Advertisement

ಕುಣಿಗಲ್‌ನಲ್ಲಿ ಸೊಳ್ಳೆ ಉಪಟಳ, ರೋಗ ಭೀತಿ ನಿಯಂತ್ರಿಸುವಲ್ಲಿ ಪುರಸಭೆ ವಿಫಲ : ಕೋಟೆ ನಾಗಣ್ಣ

07:31 PM Dec 19, 2021 | Team Udayavani |

ಕುಣಿಗಲ್ : ಕುಣಿಗಲ್ ಪಟ್ಟಣದಲ್ಲಿ ಸೊಳ್ಳೆ ವಿಪರೀತವಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದ್ದು, ಫಾಗಿಂಗ್ ಯಂತ್ರ ಬಳಸಿ, ಪಾಗಿಂಗ್ ಸಿಂಪಡಿಸುವಲ್ಲಿ ಪುರಸಭಾ ಆಡಳಿತ ವಿಫಲವಾಗಿದೆ ಎಂದು ಪುರಸಭಾ ಸದಸ್ಯ ಕೋಟೆ ನಾಗಣ್ಣ ಆರೋಪಿಸಿದ್ದಾರೆ.

Advertisement

ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಕಳೆದ ಹಲವು ತಿಂಗಳಿಂದ ಪಟ್ಟಣದಲ್ಲಿ ಉತ್ತಮ ಮಳೆಯಾಗಿದ್ದರಿಂದ, ಸ್ಲಂ ಪ್ರದೇಶದಲ್ಲಿ ಗಿಡ, ಗೆಂಟೆಗಳು ಬೆಳೆದು, ಹಾಗೂ ಕಸ ಕೊಳೆತಿದ್ದರಿಂದ ಸೊಳ್ಳೆಗಳು ಉತ್ತಪ್ಪತ್ತಿ ಹೆಚ್ಚಾಗಿದೆ, ಪಟ್ಟಣದ ಕೋಟೆ, ಗುಜ್ಜಾರಿ ಮೊಹಲ್ಲಾ, ಸೇರಿದಂತೆ ವಿವಿಧ ಬಡಾವಣೆಗಳು ಸ್ಲಂ ನಿಂದ ಕೂಡಿದ್ದು, ಈ ಭಾಗದಲ್ಲಿ ಸೊಳ್ಳೆಗಳ ಉತ್ಪಾದನೆ ಹೆಚ್ಚಾಗಿದೆ, ಹಾಗೂ ಸಣ್ಣ ವಯಸ್ಸಿನ ಮಕ್ಕಳಿಗೆ ಸೊಳ್ಳೆಗಳು ಕಚ್ಚುವುದರಿಂದ ಮಲೇರಿಯಾ, ಡೆಂಗಿ ಸೇರಿದಂತೆ ವಿವಿಧ ಜ್ವರಗಳು ಮಕ್ಕಳಲ್ಲಿ, ವಯಸ್ಕರರಲ್ಲಿ ಬರುವ ಸಾಧ್ಯತೆ ಇದ್ದು, ಈಗಾಗಲೇ ಹಲವು ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ,

ಸಾಂಕ್ರಾಮಿಕ ಖಾಯಿಲೆಯಾದ ಮಲೇರಿಯಾ ರೋಗವು ಮನುಷ್ಯನಿಂದ ಮನುಷ್ಯನಿಗೆ ಹರಡುವ ಕಾಯಿಲೆಯಾಗಿದ್ದು ಈ ರೋಗವು ಸೊಳ್ಳೆ ಕಚ್ಚುವುದರಿಂದ ಬರುತ್ತದೆ, ಪಟ್ಟಣದಲ್ಲಿ ಇಷ್ಟೇಲ್ಲಾ ಸಮಸ್ಯೆಗಳಿದ್ದರು ಅಧಿಕಾರಿಗಳು ಫಾಗಿಂಗ್ ಯಂತ್ರ ಬಳಸಿ, ಪಾಗಿಂಗ್ ಸಿಂಪಡಿಸಿ ಸೊಳ್ಳೆಗಳ ನಿಯಂತ್ರಿಸುವಲ್ಲಿ ವಿಫಲಗೊಂಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಹಗಲು, ರಾತ್ರಿಯಲ್ಲಿ ಸೊಳ್ಳೆಕಾಟ : ಸೊಳ್ಳೆಗಳು ವಿಫರಿತವಾಗಿರುವುದರಿಂದ ಹಗಲು, ರಾತ್ರಿ ವೇಳೆಯಲ್ಲೇ ಮನುಷ್ಯನ ಮೇಲೆ ದಾಳಿ ಮಾಡುತ್ತಿವೆ, ಇದರಿಂದ ಪಟ್ಟಣದ ನಾಗರೀಕರು ರೋಸಿ ಹೊಗಿದ್ದು, ನೆಮ್ಮದಿ ಬದುಕಿಗೆ ಸಂಚಕಾರ ಉಂಟಾಗಿದೆ, ಶ್ರೀಮಂತರು ಮನೆಗಳಲ್ಲಿ ಸೊಳ್ಳೆ ಪರದೆ ಸೇರಿದತೆ ಇತರೆ ಕ್ರಮಿನಾಶಕವನ್ನು ಬಳಸಿಕೊಂಡು ಸೊಳ್ಳೆಯಿಂದ ನಿಯಂತ್ರಿಸಿಕೊಳ್ಳುತ್ತಿದ್ದಾರೆ ಆದರೆ ಮಧ್ಯಮ ಹಾಗೂ ಬಡವರು ಏನು ಮಾಡಲು ಹಾಗುತ್ತದೆ, ಇದನ್ನು ಅಧಿಕಾರಿಗಳು ಅರ್ಥಯಿಸಿಕೊಳ್ಳಬೇಕು ಕೂಡಲೇ ಸೊಳ್ಳೆ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ನಾಗರೀಕರೊಂದಿಗೆ ಗೂಡಿ ಪುರಸಭಾ ಕಚೇರಿ ಬಳಿ ಪ್ರತಿಭಟನೆ ನಡೆಸುವುದ್ದಾಗಿ ಕೋಟೆ ನಾಗಣ್ಣ ಎಚ್ಚರಿಕೆ ನೀಡಿದ್ದಾರೆ,

Advertisement

Udayavani is now on Telegram. Click here to join our channel and stay updated with the latest news.

Next