗಳಿಗೆ ಅವಕಾಶವಿರುವುದಿಲ್ಲ. ರಥಾರೋಹಣ, ರಥಾವರೋಹಣಕ್ಕೆ ಅಗತ್ಯವಿರುವಷ್ಟು ಮಂದಿಗೆ ಸೀಮಿತಗೊಳಿಸಲಾಗಿದ್ದು ಪಾಸ್‌ ಹೊಂದಿದ ಭಕ್ತರು ಮಾತ್ರ ಭಾಗವಹಿಸಲು ಅವಕಾಶವಿದೆ, ದೇವರ ದರ್ಶನಕ್ಕೆ ಆಗಮಿಸುವ ಭಕ್ತರು ಪೂರ್ವ ದಿಕ್ಕಿನ ಮಹಾದ್ವಾರದಿಂದ ಪ್ರವೇಶಿಸಿ ಮುಖ್ಯ ಪ್ರವೇಶ ದ್ವಾರದಲ್ಲಿ ಇರಿಸಲಾದ ಸ್ಯಾನಿಟೈಸರ್‌ ಬಳಸಿ ಬಲ ಭಾಗದಲ್ಲಿರುವ ಸೇವಾ ರಶೀದಿ ಕೌಂಟರ್‌ ಮತ್ತು ಹಣ್ಣು ಕಾಯಿ ಮಾಡುವ ಸ್ಥಳದಲ್ಲಿ ಸೇವೆ ಸಲ್ಲಿಸಿ ಆಗ್ನೇಯ ಮೂಲೆಯಲ್ಲಿರುವ ದ್ವಾರದ ಮೂಲಕ ದೇಗುಲದ ಒಳಸುತ್ತು ಪ್ರವೇಶಿಸಿ ದೇವರ ದರ್ಶನ ಪಡೆದು ಪೂರ್ವ ದಿಕ್ಕಿನ ಬಾಗಿಲಿನಿಂದ ಹೊರಹೋಗಲು ವ್ಯವಸ್ಥೆ ಮಾಡಲಾಗಿದೆ. ಸರಕಾರದ ಆದೇಶ ಪ್ರಕಾರ ಸರಳವಾಗಿ ರಥೋತ್ಸವ ನಡೆಯಲಿದೆ ಎಂದು ದೇಗುಲದ ಆಡಳಿತ ಸಮಿತಿಯವರು ತಿಳಿಸಿದ್ದಾರೆ.

ದೇಗುಲ ಅಲಂಕಾರ
ದೇಗುಲದ ಹೊರ ಆವರಣ ಸುಂದರವಾಗಿ ಅಲಂಕಾರಗೊಂಡಿದ್ದು, ಒಳಪೌಳಿ ಹೂವಿನಿಂದ ಅಲಂಕೃತಗೊಂಡಿದೆ. ರಥದ ಅಲಂಕಾರ ಭರದಿಂದ ಸಾಗಿದೆ. ರಥಬೀದಿ ಹಾಗೂ ಪೇಟೆಯಲ್ಲಿ ದೀಪಾಲಂಕಾರಗೊಳಿಸ ಲಾಗಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಈ ಬಾರಿ ಸಾಂಸ್ಕೃತಿಕ ಹಾಗೂ
ಇನ್ನಿತರ ಕಾರ್ಯಕ್ರಮ ರದ್ದುಗೊಳಿಸಲಾ ಗಿದೆ. ಅಂಗಡಿ ಮುಂಗಟ್ಟುಗಳಿಗೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಪೇಟೆಯಲ್ಲಿ ಹಬ್ಬದ ಕಳೆ ಒಂದಿಷ್ಟು ಕುಂದಿದೆ. ಹಬ್ಬದ ಪೂರ್ವಭಾವಿಯಾಗಿ ತೆಂಕು ಹಾಗೂ ಬಡಗು ಕಟ್ಟೆ ಪೂಜೆಗಳು ದೇಗುಲದ ತಂತ್ರಿ ಪ್ರಸನ್ನ ಕುಮಾರ್‌ ಐತಾಳ ಅವರ ನೇತೃತ್ವದಲ್ಲಿ ಸರಳವಾಗಿ ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next