Advertisement

koteshwara; ಕೋಟೇಶ್ವರದಲ್ಲಿ ಜಿಲ್ಲೆಯ ಪ್ರಥಮ ವಿದ್ಯುತ್‌ ಚಿತಾಗಾರ

06:06 PM Aug 09, 2023 | Team Udayavani |

ಕೋಟೇಶ್ವರ: ಉಡುಪಿ ಜಿಲ್ಲೆಯಲ್ಲೇ ಪ್ರಥಮವಾಗಿ ಕೋಟೇಶ್ವರದ ಹಿಂದೂ ರುದ್ರಭೂಮಿಯಲ್ಲಿನ ವಿದ್ಯುತ್‌ ಚಿತಾಗಾರ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಲೋಕಾರ್ಪಣೆಗೆ ಸಿದ್ಧವಾಗಿದೆ.

Advertisement

ವಿಧಾನ ಪರಿಷತ್‌ ಮಾಜಿ ಸಭಾಪತಿ ಪ್ರತಾಪ್‌ ಚಂದ್ರ ಶೆಟ್ಟಿಯವರು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಡಿ ವಿದ್ಯುತ್‌ ಚಿತಾಗಾರ ನಿರ್ಮಾಣಕ್ಕೆ 71 ಲಕ್ಷ ರೂ. ಬಿಡುಗಡೆ ಗೊಳಿಸಿದ್ದರು. ಅವರ ಪ್ರಯತ್ನದ ಫಲವಾಗಿ ವಿದ್ಯುತ್‌ ಚಿತಾಗಾರ ನಿರ್ಮಾಣ ಕಾಮಗಾರಿ ಹಂತ-ಹಂತವಾಗಿ ರಂಭಗೊಂಡಿದ್ದು, ಬಹುತೇಕ ನಿರ್ಮಾಣದ ಕೊನೆಯ ಹಂತದಲ್ಲಿದೆ. ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು 25 ಲ. ರೂ. ಬಿಡುಗಡೆಗೊಳಿಸಿದ್ದಾರೆ.

ಉಡುಪಿ ನಿರ್ಮಿತಿ ಕೇಂದ್ರದಿಂದ ಕಾಮಗಾರಿ ಆರಂಭದ ಹಂತದಲ್ಲಿ ಗುತ್ತಿಗೆದಾರರೋರ್ವರು ಕಾಮಗಾರಿ ಉಸ್ತುವಾರಿ ವಹಿಸಿದ್ದರು. ತದನಂತರ ಉಡುಪಿ ನಿರ್ಮಿತಿ ಕೇಂದ್ರದ ವತಿಯಿಂದ ಇದರ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಮಂದಗತಿ
ಯಲ್ಲಿ ಸಾಗುತ್ತಿರುವ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕೋಟೇಶ್ವರ ಗ್ರಾ.ಪಂ. ಪ್ರಯತ್ನ ಕೋಟೇಶ್ವರ ಗ್ರಾ.ಪಂ. ವತಿಯಿಂದ ಕಾಮಗಾರಿಯ ಅನುಷ್ಠಾನಗೊಳಿಸಲು ಅಂದಾಜು ಪಟ್ಟಿ ತಯಾರಿಸಿ, ವಿಧಾನಪರಿಷತ್‌ ಸದಸ್ಯ ಹಾಗೂ ಸಭಾಪತಿಯಾಗಿದ್ದ, ಪ್ರತಾಪ್‌ ಚಂದ್ರಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಮಾಜಿ ಗ್ರಾ.ಪಂ. ಅಧ್ಯಕ್ಷರು, ಸದಸ್ಯರ ಸಹಿತ ಹಾಲಿ ಅಧ್ಯಕ್ಷ ಕೃಷ್ಣ ಗೊಲ್ಲ ಹಾಗೂ ಸದಸ್ಯರು, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಆಡಳಿತ ಮಂಜೂರಾತಿಗೆ ಶ್ರಮಿಸಿದ್ದರು. ಜಿಲ್ಲಾಧಿಕಾರಿಗಳು, ಎಸಿ ಹಾಗೂ ತಹಶೀಲ್ದಾರರು ಈ ಪ್ರಸ್ತಾವನೆಗೆ ಅನುಮತಿ ನೀಡಿದ್ದರು.

1.05 ಎಕ್ರೆ ವಿಸ್ತೀರ್ಣದ ವಿಶಾಲ ಜಾಗ ಕೋಟೇಶ್ವರ ರಾ.ಹೆದ್ದಾರಿಯ ಸನಿಹದಲ್ಲೇ ಒಂದು ಎಕ್ರೆಗೂ ಮಿಕ್ಕಿ ಜಾಗದಲ್ಲಿ ಕಟ್ಟಿಗೆಯಿಂದ ಸುಡುವ ಚಿತಾಗಾರ, ಹಿಂದೂ ಸಮಾಜದ ಕೆಲವು ಶವ ಹೂಳುವ ಪದ್ಧತಿಯ ವಿಧಿವಿಧಾನ ಅನುಸರಿಸುವ ಪ್ರತ್ಯೇಕ ಜಾಗ ಸಹಿತ ವಿದ್ಯುತ್‌ ಚಿತಾಗಾರ ಕಾಮಗಾರಿ ಆರಂಭಗೊಂಡಿರುವುದು ಜಿಲ್ಲೆಯಲ್ಲೇ ಪ್ರಥಮ ಹಾಗೂ ವಿಶೇಷವಾಗಿದೆ.

Advertisement

ಮೂರು ಪ್ರತ್ಯೇಕ ಶವಸಂಸ್ಕಾರದ ವ್ಯವಸ್ಥೆ ಕೋಟೇಶ್ವರ ಗ್ರಾ.ಪಂ.ನ ಮಾಜಿ ಅಧ್ಯಕ್ಷರು, ಸದಸ್ಯರ ಸಹಿತ ಪಿಡಿಒ ಅವರು ವಿದ್ಯುತ್‌ ಚಿತಾಗಾರ ನಿರ್ಮಾಣದ ಬಗ್ಗೆ ವಿಧಾನ ಪರಿಷತ್‌ ಮಾಜಿ ಸಭಾಪತಿ ಪ್ರತಾಪ್‌ ಚಂದ್ರ ಶೆಟ್ಟಿಯವರಿಗೆ ಮನವಿ ಸಲ್ಲಿಸಿ ಅನುದಾನ ಬಿಡುಗಡೆಗೊಳಿಸುವಂತೆ ವಿನಂತಿಸಿದ್ದರು.ಅವರ ಪ್ರಯತ್ನದ ಫಲವಾಗಿ 71 ಲ.ರೂ. ಅನುದಾನ ಬಿಡುಗಡೆಯಾಗಿದೆ. ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಸಹ 25 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿದ್ದಾರೆ. ಒಂದೇ ಸೂರಿನಡಿ ಮೂರು ಪ್ರತ್ಯೇಕ ಶವಸಂಸ್ಕಾರದ ವ್ಯವಸ್ಥೆ ಭರದಿಂದ ಸಿದ್ಧಗೊಳ್ಳುತ್ತಿದೆ.
ಕೃಷ್ಣ ಗೊಲ್ಲ, ಅಧ್ಯಕ್ಷರು, ಕೋಟೇಶ್ವರ ಗ್ರಾ.ಪಂ.

*ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next