Advertisement

ಕೋಟೆ: ಅವ್ಯವಸ್ಥೆ ರಸ್ತೆ ಕಾಮಗಾರಿಗೆ ಮರು ಡಾಮರು

11:38 PM Jan 17, 2021 | Team Udayavani |

ಕಟಪಾಡಿ,:  ಕೋಟೆ ಗ್ರಾ.ಪಂ. ವ್ಯಾಪ್ತಿಯಕೋಟೆ ಬೀಡುವಿನಿಂದ  ಶ್ರೀ  ದುರ್ಗಾಪರಮೇಶ್ವರೀ ಗುಡಿವರೆಗಿನ ಅವ್ಯಸ್ಥೆಯಿಂದ ಕೂಡಿದ ರಸ್ತೆ ಕಾಮಗಾರಿಗೆ ಮರು ಡಾಮರು ನಡೆಸಲಾಯಿತು.

Advertisement

ಈ ಭಾಗದಲ್ಲಿ ಲೋಕೋಪಯೋಗಿ ಇಲಾಖೆ ಯಡಿ ಈ ಕಾಮಗಾರಿ ನಿರ್ವಹಿಸಲಾಗುತ್ತಿದ್ದು ಗುತ್ತಿಗೆದಾರರು ಕಳಪೆ ಮಟ್ಟದ ಕಾಮಗಾರಿ  ನಡೆಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದರು. ನಿರ್ಮಿಸಲಾದ ಚರಂಡಿಗಿಂತ ತಗ್ಗು ಮಟ್ಟದಲ್ಲಿ  ಡಾಮರು ಹಾಕಿ ಕ್ರಶರ್‌ ಹುಡಿ ಫಿನಿಶಿಂಗ್‌ ನಡುವೆ ಡಾಮರು ರಸ್ತೆಯಲ್ಲಿಯೂ ಬಿರುಕು  ಕಂಡುಬಂದಿದ್ದು ಇದರ ಗುಣಮಟ್ಟದ ಬಗ್ಗೆ ಗ್ರಾಮಸ್ಥರು ಸಂಶಯ ವ್ಯಕ್ತಪಡಿಸಿದ್ದು, ಮಳೆಗಾಲದಲ್ಲಿ ನೀರು ಚರಂಡಿಗೆ ಇಳಿಯುವುದಿಲ್ಲ, ಪೈಪ್‌ ಅಳವಡಿಕೆಯ ವ್ಯತ್ಯಾಸವಾಗಿದೆ ಎಂದು ಅಸಹನೆ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಉದಯವಾಣಿಯು ವರದಿ  ಪ್ರಕಟಿಸಿದ್ದು, ಸ್ಪಂದಿಸಿದ ಸಂಬಂಧಪಟ್ಟ ಅಧಿಕಾರಿಗಳ ಸೂಚನೆಯ ಮೇರೆಗೆ ಮರುಡಾಮರು ಹಾಗೂ ಅಳವಡಿಸಲಾದ ಪೈಪ್‌ ತೆರವು ಮಾಡಲಾಗಿದೆ.  ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next