Advertisement
ಗುರುವಾರ ಇಲಾಖೆಯ ಪ್ರಗತಿ ಪರಿಶೀಲನೆ ನಂತರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನ 24000 ವಿದ್ಯಾರ್ಥಿನಿಯರಿಗೆ ಓಬವ್ವ ಆತ್ಮರಕ್ಷಣೆ ಕಲೆ ತರಬೇತಿ ನೀಡಲಾಗುತ್ತಿತ್ತು. ಪ್ರಸಕ್ತ ಸಾಲಿನಲ್ಲಿ ಪ್ರಿ ಮೆಟ್ರಿಕ್ ವಿದ್ಯಾರ್ಥಿನಿಯರು ಸೇರಿ ಒಟ್ಟು ಅಂದಾಜು 50,000 ವಿದ್ಯಾರ್ಥಿನಿಯರು ತರಬೇತಿ ಪಡೆಯಲಿದ್ದಾರೆ. ಇದಕ್ಕಾಗಿ ಹೆಚ್ಚುವರಿ 5 ಕೋಟಿ ಖರ್ಚು ಆಗಲಿದೆ.
Related Articles
Advertisement
ಅಲೆಮಾರಿ ಮತ್ತು ಅರಲೆವಾರಿ ಜನಾಂಗದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯಕ್ಕಾಗಿ 9 ವಿದ್ಯಾರ್ಥಿ ನಿಲಯಗಳನ್ನು ಇಲಾಖೆಯಿಂದ ಮಂಜೂರು ಮಾಡಲಾಗಿದೆ. ಇದಕ್ಕೆ 30 ಕೋಟಿ ವೆಚ್ಚವಾಗಲಿದೆ. ಕನಕದಾಸರ ಹೆಸರಿನಲ್ಲಿ 50 ಹಾಸ್ಟೆಲ್‌ಗಳನ್ನು 3.5 ಕೋಟಿ ವೆಚ್ಚದಲ್ಲಿ ಈ ಬಾರಿ ಆಯ್ಕೆ ಮಾಡಿದ್ದು, 165 ಕೋಟಿ ವೆಚ್ಚವಾಗಲಿದೆ. ಮೆಟ್ರಿಕ್ ನಂತರದ ಮತ್ತು ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ಜಮಖಾನ, ಬೆಡ್‌ಶೀಟ್, ಹೊದಿಕೆ, ದಿಂಬುಗಳನ್ನು ಸರಬರಾಜು ಮಾಡಲು 16 ಕೋಟಿ ಬಿಡುಗಡೆ ಮಾಡಲಾಗುವುದು, ಹಾಗೂ ಒಂದು ತಿಂಗಳಲ್ಲಿ ಸರಬರಾಜು ಮಾಡಲಾಗುವುದು ಎಂದು ಹೇಳಿದರು.
ತಿಂಗಳಾಂತ್ಯಕ್ಕೆ ವಿನಯ್ ಸಾಮರಸ್ಯ ಯೋಜನೆ:
ವಿನಯ ಸಾಮರಸ್ಯ ಯೋಜನೆಯನ್ನು ಈ ತಿಂಗಳಲ್ಲಿ ಮುಖ್ಯಮಂತ್ರಿಗಳಿಂದ ಉದ್ಘಾಟನೆ ಮಾಡುತ್ತಾರೆ. ಸಮಾಜ ಹಾಗೂ ಮಠಾಧೀಶರ ಸಹಕಾರ ಪಡೆದು ಪ್ರತಿ ಗ್ರಾಮದಲ್ಲಿ ಸವರ್ಣೀಯರು ಮತ್ತು ದಲಿತರ ನಡುವೆ ಸಹಬಾಳ್ವೆಯ ಜೀವನಕ್ಕೆ ಪೂರಕವಾಗಿ ಜನ ಜಾಗೃತಿ ಮೂಡಿಸಲಾಗುವುದು. ಯಾವುದೇ ಕಾರಣಕ್ಕೂ ಕೂಡ ಪರಿಶಿಷ್ಟ ಜಾತಿಯವರಿಗೆ ಆಸ್ಪೃಶ್ಯತೆ ಆಚರಣೆಗೆ ಅವಕಾಶ ನೀಡದಿರುವುದು ಜಿÇÉಾಡಳಿತದ ಜವಾಬ್ದಾರಿ ಇದೆ. ಯಾದಗಿರಿ ಜಿಲ್ಲೆಯ ಸುರಪುರ ಮಲ್ಲಿಹಾಳ ಗ್ರಾಮದ ದೇವಸ್ಥಾನ ಬಾಗಿಲು ಮುಚ್ಚಿರುವ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಮಾಹಿತಿ ಪಡೆದು ದೇವಸ್ಥಾನದ ಬಾಗಿಲು ತೆರೆಯುವ ಕೆಲಸ ಮಾಡುತ್ತೇವೆ ಎಂದರು.
ಚುನಾವಣೆ ಬಂದಾಗ ಗುಡುಗು, ಸಿಡಿಲು ಸಾಮಾನ್ಯ: ಕೋಟ ಶ್ರೀನಿವಾಸ ಪೂಜಾರಿ ಪಠ್ಯ ಪುಸ್ತಕ ಪರಿಷ್ಕರಣೆ ವಿರೋಧಿಸಿ ನಡೆಯುತ್ತಿರುವ ಹೋರಾಟ ಚುನಾವಣೆ ಬಂದಾಗ ಗುಡುಗು ಸಿಡಿಲು ಸಾಮಾನ್ಯ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದ್ದಾರೆ.
ಹೊಸದಾಗಿ ಅಧಿಕಾರಕ್ಕೆ ಬಂದಾಗ ಸರ್ಕಾರಗಳು ಕೆಲವು ವಿಷಯಗಳನ್ನು ಪಠ್ಯದಲ್ಲಿ ಸೇರಿಸುವುದು ಸಾಮಾನ್ಯ. ಕೆಲವು ಸಾಹಿತಿಗಳು ತಮ್ಮ ಪಠ್ಯವನ್ನು ವಾಪಸ್ ಪಡೆಯುವುದಾಗಿ ಮಾಧ್ಯಮಗಳಿಗೆ ಪತ್ರ ಬಿಡುಗಡೆ ಮಾಡುತ್ತಿದ್ದಾರೆ. ವಾಸ್ತವವಾಗಿ ಅವರ ಪಠ್ಯಗಳೇ ಪುಸ್ತಕದಲ್ಲಿ ಇಲ್ಲ. ನಾರಾಯಣಗುರು, ಭಗತ್ ಸಿಂಗ್ ಅವರ ಪಾಠವನ್ನು ತೆಗೆದು ಹಾಕಲಾಗಿದೆ ಎಂದು ಆರೋಪಿಸಿದರು. ಯಾವುದನ್ನೂ ತೆಗೆದಿಲ್ಲ. ಸಾಹಿತಿಗಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿ ರಾಜಿನಾಮೆ ನೀಡಿದ್ದಾರೆ. ಅದಕ್ಕೆ ಮುಖ್ಯಮಂತ್ರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ ಎಂದರು.